Navjot Singh Sidhu ನೈತಿಕತೆಯೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ನವಜೋತ್ ಸಿಂಗ್ ಸಿಧು

Punjab Politics: ನಾನು ಯಾರೊಂದಿಗೂ ವೈಯಕ್ತಿಕ ವೈಷಮ್ಯವನ್ನು ಹೊಂದಿಲ್ಲ. ನನ್ನ 17 ವರ್ಷಗಳ ರಾಜಕೀಯ ಜೀವನವು ಒಂದು ಉದ್ದೇಶಕ್ಕಾಗಿ, ಬದಲಾವಣೆ ಮಾಡಲು , ಒಂದು ನಿಲುವನ್ನು ತೆಗೆದುಕೊಳ್ಳಲು ಮತ್ತು ಜನರ ಜೀವನವನ್ನು ಉತ್ತಮಗೊಳಿಸಲು ಇರುವುದಾಗಿದೆ. ಇದು ನನ್ನ ಏಕೈಕ ಧರ್ಮ "ಎಂದು ಅವರು ಹೇಳಿದರು.

Navjot Singh Sidhu ನೈತಿಕತೆಯೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 29, 2021 | 12:15 PM

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ನವಜೋತ್ ಸಿಂಗ್ ಸಿಧು(Navjot Singh Sidhu) ಅವರು ತಮ್ಮ ಟ್ವಿಟರ್​​ ಹ್ಯಾಂಡಲ್‌ನಲ್ಲಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಸಚಿವ ಸಂಪುಟದಲ್ಲಿ ಕಳಂಕಿತ ಮತ್ತು ಇತರ ವಿವಾದಾತ್ಮಕ ಶಾಸಕರನ್ನು ಸೇರಿಸಿರುವುದನ್ನು ಟೀಕಿಸಿದ್ದಾರೆ.  ವಿಡಿಯೊ ಸಂದೇಶದಲ್ಲಿ, ಸಿಧು ಜನರ ಜೀವನವನ್ನು ಉತ್ತಮಗೊಳಿಸುವುದೊಂದೇ ತನ್ನ ಧರ್ಮ ಎಂದು ಹೇಳಿದ್ದಾರೆ.

“ನಾನು ನನ್ನ ನೈತಿಕತೆ, ನೈತಿಕ ಅಧಿಕಾರದೊಂದಿಗೆ ರಾಜಿ ಮಾಡಿಕೊಳ್ಳಲಾರೆ. ಪಂಜಾಬ್‌ನಲ್ಲಿನ ವಿಷಯಗಳು ಅಜೆಂಡಾಗಳೊಂದಿಗಿನ ರಾಜಿಗೆ ನಾನು ಸಾಕ್ಷಿಯಾಗಿದ್ದೇನೆ. ನಾನು ಹೈಕಮಾಂಡ್ ಅನ್ನು ಮರೆಮಾಚಲು ಸಾಧ್ಯವಿಲ್ಲ ಅಥವಾ ಅವುಗಳನ್ನು ಮರೆಮಾಚಲು ನಾನು ಬಿಡುವುದಿಲ್ಲ ಎಂದು ಸಿಧು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ನಾನು ಯಾರೊಂದಿಗೂ ವೈಯಕ್ತಿಕ ವೈಷಮ್ಯವನ್ನು ಹೊಂದಿಲ್ಲ. ನನ್ನ 17 ವರ್ಷಗಳ ರಾಜಕೀಯ ಜೀವನವು ಒಂದು ಉದ್ದೇಶಕ್ಕಾಗಿ, ಬದಲಾವಣೆ ಮಾಡಲು , ಒಂದು ನಿಲುವನ್ನು ತೆಗೆದುಕೊಳ್ಳಲು ಮತ್ತು ಜನರ ಜೀವನವನ್ನು ಉತ್ತಮಗೊಳಿಸಲು ಇರುವುದಾಗಿದೆ. ಇದು ನನ್ನ ಏಕೈಕ ಧರ್ಮ “ಎಂದು ಅವರು ಹೇಳಿದರು.

ಕೊನೆಯ ಉಸಿರಿರುವವರೆಗೂ ನಾನು ಸತ್ಯಕ್ಕಾಗಿ ಹೋರಾಡುವೆ ಎಂದು ಸಿಧು  ವಿಡಿಯೊ ಸಂದೇಶವನ್ನು ಟ್ವೀಟ್ ಮಾಡಿ ಬರೆದಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ 72 ದಿನಗಳ ನಂತರ ಮತ್ತು ಪಂಜಾಬ್ ಹೊಸ ಮುಖ್ಯಮಂತ್ರಿಯಾದ ಎಂಟು ದಿನಗಳ ನಂತರ ಸಿಧು ರಾಜೀನಾಮೆ ನೀಡಿದ್ದಾರೆ.

ರಾಣಾ ಗುರ್ಜಿತ್ ಸಿಂಗ್ ಅವರನ್ನು ರಾಜ್ಯ ಕ್ಯಾಬಿನೆಟ್‌ನಲ್ಲಿ ಸೇರಿಸಿಕೊಳ್ಳುವುದು, ಎಪಿಎಸ್ ಡಿಯೋಲ್ ಅವರನ್ನು ರಾಜ್ಯದ ಅಟಾರ್ನಿ ಜನರಲ್ ಆಗಿ ನೇಮಿಸುವುದು, ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಅವರನ್ನು ರಾಜ್ಯದ ಡಿಜಿಪಿಯಾಗಿ ನೇಮಕ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಅವರಿಗೆ ಗೃಹ ಖಾತೆಯ ಹಂಚಿಕೆ ಇದು ಸಿಧು ರಾಜಿನಾಮೆಗೆ ಕಾರಣವಾಗಿರಬಹುದು ಎಂದು ರಾಜಕೀಯ ಬೆಳವಣಿಗೆ ಬಗ್ಗೆ ತಿಳಿದಿರುವ ವ್ಯಕ್ತಿಗಳು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಿಧು ಅವರನ್ನು ಮುಖ್ಯಮಂತ್ರಿಯನ್ನಾಗಿ ಹೆಸರಿಸದೇ ಇರುವುದಕ್ಕೆ ಕೂಡಾ ಅವರು ಅಸಮಧಾನಗೊಂಡಿದ್ದರು ಎಂದು ಹೇಳಲಾಗಿದೆ.

ಮಂಗಳವಾರ ಸಿಧು ರಾಜೀನಾಮೆ ನೀಡಿದ ಕೆಲವು ಗಂಟೆಗಳ ನಂತರ ಅವರ ನಿಕಟವರ್ತಿ ಮೂವರು ನಾಯಕರು ತಮ್ಮ ಸ್ಥಾನಗಳನ್ನು ತೊರೆದರು. ಕ್ಯಾಬಿನೆಟ್ ಮಂತ್ರಿ ರಜಿಯಾ ಸುಲ್ತಾನಾ, ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಸಿಂಗ್ ಚಹಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: Razia Sultana ನವಜೋತ್ ಸಿಂಗ್ ಸಿಧುಗೆ ಬೆಂಬಲ ಸೂಚಿಸಿ ಸಚಿವ ಸ್ಥಾನಕ್ಕೆ ರಜಿಯಾ ಸುಲ್ತಾನಾ ರಾಜೀನಾಮೆ

(Navjot Singh Sidhu releases a video message says he will continue fighting for truth till his last breath)

Published On - 12:06 pm, Wed, 29 September 21

ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!