Realme GT Neo 2: ಬಿಡುಗಡೆಗೆ ಕೇವಲ ಮೂರೇ ದಿನ ಬಾಕಿ: ಈ ಸ್ಮಾರ್ಟ್​ಫೋನ್​ಗಾಗಿ ಕಾದುಕುಳಿತಿರುವ ಮೊಬೈಲ್ ಪ್ರಿಯರು

TV9 Digital Desk

| Edited By: Vinay Bhat

Updated on: Oct 10, 2021 | 3:20 PM

Realme GT Neo 2 Price in India: ರಿಯಲ್‌ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನಿನ ಕ್ಯಾಮೆರಾ ವಿಶೇಷತೆಗಳಿಗೆ ಸಂಬಂಧಿಸಿದಂತೆ, ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ.

Realme GT Neo 2: ಬಿಡುಗಡೆಗೆ ಕೇವಲ ಮೂರೇ ದಿನ ಬಾಕಿ: ಈ ಸ್ಮಾರ್ಟ್​ಫೋನ್​ಗಾಗಿ ಕಾದುಕುಳಿತಿರುವ ಮೊಬೈಲ್ ಪ್ರಿಯರು
REALME GT NEO 2

Follow us on

ಇತ್ತಿಚಿಗಷ್ಟೇ ಚೀನಾ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ್ದ ರಿಯಲ್‌ ಮಿ (Realme) ಕಂಪನಿಯ ಬಹುನಿರೀಕ್ಷಿತ ನೂತನ ರಿಯಲ್‌ ಮಿ ಜಿಟಿ ನಿಯೋ 2 (Realme GT Neo 2) ಸ್ಮಾರ್ಟ್​​ಫೋನ್ ಇದೀಗ​ ಭಾರತದಲ್ಲಿ ಲಾಂಚ್ ಆಗಲು ಸಜ್ಜಾಗಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ತಿಳಿಸಿದ್ದು, ಇದೇ ಅಕ್ಟೋಬರ್ 13 ರಂದು ಭಾರತದಲ್ಲಿ ರಿಯಲ್‌ ಮಿ ಜಿಟಿ ನಿಯೋ 2 ಸ್ಮಾರ್ಟ್​ಫೋನ್ ಬಿಡುಗಡೆ ಆಗಲಿದೆ ಎಂದು ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಮಾಹಿತಿ ಹಂಚಿಕೊಂಡಿದೆ. ಸಾಕಷ್ಟು ವಿಶೇಷತೆಗಲಿಂದ ಕೂಡಿರುವ ಈ ಸ್ಮಾರ್ಟ್​ಫೋನ್ ಕೊಂಡುಕೊಳ್ಳಲು ಮೊಬೈಲ್ (Mobile) ಪ್ರಿಯರಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ರಿಯಲ್ ​​ಮಿ ಜಿಟಿ ನಿಯೋ 2 ಸ್ಮಾರ್ಟ್​ಫೋನ್ 6.62-ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು ಪೂರ್ಣ-ಎಚ್​ಡಿ + ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1,300  ಗರಿಷ್ಠ ಹೊಳಪನ್ನು ಹೊಂದಿದೆ. HDR10+ ಕಂಟೆಂಟ್, DC 600Hz ಟಚ್ ಸ್ಯಾಂಪ್ಲಿಂಗ್ ದರವನ್ನು ಸಹ ಬೆಂಬಲಿಸುತ್ತದೆ. 8GB RAM ಮತ್ತು 128GB ಅಂತರ್ನಿರ್ಮಿತ ಸಂಗ್ರಹಣೆಯನ್ನು ಪ್ಯಾಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇತ್ತೀಚಿನ ಆಂಡ್ರಾಯ್ಡ್ 11 ರನ್ ಮಾಡುತ್ತದೆ ಹಾಗೂ ಇದು ಶಕ್ತಿಯುತವಾದ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 55W ನ ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಪಡೆದುಕೊಂಡಿದೆ.

ರಿಯಲ್‌ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನಿನ ಕ್ಯಾಮೆರಾ ವಿಶೇಷತೆಗಳಿಗೆ ಸಂಬಂಧಿಸಿದಂತೆ, ಈ ರಿಯಲ್‌ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ. 8 ಮೆಗಾಪಿಕ್ಸೆಲ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಆಟೋಫೋಕಸ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಸೆಲ್ಫಿಗಳಿಗಾಗಿ ಸಿಂಗಲ್ ಫ್ರಂಟ್ ಕ್ಯಾಮೆರಾ ಸೆಟಪ್ ಹೊಂದಿದ್ದು, 16 ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಇನ್ನು ಎಐ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವುದನ್ನು ನೋಡಬಹುದು.

ಭಾರತದಲ್ಲಿ ಈ ಸ್ಮಾರ್ಟ್​ಫೊನ್​ನ ಬೆಲೆ ಅಂದಾಜು 30,000 ರೂ. ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ. ಚೀನಾದಲ್ಲಿ 8GB RAM + 128GB ಸ್ಟೋರೇಜ್ ವೇರಿಯಂಟ್​ನಲ್ಲಿ ಸಿಗುವ ರಿಯಲ್ ​ಮಿ ಜಿಟಿ ನಿಯೋ 2 ಸಿಎನ್​ವೈ  2,499 (ಭಾರತದಲ್ಲಿ ಅಂದಾಜು ರೂ. 28,500) ನಿಂದ ಆರಂಭವಾಗುತ್ತದೆ ಮತ್ತು ಟಾಪ್ 12 ಜಿಬಿ RAM + 256GB ಸ್ಟೋರೇಜ್ ಮಾಡೆಲ್​ಗೆ ಸಿಎನ್​ವೈ  2,999 (ಅಂದಾಜು ರೂ 34,200) ವರೆಗೆ ಇರಲಿದೆ. 8GB RAM + 128GB ಸ್ಟೋರೇಜ್ ಆಯ್ಕೆಯ ಫೋನ್ ಬೆಲೆ CNY 2,699 (ಅಂದಾಜು ರೂ. 30,800) ಇರಲಿದೆ. ಗ್ರಾಹಕರು ನಿಯೋ ಗ್ರೀನ್, ಪೇಲ್ ಬ್ಲೂ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇದೇ ಅಕ್ಟೋಬರ್ 13 ರಂದು ಮಧ್ಯಾಹ್ನ 12:30ಕ್ಕೆ ಭಾರತದಲ್ಲಿ ಈ ಸ್ಮಾರ್ಟ್​ಫೋನ್ ಅನಾವರಣಗೊಳ್ಳಲಿದೆ.

Amazon Great Indian Festival: ಅಮೆಜಾನ್​ನಲ್ಲಿ ಇನ್ನೂ ಮುಗಿದಿಲ್ಲ ಆಫರ್: ಭರ್ಜರಿ ಡಿಸ್ಕೌಂಟ್​ಗೆ ಈ ಸ್ಮಾರ್ಟ್​ಫೋನ್​ಗಳು

WhatsApp: ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

(REALME GT NEO2 New Smartphone LAUNCH EVENT TIME PRICE IN INDIA and KEY SPECS)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada