Robin Uthappa: ಸಿಎಸ್ಕೆ ಪರ ಭರ್ಜರಿ ಬ್ಯಾಟಿಂಗ್ ಬಳಿಕ ಕೆಕೆಆರ್ ತಂಡವನ್ನು ನೆನೆದ ಉತ್ತಪ್ಪ
IPL 2021: ರಾಬಿನ್ ಉತ್ತಪ್ಪ ಐಪಿಎಲ್ನಲ್ಲಿ ಆರ್ಸಿಬಿ, ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿದ್ದರು. ಅದರಲ್ಲೂ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ಗೇರಿದೆ. ಈ ಪಂದ್ಯದಲ್ಲಿ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಹಾಗೂ ರಾಬಿನ್ ಉತ್ತಪ್ಪ. ಅದರಲ್ಲೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉತ್ತಪ್ಪ ಎಲ್ಲರೂ ಹುಬ್ಬೇರುವಂತೆ ಬ್ಯಾಟ್ ಬೀಸಿದ್ದರು. ಡೆಲ್ಲಿ ಬೌಲರುಗಳನ್ನು ಮನಸೊ ಇಚ್ಛೆ ದಂಡಿಸಿದ ಉತ್ತಪ್ಪ 63 ರನ್ಗಳನ್ನು ಚಚ್ಚಿದರು. ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಉತ್ತಪ್ಪ ಚೆನ್ನೈಯನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಗೆಲುವಿನ ಬಳಿಕ ಮಾತನಾಡಿದ ಉತ್ತಪ್ಪ, ತಮ್ಮ ಹಿಂದಿನ ತಂಡವನ್ನು ನೆನಪಿಸಿಕೊಂಡಿದ್ದು ವಿಶೇಷ. ಅದರಲ್ಲೂ ಮಾಜಿ ನಾಯಕನನ್ನು ಹಾಡಿಹೊಗಳಿ ಎಲ್ಲರ ಗಮನ ಸೆಳೆದರು.
ಹೌದು, ಗೆಲುವಿನ ನಂತರ ಮಾತನಾಡಿದ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಅತ್ಯಂತ ಸುರಕ್ಷಿತ ತಂಡ ಎಂಬ ಭಾವನೆ ನನ್ನಲ್ಲಿದೆ. ಆದರೆ ಇದಕ್ಕೂ ಮುನ್ನ ನನಗೆ ಇಂತಹ ಭಾವನೆ ನನ್ನಲಿತ್ತು. ಅದು ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ. ಗೌತಿ ಮುನ್ನಡೆಸಿದ ಕೆಕೆಆರ್ ತಂಡದಲ್ಲಿ ನಾನು ತುಂಬಾ ಕಂಫರ್ಟ್ ಆಗಿದ್ದೆ. ಇದೀಗ ಅದೇ ಅನುಭವ ಮತ್ತೆ ಸಿಗುತ್ತಿದೆ. ಇದರಿಂದಾಗಿ ಅತ್ಯುತ್ತಮವಾಗಿ ಬ್ಯಾಟ್ ಬೀಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ರಾಬಿನ್ ಉತ್ತಪ್ಪ ಐಪಿಎಲ್ನಲ್ಲಿ ಆರ್ಸಿಬಿ, ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿದ್ದರು. ಅದರಲ್ಲೂ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಕೆಕೆಆರ್ ತಂಡದಲ್ಲಿದ್ದ ವೇಳೆ ರಾಬಿನ್ ಉತ್ತಪ್ಪ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಆ ಬಳಿಕ ಉತ್ತಪ್ಪ ಬ್ಯಾಟಿಂಗ್ ಮಂಕಾಗಿತ್ತು. ಇದೀಗ ಸಿಎಸ್ಕೆ-ಡೆಲ್ಲಿ ನಡುವಣ ಪಂದ್ಯದ ಮೂಲಕ ಮತ್ತೆ ಹಿಂದಿನಂತೆ ಸ್ಪೋಟಕ ಇನಿಂಗ್ಸ್ ಕಟ್ಟುವಲ್ಲಿ ಉತ್ತಪ್ಪ ಯಶಸ್ವಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಉತ್ತಪ್ಪ ಗೌತಮ್ ಗಂಭೀರ್ ನಾಯಕತ್ವದಡಿಯಲ್ಲಿ ನಾನು ತುಂಬಾ ಕಂಫರ್ಟ್ ಅನುಭವ ಹೊಂದಿದ್ದೆ. ಇದೀಗ ಸಿಎಸ್ಕೆ ತಂಡದಲ್ಲೂ ಅದೇ ಅನುಭವ ಸಿಕ್ಕಿದೆ ಎಂದಿದ್ದಾರೆ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(Robin Uthappa said CSK is one of the most secured franchise)