ಉತ್ತರಾಖಂಡ್ನಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಸಾರಿಗೆ ಸಚಿವ; ಪುತ್ರನೊಂದಿಗೆ ಕಾಂಗ್ರೆಸ್ ಸೇರ್ಪಡೆ
ಉತ್ತರಾಖಂಡ್ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಯಶ್ಪಾಲ್ ಆರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕಾಂಗ್ರೆಸ್ ಸೇರ್ಪಡೆ, 2022ರ ಉತ್ತರಾಖಂಡ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಖಂಡಿತವಾಗಿಯೂ ಬಿಜೆಪಿಗೆ ಶಾಕ್ ತರಲಿದೆ.
ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ಬರುವ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಉತ್ತರಾಖಂಡ್ನಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದ್ದು, ಇದೀಗ ಬಿಜೆಪಿ ನಾಯಕ, ರಾಜ್ಯ ಸಚಿವರಾಗಿದ್ದ ಯಶ್ಪಾಲ್ ಆರ್ಯಾ ಮತ್ತು ಅವರ ಪುತ್ರ ಶಾಸಕ ಸಂಜೀವ್ ಆರ್ಯ ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ನ ಪ್ರಮುಖ ನಾಯಕರಾದ ವೇಣುಗೋಪಾಲ್ ಮತ್ತು ಹರೀಶ್ ರಾವತ್ ಸಮ್ಮುಖದಲ್ಲಿ ಇವರಿಬ್ಬರೂ ಕಾಂಗ್ರೆಸ್ಗೆ ಸೇರಿದ್ದಾರೆ.
ಉತ್ತರಾಖಂಡ್ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಯಶ್ಪಾಲ್ ಆರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕಾಂಗ್ರೆಸ್ ಸೇರ್ಪಡೆ, 2022ರ ಉತ್ತರಾಖಂಡ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಖಂಡಿತವಾಗಿಯೂ ಬಿಜೆಪಿಗೆ ಶಾಕ್ ತರಲಿದೆ. ಯಶ್ಪಾಲ್ ಆರ್ಯ ಮುಕ್ತೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಅವರ ಪುತ್ರ ಸಂಜೀವ್ ಆರ್ಯ ನೈನಿತಾಲ್ನಿಂದ ಆರಿಸಿಬಂದಿದ್ದಾರೆ. ಉತ್ತರಾಖಂಡ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪುಷ್ಕರ್ ಸಿಂಗ್ ಧಮಿಯನ್ನು ಆಯ್ಕೆ ಮಾಡಿದಾಗಿನಿಂದಲೂ ಯಶ್ಪಾಲ್ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಬಿಜೆಪಿ ವರಿಷ್ಠರು ಈಗಾಗಲೇ ಹಲವು ಬಾರಿ ಅವರ ಬಳಿ ಮಾತನಾಡಿದ್ದಾರೆ. ಧಮಿ ಕೂಡ ಸ್ವತಃ ಯಶ್ಪಾಲ್ ಮನೆಗೆ ಹೋಗಿ ಮಾತುಕತೆ ನಡೆಸಿದ್ದರು. ಅಂದಹಾಗೆ ಯಶ್ಪಾಲ್ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದವರೇ ಆಗಿದ್ದರು. 2007-20014ರವರೆಗೆ ಉತ್ತರಾಖಂಡ್ನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹರೀಶ್ ರಾವತ್ ಸರ್ಕಾರದಲ್ಲಿ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವುದಕ್ಕೂ ಮೊದಲು ಯಶ್ಪಾಲ್ ಸಿಂಗ್ ಮತ್ತು ಅವರ ಪುತ್ರ ಇಬ್ಬರೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ಇಬ್ಬರು ನಾಯಕರು ರಾಹುಲ್ ಗಾಂಧಿಯನ್ನು ಭೇಟಿಯಾಗಿರುವ ಫೋಟೋವನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿತ್ತು.
ಇದನ್ನೂ ಓದಿ: Robin Uthappa: ಸಿಎಸ್ಕೆ ಪರ ಭರ್ಜರಿ ಬ್ಯಾಟಿಂಗ್ ಬಳಿಕ ಕೆಕೆಆರ್ ತಂಡವನ್ನು ನೆನೆದ ಉತ್ತಪ್ಪ
‘ಚರಂಡಿ ಕ್ಲೀನ್ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