AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Great Indian Festival: ಅಮೆಜಾನ್​ನಲ್ಲಿ ಫ್ರಿಡ್ಜ್ ಮೇಲೆ ಬಂಪರ್ ಡಿಸ್ಕೌಂಟ್: ಇಂದೇ ಖರೀದಿಸಿ

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಯೋಜಿಸಿರುವ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಲೈವ್‌ ನಡೆಯುತ್ತಿದೆ. ಇದರಲ್ಲಿ ರೆಫ್ರಿಜರೇಟರ್ ಮೇಲೆ ಆಕರ್ಷಕ ಆಫರ್ ಘೋಷಿಸಿದೆ.

Amazon Great Indian Festival: ಅಮೆಜಾನ್​ನಲ್ಲಿ ಫ್ರಿಡ್ಜ್ ಮೇಲೆ ಬಂಪರ್ ಡಿಸ್ಕೌಂಟ್: ಇಂದೇ ಖರೀದಿಸಿ
Amazon Great Indian Festival
TV9 Web
| Updated By: Vinay Bhat|

Updated on: Oct 11, 2021 | 12:43 PM

Share

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಯೋಜಿಸಿರುವ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ (Amazon Great Indian Festival) ಲೈವ್‌ ನಡೆಯುತ್ತಿದೆ. ಎಂದಿನಂತೆ ಈ ಬಾರಿಯ ಸೇಲ್‌ನಲ್ಲೂ ಸ್ಮಾರ್ಟ್‌ಫೋನ್‌ಗಳು (Smartphone), ಸ್ಮಾರ್ಟ್‌ಟಿವಿ (Smart TV), ಲ್ಯಾಪ್‌ಟಾಪ್‌ (Laptop), ಫ್ರಿಡ್ಜ್ (Refrigerators ) ಮೇಲೆ ಬಿಗ್‌ ಡಿಸ್ಕೌಂಟ್‌ ಘೊಷಿಸಿದೆ. ಅದರಲ್ಲೂ ಫ್ರಿಡ್ಜ್ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದ್ದು, ಖರೀದಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಹೌದು, ನಮ್ಮ ಜೀವನ ಶೈಲಿ ಬದಲಾದಂತೆ ಗೃಹೋಪಯೋಗಿ ಉಪಕರಣಗಳನ್ನು ಬಳಸುವ ವಿಧಾನ ಕೂಡ ಬದಲಾಗುತ್ತಿದೆ. ಸದ್ಯ ಕೊರೊನಾ ವೈರಸ್‌ (Corona virus) ಬಂದ ನಂತರ ಹೆಚ್ಚಿನ ಜನರು ಮನೆಯಲ್ಲಿಯೇ ಇದ್ದು ಕೆಲಸ ಮಾಡುತ್ತಿರುವುದರಿಂದ, ಮನೆಯ ಗೃಹೋಪಯೋಗಿ ಉಪಕರಣಗಳ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿದೆ.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇ-ಕಾಮರ್ಸ್ ಮಾರುಕಟ್ಟೆ ಅಮೆಜಾನ್ ರೆಫ್ರಿಜರೇಟರ್ ಮೇಲೆ ಆಕರ್ಷಕ ಆಫರ್ ಘೋಷಿಸಿದೆ. ಸದ್ಯ ಸ್ಯಾಮ್​ಸಂಗ್ ಕಂಪನಿಯ 198 ಎಲ್ 5 ಸ್ಟಾರ್ ಸಿಂಗಲ್ ಡೋರ್ ಫ್ರಿಡ್ಜ್​ ಕೇವಲ 17,190 ರೂ. ಗೆ ಮಾರಾಟ ಆಗುತ್ತಿದೆ. ಹೈಎನರ್ಜಿ ಹೊಂದಿರುವ ಈ ಫ್ರಿಡ್ಜ್​ ಇನ್​ವರ್ಟರ್​ನಲ್ಲೂ ಕಡಿಮೆ ಚಾರ್ಜ್​ಗೆ ರನ್ ಆಗುತ್ತದೆ. ಸ್ಟಬಿಲೈಜರ್ ಫ್ರೀ ಆಗೂ ಬರುತ್ತದೆ.

