BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ
BSNL Network: ಬಿಎಸ್ಎನ್ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್ನ್ನು ಬಿಎಸ್ಎನ್ಎಲ್ ನೀಡುತ್ತಿದೆ.
ದೆಹಲಿ: ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್ಎನ್ಎಲ್ 4ಜಿ ನೆಟ್ವರ್ಕ್ನ (BSNL 4G Network) ಮೊದಲ ಫೋನ್ ಕಾಲ್ ಮಾಡಿದರು. ಈ ಬಗ್ಗೆ, ಅವರು ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಬಿಎಸ್ಎನ್ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್ನ್ನು ಬಿಎಸ್ಎನ್ಎಲ್ ನೀಡುತ್ತಿದೆ.
ಇದು ಭಾರತದ್ದೇ ಆದ ಮೊದಲ 4ಜಿ ನೆಟ್ವರ್ಕ್ ಆಗಿದೆ. ಇದರ ಅಭಿವೃದ್ಧಿ ಅಥವಾ ರೋಲ್ಔಟ್ ಸರಳ, ಸುಲಭ ಆಗಿರಲಿಲ್ಲ. ವರದಿಗಳು ಹೇಳುವಂತೆ ಬಿಎಸ್ಎನ್ಎಲ್ ರೋಲ್ಔಟ್ನ ಮುಂದಿನ ಹಂತಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕೂಡ ಯೋಜನೆಯ ಸಹಭಾಗಿತ್ವ ಹೊಂದಬಹುದು. ಬಿಎಸ್ಎನ್ಎಲ್ ತನ್ನ 4ಜಿ ನೆಟ್ವರ್ಕ್ಗಾಗಿ ಇಂಡಿಯನ್ ಟೆಕ್ನಾಲಜಿ ಜೊತೆಗೆ ಕೆಲವು ಕಾಲದಿಂದ ಕೆಲಸ ಮಾಡುತ್ತಿದೆ.
ಐಟಿ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್ಎನ್ಎಲ್ ಭಾರತೀಯ 4ಜಿ ನೆಟ್ವರ್ಕ್ ಮೂಲಕ ಮೊದಲ ಕರೆ ಮಾಡಿದರು. ಕೇಂದ್ರ ಸರ್ಕಾರ 4ಜಿ ಸೇವೆಗಳಿಗಾಗಿ 24,084 ಕೋಟಿ ರೂಪಾಯಿಗಳನ್ನು 2021-22 ರ ಬಜೆಟ್ನಲ್ಲಿ ಮೀಸಲಿರಿಸಿದೆ. ಇದು ಒಟ್ಟಾರೆ 69,000 ಕೋಟಿ ರೂಪಾಯಿಯ ಬಿಎಸ್ಎನ್ಎಲ್ ಹಾಗೂ ಎಮ್ಟಿಎನ್ಎಲ್ ಪ್ಯಾಕೇಜ್ನ ಭಾಗವಾಗಿದೆ.
Made first call over Indian 4G network of BSNL (Designed and Made in India). PM @narendramodi Ji’s vision of Aatmanirbhar Bharat taking shape.
— Ashwini Vaishnaw (@AshwiniVaishnaw) October 10, 2021
ಬಿಎಸ್ಎನ್ಎಲ್ ಈ ಹಣಕಾಸು ವರ್ಷದಲ್ಲಿ 4ಜಿ ನೆಟ್ವರ್ಕ್ ಕಾರ್ಯಾರಂಭಿಸಿದ್ದರೆ, ಅದರ ಆರ್-ಡಿ ಆರ್ಗನೈಸೇಷನ್ ಸಿ-ಡಾಟ್ಗೆ 6ಜಿ ನೆಟ್ವರ್ಕ್ ಟೆಕ್ನಾಲಜಿ ಮೇಲೆ ಕೆಲಸ ಮಾಡಲು ಟೆಲಿಕಾಂ ಡಿಪಾರ್ಟ್ಮೆಂಟ್ ಸೂಚಿಸಿದೆ. ಆ ಮೂಲಕ ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡಲು ಹಾಗೂ ಜಾಗತಿಕ ಮಾರುಕಟ್ಟೆಯೊಂದಿಗೆ ಬೆಳೆಯಲು ಹೇಳಲಾಗಿದೆ. ಸ್ಯಾಮ್ಸಂಗ್, ಹುವಾಯಿ, ಎಲ್ಜಿ ಮತ್ತು ಇತರ ಕೆಲವು ಕಂಪೆನಿಗಳು 6ಜಿ ಟೆಕ್ನಾಲಜಿಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗಿದೆ. 6ಜಿ ತಂತ್ರಜ್ಞಾನವು 5ಜಿ ಗಿಂತ 50 ಪಟ್ಟು ವೇಗವಾಗಿ ಇರಲಿದೆ ಎನ್ನಲಾಗಿದೆ. ಈ ತಂತ್ರಜ್ಞಾನ 2028- 2030 ರ ವೇಳೆಗೆ ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಯುಪಿಐ ವಹಿವಾಟಿನಲ್ಲಿ ಗಮನಾರ್ಹ ಪ್ರಗತಿ: ಆರ್ಥಿಕತೆ ಮುನ್ನಡೆಯ ದ್ಯೋತಕ ಎಂದ ಸಚಿವ ಅಶ್ವಿನಿ ವೈಷ್ಣವ್
ಇದನ್ನೂ ಓದಿ: BSNL 3G ನೇ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇನ್ನು 4G ಎಲ್ಲಿಂದ ಬರಬೇಕು: ಜಿಎಂ ಸಿದ್ದೇಶ್ವರ್ ವಾಗ್ದಾಳಿ
Published On - 10:04 pm, Sun, 10 October 21