Amazon Prime: ಅಮೆಜಾನ್ ಪ್ರೈಮ್​ನಿಂದ ಹೊಸ ಆಫರ್: ಕೇವಲ 129 ರೂ. ಖರ್ಚು ಮಾಡಿದರೆ ಸಾಕು

Amazon Prime subscription Plan: ಇದದಕ್ಕೂ ಮುನ್ನ ಅಮೆಜಾನ್ ಪ್ರೈಮ್​ಗಾಗಿ ಕೇವಲ ಮೂರು ತಿಂಗಳು ಮತ್ತು ವಾರ್ಷಿಕ ಯೋಜನೆಗಳನ್ನು ನೀಡುತ್ತಿತ್ತು. ಆದರೀಗ ಗ್ರಾಹಕರಿಗೆ ಮತ್ತಷ್ಟು ಸುಲಭವೆನಿಸುವ 129 ರೂ.ವಿನ ಅಮೆಜಾನ್ ಪ್ರೈಮ್ ಮಾಸಿಕ ಪ್ಲಾನ್ ಪರಿಚಯಿಸಿದೆ.

Amazon Prime: ಅಮೆಜಾನ್ ಪ್ರೈಮ್​ನಿಂದ ಹೊಸ ಆಫರ್: ಕೇವಲ 129 ರೂ. ಖರ್ಚು ಮಾಡಿದರೆ ಸಾಕು
Amazon Prime
Follow us
TV9 Web
| Updated By: Vinay Bhat

Updated on: Oct 10, 2021 | 1:55 PM

ಭಾರತದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ (Amazon) ತನ್ನ ಪ್ರೈಮ್ ಸದಸ್ಯತ್ವವನ್ನು ಭಾರತೀಯರಿಗಾಗಿ ಮತ್ತೆ ಬದಲಾಯಿಸಿದೆ. ಈ ಯೋಜನೆಯಲ್ಲಿ, ನೀವು ತಿಂಗಳಿಗೆ ಕೇವಲ 129 ರೂಪಾಯಿಗಳನ್ನು ಖರ್ಚು ಮಾಡಿದರೆ ಸಾಕು. ತಿಂಗಳು ಪೂರ್ತಿ ಸಂಪೂರ್ಣ ಮನರಂಜನೆಯನ್ನು ಆನಂದಿಸಬಹುದು. ಅಮೆಜಾನ್ ಪ್ರೈಮ್ (Amazon Prime) ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣದದಿಂದ ಗ್ರಾಹಕರಿಗೆಂದು ಅಮೆಜಾನ್ ತನ್ನ ಒಂದು ತಿಂಗಳ ಪ್ರೈಮ್ ಚಂದಾದಾರಿಕೆಯನ್ನು ಮರಳಿ ತಂದಿದೆ. ಈ ವರ್ಷದ ಆರಂಭದಲ್ಲಿ ಅಮೆಜಾನ್ ಪ್ರೈಮ್​ ತನ್ನ ಮಾಸಿಕ ಯೋಜನೆಯನ್ನು ತೆಗೆದುಹಾಕಿತ್ತು.

ಇದದಕ್ಕೂ ಮುನ್ನ ಅಮೆಜಾನ್ ಪ್ರೈಮ್​ಗಾಗಿ ಕೇವಲ ಮೂರು ತಿಂಗಳು ಮತ್ತು ವಾರ್ಷಿಕ ಯೋಜನೆಗಳನ್ನು ನೀಡುತ್ತಿತ್ತು. ಆದರೀಗ ಗ್ರಾಹಕರಿಗೆ ಮತ್ತಷ್ಟು ಸುಲಭವೆನಿಸುವ 129 ರೂ.ವಿನ ಅಮೆಜಾನ್ ಪ್ರೈಮ್ ಮಾಸಿಕ ಪ್ಲಾನ್ ಪರಿಚಯಿಸಿದೆ. ಆದರೆ ಈ  129 ರೂವಿನ ಮಾಸಿಕ ಪ್ಲಾನ್ ಕೆಲವು ನಿಯಮಗಳನ್ನು ಹೊಂದಿದ್ದು, ಕೆಲವೊಂದು ಪಾವತಿ ವಿಧಾನಗಳ ಮೂಲಕ ಮಾತ್ರ ಅಳವಡಿಸಲು ಸಾಧ್ಯ.

