ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಮಗನ ಸರಳ ವಿವಾಹ; ಮದುವೆಗೆ ಗೈರಾದ ನವಜೋತ್ ಸಿಂಗ್ ಸಿಧು

TV9 Digital Desk

| Edited By: Sushma Chakre

Updated on:Oct 11, 2021 | 4:34 PM

ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ತಮ್ಮ ಮಗನ ಮದುವೆಯಲ್ಲಿ ಸರಳವಾದ ಉಡುಗೆ ಧರಿಸಿ, ಹೆಂಡತಿ, ಮಗ-ಸೊಸೆ ಜೊತೆ ನೆಲದ ಮೇಲೆ ಕುಳಿತು ಸರಳವಾಗಿ ಊಟ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.

ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಮಗನ ಸರಳ ವಿವಾಹ; ಮದುವೆಗೆ ಗೈರಾದ ನವಜೋತ್ ಸಿಂಗ್ ಸಿಧು
ಮಗನ ಮದುವೆಯಲ್ಲಿ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ

Follow us on

ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಸರಳವಾಗಿ ತಮ್ಮ ಮಗನ ಮದುವೆ ಮಾಡಿದ್ದಾರೆ. ಚರಣ್​ಜಿತ್ ಸಿಂಗ್ ಚನ್ನಿ ಅವರ ಸರಳ ಮದುವೆಯಲ್ಲಿ ಪಂಜಾಬ್​ನ ಕಾಂಗ್ರೆಸ್ ನಾಯಕರು, ಸಚಿವರು ಆಗಮಿಸಿ ಶುಭಾಶಯ ಕೋರಿದ್ದಾರೆ. ಆದರೆ, ಈ ಮದುವೆಯಲ್ಲಿ ನವಜೋತ್ ಸಿಂಗ್ ಸಿಧು ಪಾಲ್ಗೊಳ್ಳದೆ ಇರುವುದು ಮತ್ತೊಮ್ಮೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಚರಣ್​ಜಿತ್ ಸಿಂಗ್ ಚನ್ನಿ ತಮ್ಮ ಮಗನ ಮದುವೆಯಲ್ಲಿ ಸರಳವಾದ ಉಡುಗೆ ಧರಿಸಿ, ಹೆಂಡತಿ, ಮಗ-ಸೊಸೆ ಜೊತೆ ನೆಲದ ಮೇಲೆ ಕುಳಿತು ಸರಳವಾಗಿ ಊಟ ಮಾಡುತ್ತಿರುವ ಫೋಟೋಗಳು ಭಾರೀ ವೈರಲ್ ಆಗಿವೆ. ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳ ಮದುವೆ ಬಹಳ ವೈಭವದಿಂದ ಇರುತ್ತದೆ. ಆದರೆ, ಚರಣ್​ಜಿತ್ ಸಿಂಗ್ ಚನ್ನಿ ಅವರ ಮಗನ ಸರಳವಾದ ಮದುವೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚರಣ್​ಜಿತ್ ಸಿಂಗ್ ಅವರ ಮಗ ನವಜಿತ್ ಸಿಂಗ್ ಇಂಜಿನಿಯರ್ ಆಗಿರುವ ಸಿಮ್ರಾನ್​ಧೀರ್ ಕೌರ್ ಅವರೊಂದಿಗೆ ಮದುವೆಯಾಗಿದ್ದಾರೆ. ಮದುವೆ ಮಂಟಪಕ್ಕೆ ಸಿಎಂ ಚರಣ್​ಜಿತ್ ಸಿಂಗ್ ಅವರೇ ಕಾರು ಚಲಾಯಿಸಿಕೊಂಡು ಮಗನನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬಂದಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಕೆಲವೇ ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪಂಜಾಬ್​ನ ಸಚಿವರು, ಕಾಂಗ್ರೆಸ್ ನಾಯಕರು ಬಂದಿದ್ದರೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮಾಜಿ ಸಿಎಂ ಅಮರೀಂದರ್ ಸಿಂಗ್, ಸುನಿಲ್ ಜಕ್ಕರ್ ಮಾತ್ರ ಗೈರಾಗಿದ್ದರು. ಇದರಿಂದ ನವಜೋತ್ ಸಿಂಗ್ ಸಿಧು ಹಾಗೂ ಸರ್ಕಾರದ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ಅನುಮಾನ ಮತ್ತೆ ಶುರುವಾಗಿದೆ.

ಮದುವೆಗೂ ಮುಂಚಿನ ಕಾರ್ಯಕ್ರಮಗಳನ್ನು ಗುರುದ್ವಾರದಲ್ಲಿ ನಡೆಸಲಾಗಿದ್ದು, ಬಿಗಿ ಭದ್ರತೆಯೊಂದಿಗೆ ಸಣ್ಣದಾಗಿ ಮದುವೆ ನೆರವೇರಿಸಲಾಗಿದೆ. ನಂತರ ಸಂಜೆ ಆಪ್ತರಿಗಾಗಿ ರಿಸೆಪ್ಷನ್ ಕೂಡ ಆಯೋಜಿಸಲಾಗಿತ್ತು. ಒಟ್ಟಾರೆ, ಚರಣ್​ಜಿತ್ ಸಿಂಗ್ ಚನ್ನಿ ಅವರ ಮಗನ ಮದುವೆಯ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಹೊಸ ಪಕ್ಷ ಕಟ್ಟುತ್ತಾರೆಂಬ ಸುದ್ದಿ ಹರಿಡಾಡುತ್ತಿದೆ. ಹಾಗೇ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಆ ರಾಜೀನಾಮೆಯನ್ನು ಇನ್ನೂ ಕಾಂಗ್ರೆಸ್ ಹೈಕಮಾಂಡ್ ಸ್ವೀಕರಿಸಿಲ್ಲ.

ಇದನ್ನೂ ಓದಿ: ನವಜೋತ್ ಸಿಂಗ್ ಸಿಧುವನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ

Navjot Singh Sidhu ನೈತಿಕತೆಯೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ನವಜೋತ್ ಸಿಂಗ್ ಸಿಧು

ತಾಜಾ ಸುದ್ದಿ

Related Stories

Click on your DTH Provider to Add TV9 Kannada