Amazon Great Indian Festival: ಅಮೆಜಾನ್​ನಲ್ಲಿ ಇನ್ನೂ ಮುಗಿದಿಲ್ಲ ಆಫರ್: ಭರ್ಜರಿ ಡಿಸ್ಕೌಂಟ್​ಗೆ ಈ ಸ್ಮಾರ್ಟ್​ಫೋನ್​ಗಳು

Amazon: ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್​ನಲ್ಲಿ ಇತ್ತೀಚೆಗಷ್ಟೆ ಲಾಂಚ್ ಆದ ಸ್ಯಾಮ್​ಸಂಗ್ ಗ್ಯಾಲಕ್ಸಿ M52 5G ಸ್ಮಾರ್ಟ್​ಫೋನ್ ಭರ್ಜರಿ ಆಫರ್​ನಲ್ಲಿದೆ.

Amazon Great Indian Festival: ಅಮೆಜಾನ್​ನಲ್ಲಿ ಇನ್ನೂ ಮುಗಿದಿಲ್ಲ ಆಫರ್: ಭರ್ಜರಿ ಡಿಸ್ಕೌಂಟ್​ಗೆ ಈ ಸ್ಮಾರ್ಟ್​ಫೋನ್​ಗಳು
Amazon Great Indian Festival sale
Follow us
TV9 Web
| Updated By: Vinay Bhat

Updated on: Oct 10, 2021 | 2:40 PM

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ (Amazon Great Indian Festival sale) ಭರ್ಜರಿ ಆಗಿ ನಡೆಯುತ್ತಿದೆ. ಇಂದು ಪ್ರಮುಖವಾಗಿ ಸ್ಮಾರ್ಟ್​ಫೋನ್​ಗಳ (Smartphone) ಮೇಲೆ ಊಹೆಗೂ ಮೀರಿದ ಡಿಸ್ಕೌಂಟ್ ನೀಡಲಾಗಿದ್ದು ಭರ್ಜರಿ ಮಾರಾಟ ಕಾಣುತ್ತಿದೆ. ಒನ್‌ಪ್ಲಸ್‌ (OnePlus), ಶವೋಮಿ (Xiaomi), ರಿಯಲ್‌ ಮಿ (Realme), ಒಪ್ಪೋ (Oppo), ವಿವೋ (Vivo), ಸ್ಯಾಮ್​ಸಂಗ್ (Samsung) ಮತ್ತು ಆ್ಯಪಲ್ (Apple) ನಂತಹ ಉನ್ನತ ಬ್ರ್ಯಾಂಡ್‌ಗಳಿಂದ ನೀವು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021ರ ಮಾರಾಟದಲ್ಲಿ ಸ್ಮಾರ್ಟ್​ಫೋನ್ ಮೇಲೆ ಬರೋಬ್ಬರಿ 40 ಶೇಕಡಾ ರಿಯಾಯಿತಿ ನೀಡಲಾಗಿದೆ. ಹೆಚ್​ಡಿಎಫ್​ಸಿ (HDFC) ಬ್ಯಾಂಕ್ ದಾರರಿಗಂತೂ ಸಾಕಷ್ಟು ಡಿಸ್ಕೌಂಟ್​ನಲ್ಲಿ ಮತ್ತಷ್ಟು ಪ್ರಾಡಕ್ಟ್​ಗಳು ಸಿಗುತ್ತಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್​ನಲ್ಲಿ ಇತ್ತೀಚೆಗಷ್ಟೆ ಲಾಂಚ್ ಆದ ಸ್ಯಾಮ್​ಸಂಗ್ ಗ್ಯಾಲಕ್ಸಿ M52 5G ಸ್ಮಾರ್ಟ್​ಫೋನ್ ಭರ್ಜರಿ ಆಫರ್​ನಲ್ಲಿದೆ. 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 29,999 ರೂ. ಇದ್ದರೆ, ಇದು ಸದ್ಯ ಆಫರ್​ನಲ್ಲಿ ಕೇವಲ 25,999 ರೂ. ಗೆ ಮಾರಾಟವಾಗುತ್ತಿದೆ. ಇಷ್ಟೇ ಅಲ್ಲದೆ ಕೂಪರ್ ಮೂಲಕ 1000 ರೂ. ಡಿಸ್ಕೌಂಟ್ ಇದೆ. ಐಫೋನ್ ಮೇಲಂತೂ ಊಹೆಗೂ ಮೀರಿದ ರಿಯಾಯಿತಿ ಇದೆ.

ಇದರ ಜೊತೆಗೆ ಒನ್‌ಪ್ಲಸ್‌ ಕಂಪೆನಿಯ ಒನ್‌ಪ್ಲಸ್‌ ನಾರ್ಡ್‌ 2 ಸ್ಮಾರ್ಟ್‌ಫೋನ್‌ ನಿಮಗೆ ಅಮೆಜಾನ್‌ ಸೇಲ್‌ನಲ್ಲಿ ಕೇವಲ 28,499 ರೂ. ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್‌ ಬೆಂಬಲಿಸುವ 6.43-ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್ ಡ್ರಾಗನ್ 765G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಮದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ವೈಡ್-ಆಂಗಲ್ ಸೆನ್ಸರ್‌ ಅನ್ನು ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ.

ಶವೋಮಿ ಕಂಪನಿಯ ಎಂಐ 11X ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಜೊತೆಗೆ HDFC ಬ್ಯಾಂಕ್ ಆಫರ್‌ ಮೂಲಕ 20,990 ರೂ. ಒಳಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ 6.67 ಇಂಚಿನ E4 AMOLED ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಿದೆ. ಹಾಗೆಯೇ 8GB RAM ಮತ್ತು 128GB ಸಂಗ್ರಹವನ್ನು ಹೊಂದಿದೆ. ಇದು 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 4520mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಒಪ್ಪೊ A74 ಸ್ಮಾರ್ಟ್‌ಫೋನ್‌ ಕೇವಲ 17,990 ರೂ. ಬೆಲೆಗೆ ಲಭ್ಯವಿದೆ. ಇದು 2400×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.49 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G SoC ನಿಂದ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು ಡ್ಯುಯಲ್ ಅಪರ್ಚರ್ ಅನ್ನು ಹೊಂದಿದ್ದು, ವೀಡಿಯೊಗಳು ಮತ್ತು ಫೋಟೋಗಳು ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Amazon Prime: ಅಮೆಜಾನ್ ಪ್ರೈಮ್​ನಿಂದ ಹೊಸ ಆಫರ್: ಕೇವಲ 129 ರೂ. ಖರ್ಚು ಮಾಡಿದರೆ ಸಾಕು

WhatsApp: ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

(Amazon Great Indian Festival Round 2 Begins With Deals On Samsung Xiaomi OnePlus Realme Smartphones)

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?