Poonch Encounter: ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಉಗ್ರರ ಗುಂಡೇಟಿನಿಂದ ಸೇನಾ ಅಧಿಕಾರಿ, ನಾಲ್ವರು ಯೋಧರು ಸಾವು
Indian Army: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ಉಗ್ರರು ಮತ್ತು ಸೇನಾಪಡೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಇದರಲ್ಲಿ ಸೇನೆಯ ಒಟ್ಟು ಐವರು ಸಾವನ್ನಪ್ಪಿದ್ದಾರೆ.
ಶ್ರೀನಗರ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಯ ಸಿಬ್ಬಂದಿ ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಕಿರಿಯ ನಿಯೋಜಿತ ಅಧಿಕಾರಿ (ಜೆಸಿಒ) ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಇಂದು ಬೆಳಗ್ಗೆಯಿಂದ ಉಗ್ರರು ಮತ್ತು ಸೇನಾಪಡೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಇದರಲ್ಲಿ ಸೇನೆಯ ಒಟ್ಟು ಐವರು ಸಾವನ್ನಪ್ಪಿದ್ದಾರೆ.
ಪೂಂಚ್ ಜಿಲ್ಲೆಯ ಡಿಕೆಜಿ ಬಳಿ ಇರುವ ಗ್ರಾಮವೊಂದರಲ್ಲಿ ಮುಂಜಾನೆಯಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಗುಪ್ತಚರ ಇಲಾಖೆಯಿಂದ ಆ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಯೋಧರು ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಎನ್‌ಕೌಂಟರ್ ಕಾರ್ಯಾಚರಣೆ ನಡೆಸಲಾಗಿತ್ತು. ಆಗ ಉಗ್ರರ ಗುಂಡೇಟಿಗೆ ಸೇನಾ ಅಧಿಕಾರಿ ಸೇರಿದಂತೆ ಐವರು ಹುತಾತ್ಮರಾಗಿದ್ದಾರೆ.
Five Army personnel killed in gunfight with terrorists during anti-insurgency operation in J-K’s Poonch: Officials
— Press Trust of India (@PTI_News) October 11, 2021
ಭಾರತೀಯ ಯೋಧರು ಶೋಧ ಕಾರ್ಯ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಕಿರಿಯ ನಿಯೋಜಿತ ಅಧಿಕಾರಿ ಹಾಗೂ ನಾಲ್ವರು ಸೈನಿಕರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳಗೆ ನುಸುಳಿದ್ದ ಉಗ್ರರ ಮೇಲೆ ಗುಂಡಿನ ದಾಳಿ ನಡೆಸುವಾಗ ಉಗ್ರರ ಗುಂಡೇಟಿಗೆ ಐವರು ಯೋಧರು ಬಲಿಯಾಗಿದ್ದಾರೆ.
Saddened to hear about five Indian Army Jawans including a JCO killed in action with terrorists at the LoC during an anti-insurgency operation in J-K’s #Poonch today. I express my sincere condolences to the bereaved families.
— Aslam Shaikh, INC ?? (@AslamShaikh_MLA) October 11, 2021
ಇದರ ಜೊತೆಗೆ ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿ ಕಾಶ್ಮೀರದ ಪೊಲೀಸರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇಂದು ಮುಂಜಾನೆ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್ ಮೂಲಕ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಎನ್ಕೌಂಟರ್ನಲ್ಲಿ ಉಗ್ರ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಸಂಘಟನೆಯ ಉಗ್ರ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಆತ ಬಂಡಿಪೊರದಲ್ಲಿ ನಡೆದ ನಾಗರಿಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದಲ್ಲಿ ಪೊಲೀಸರಿಂದ ಎಲ್ಇಟಿ ಉಗ್ರನ ಎನ್‌ಕೌಂಟರ್
ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ: ಉಗ್ರರ ನಿಗ್ರಹಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಅಮಿತ್ ಶಾ
Published On - 2:33 pm, Mon, 11 October 21