Terrorist Encounter: ಜಮ್ಮು ಕಾಶ್ಮೀರದಲ್ಲಿ ಪೊಲೀಸರಿಂದ ಎಲ್ಇಟಿ ಉಗ್ರನ ಎನ್‌ಕೌಂಟರ್
Jammu Kashmir Encounter: ಎಲ್ಇಟಿ ಸಂಘಟನೆಯ ಇಮ್ತಿಯಾಜ್ ಅಹಮದ್ ದಾರ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಈತ ಇತ್ತೀಚೆಗೆ ಬಂಡೀಪೊರದ ಶಹಗುಂದ್ನಲ್ಲಿ ನಡೆದ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿದ್ದ.
ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿ (Bandipora Encounter)) ಕಾಶ್ಮೀರದ ಪೊಲೀಸರು ಉಗ್ರನನ್ನು ಹೊಡೆದುರುಳಿಸಿದ್ದಾರೆ. ಇಂದು ಮುಂಜಾನೆ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್ (Encounter) ಮೂಲಕ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಉಗ್ರ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಸಂಘಟನೆಗೆ ಸೇರಿದವನು ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲ್ಇಟಿ ಸಂಘಟನೆಯ ಇಮ್ತಿಯಾಜ್ ಅಹಮದ್ ದಾರ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಈತ ಇತ್ತೀಚೆಗೆ ಬಂಡೀಪೊರದ ಶಹಗುಂದ್ನಲ್ಲಿ ನಡೆದ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿದ್ದ. ಇಂದು ಬೆಳಗ್ಗೆ ಬಂಡಿಪೊರದಲ್ಲಿ ಎನ್‌ಕೌಂಟರ್ ಕಾರ್ಯಾಚರಣೆ ಶುರುವಾಗಿತ್ತು ಪೊಲೀಸರು ಮತ್ತು ಭದ್ರತಾ ಪಡೆಯ ಸಿಬ್ಬಂದಿ ಸೇರಿ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
#BandiporaEncounterUpdate: 01 unidentified #terrorist killed. #Search going on. Further details shall follow. @JmuKmrPolice https://t.co/czK85KyPL3
— Kashmir Zone Police (@KashmirPolice) October 11, 2021
ಈ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಓರ್ವ ಪೊಲೀಸ್ಗೆ ಕೂಡ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.
Killed #terrorist has been identified as Imtiyaz Ahmad Dar affiliated with proscribed #terror outfit LeT (TRF). He was involved in recent civilian #killing at Shahgund #Bandipora: IGP Kashmir
— Kashmir Zone Police (@KashmirPolice) October 11, 2021
ಇದನ್ನೂ ಓದಿ: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡುವುದಾಗಿ ಭರವಸೆ ನೀಡಿದ ತೆಲಂಗಾಣ ಸಚಿವ
ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ: ಉಗ್ರರ ನಿಗ್ರಹಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಅಮಿತ್ ಶಾ