ಅಮೆಜಾನ್ ಪ್ರೈಮ್ ವಿಡಿಯೋದ ರೂ. 129 ಪ್ಲಾನ್ ಅನ್ನು ನೀವು ಆಯ್ದ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾತ್ರ ಪಡೆಯಬಹುದು. RBI ಮಾರ್ಗಸೂಚಿಗಳನ್ನು ಅನುಸರಿಸದ ಯಾವುದೇ ಅಥವಾ ಎಲ್ಲಾ ಬ್ಯಾಂಕುಗಳ ಬಳಕೆದಾರರು ಅಮೆಜಾನ್ ನ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ತಮ್ಮ ಸದಸ್ಯತ್ವವನ್ನು ರದ್ದುಗೊಳಿಸಲು ಮರೆಯುವ ಗ್ರಾಹಕರಿಗೆ ಈ ಯೋಜನೆ ಉತ್ತಮವಾಗಿದೆ. RBI ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2021 ರಿಂದ ಜಾರಿಗೆ ಬಂದಿದೆ.

ಅಮೆಜಾನ್ ಪ್ರೈಮ್ ಚಂದಾದಾರಿಕೆಗಳಿಗಾಗಿ ಮೂರು ಚಂದಾದಾರಿಕೆಯನ್ನು ಪಟ್ಟಿ ಮಾಡಿದೆ- ವಾರ್ಷಿಕ ಯೋಜನೆ 999 ರೂ. ಮೂರು ತಿಂಗಳ ಯೋಜನೆ 329 ರೂ. ಮತ್ತು ಮಾಸಿಕ ಯೋಜನೆ 129 ರೂ. ಪರಿಚಯಿಸಿದೆ. ವಾರ್ಷಿಕ ಮತ್ತು ಮೂರು ತಿಂಗಳ ಯೋಜನೆಯನ್ನು ಎಲ್ಲಾ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೂಲಕ ಮಾಡಬಹುದು ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು. ಆದರೆ 129 ರೂ. ವಿನ ಯೋಜನೆಯನ್ನು ಕ್ರೆಡಿಟ್ ಕಾರ್ಡ್ ಅಥವಾ ಆಯ್ದ ಡೆಬಿಟ್ ಕಾರ್ಡ್ ಮೂಲಕ ಮಾತ್ರ ಖರೀದಿಸಬಹುದು.

ಅಮೆಜಾನ್​ನ ನಿಯಮಗಳು ಮತ್ತು ಷರತ್ತುಗಳ ಪುಟವು ಮಾಸಿಕ ಪ್ರೈಮ್ ಚಂದಾದಾರಿಕೆಯನ್ನು ಆರ್ಬಿಐನ ಇ-ಆದೇಶದ ಮಾರ್ಗಸೂಚಿಗಳನ್ನು ಅನುಸರಿಸಿದ ಬ್ಯಾಂಕುಗಳ ಮೂಲಕ ಖರೀದಿಸಬಹುದು ಎಂದು ಹೇಳಿದೆ. ಆರ್ಬಿಐನ ಮಾರ್ಗಸೂಚಿಗಳನ್ನು ಅನುಸರಿಸದ ಬ್ಯಾಂಕುಗಳು ಸ್ವಯಂಚಾಲಿತ ಪಾವತಿಗಳಿಗಾಗಿ ಯಾವುದೇ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ಈ ಮಾರ್ಗಸೂಚಿಗಳಿಂದಾಗಿ, ಅಮೆಜಾನ್ ಮುಂದಿನ ಸೂಚನೆ ಬರುವವರೆಗೂ ಅಮೆಜಾನ್ ಪ್ರೈಮ್ ಉಚಿತ ಪ್ರಯೋಗಕ್ಕಾಗಿ ಹೊಸ ಸದಸ್ಯರ ಸೈನ್-ಅಪ್ಗಳನ್ನು ನಿಲ್ಲಿಸಿದೆ.

ಕಳೆದ ಮೇ ತಿಂಗಳಲ್ಲಿ ಅಮೆಜಾನ್ ತನ್ನ ಒಂದು ತಿಂಗಳ ಯೋಜನೆಯನ್ನು ರದ್ದುಗೊಳಿಸಿತ್ತು.

WhatsApp: ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

ಫೇಸ್​ಬುಕ್​​, ವಾಟ್ಸ್​ಆ್ಯಪ್​ ಸರ್ವರ್ ಡೌನ್ ಆದ ದಿನ ಪಾರ್ನ್​ಹಬ್​ ಜಾಲತಾಣದ ಬಳಕೆ ಹೆಚ್ಚಳ

(Amazon Prime Amazon has reinstated its Rs 129 one-month Prime membership)

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?