ಇನ್ನೂ ಎಲ್​ಜಿ 190 ಎಲ್ 4 ಸ್ಟಾರ್ ಸಿಂಗಲ್ ಡೋರ್ ಫ್ರಿಡ್ಜ್ ಬೆಲೆ 15,490 ರೂ. ಆಗಿದೆ. ಈ ಫ್ರಿಡ್ಜ್​ ಒಳಗಡೆ ಸಾಕಷ್ಟು ಜಾಗವಿದ್ದು ಇಕ್ಕಟ್ಟಿನಲ್ಲಿ ಅನೇಕ ವಸ್ತುಗಳನ್ನು ಎಡುವ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲಿ ಮೂರು ಜನ ಇರುವ ಮಂದಿಗೆ ಈ ಫ್ರಿಡ್ಜ್​ ಹೇಳಿ ಮಾಡಿಸಿದ್ದು.

ವಿರ್​ಪೂಲ್ ಕಂಪನಿಯ 190 ಎಲ್ 4 ಸ್ಟಾರ್​ನ ಸಿಂಗಲ್ ಡೋರ್ ಫ್ರಿಡ್ಜ್ ಬೆಲೆ ಕೇವಲ 15,420 ರೂ. ಅಂತೆಯೆ ಸ್ಯಾಮ್​ಸಂಗ್ ಕಂಪೆನಿಯ 345 ಲೀಟರ್ 3 ಸ್ಟಾರ್ ಡಬಲ್ ಡೋರ್ ಫ್ರಿಡ್ಜ್​ ಕೂಡ ಭರ್ಜರಿ ಆಫರ್​ಗೆ ಲಭ್ಯವಿದ್ದು ಇದರ ಬೆಲೆ 35,790 ರೂ. ಆಗಿದೆ. ಹೈಯರ್ ಕಂಪನಿಯ 256 ಲೀಟರ್ 3 ಸ್ಟಾರ್ ಡಬಲ್ ಡೋರ್ ಫ್ರಿಡ್ಜ್​ ಕೂಡ ಕೇವಲ 23,490 ರೂ. ಗೆ ಸೇಲ್ ಕಾಣುತ್ತಿದೆ.

ಇನ್ನೂ ಫ್ರಿಡ್ಜ್​ ಜೊತೆಗೆ ಸ್ಮಾರ್ಟ್​ ಟಿವಿ ಕೂಡ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಶವೋಮಿ ಕಂಪನಿಯ ಎಂಐ 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ ಅಮೆಜಾನ್‌ ಸೇಲ್‌ನಲ್ಲಿ 7% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 29,999ರೂ.ಆಗಿದ್ದು, ರಿಯಾಯಿತಿ ದರದಲ್ಲಿ 27,999ರೂ,ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840×2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ 4K ಅಲ್ಟ್ರಾ HD ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್‌ಟಿವಿ ಸ್ಪೀಕರ್‌ಗಳು ಅಥವಾ ಗೇಮಿಂಗ್ ಕನ್ಸೋಲ್ ಅನ್ನು ಸಂಪರ್ಕಿಸಲು 3 HDMI ಪೋರ್ಟ್‌ ಹೊಂದಿದೆ. ಇದರಲ್ಲಿ ಹಾರ್ಡ್ ಡ್ರೈವ್‌ಗಳು ಅಥವಾ ಇತರ ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸಲು 2 ಯುಎಸ್‌ಬಿ ಪೋರ್ಟ್‌ಗಳನ್ನು ನೀಡಲಾಗಿದೆ.ಇದು ಇಂಟರ್‌ಬಿಲ್ಟ್‌ ವೈ-ಫೈ, ಹೊಂದಿದ್ದು, ನೆಟ್​ಫ್ಲಿಕ್ಸ್​, ಪ್ರೈಮ್‌ ವೀಡಿಯೊ, ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌ಗೆ ಪ್ರವೇಶವನ್ನು ನೀಡಲಿದೆ.

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ಪ್ರೊ ಸರಣಿಯ ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್‌ ಎಲ್‌ಇಡಿ ಸ್ಮಾರ್ಟ್‌ಟಿವಿ ಕೂಡ 29% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದು ರಿಯಾಯಿತಿ ದರದಲ್ಲಿ 38,990ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೇಮಿಂಗ್ ಕನ್ಸೋಲ್ ಅನ್ನು ಸಂಪರ್ಕಿಸಲು 3 HDMI ಪೋರ್ಟ್‌ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ ಟಿವಿ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಜೀ 5 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ

Realme GT Neo 2: ಬಿಡುಗಡೆಗೆ ಕೇವಲ ಮೂರೇ ದಿನ ಬಾಕಿ: ಈ ಸ್ಮಾರ್ಟ್​ಫೋನ್​ಗಾಗಿ ಕಾದುಕುಳಿತಿರುವ ಮೊಬೈಲ್ ಪ್ರಿಯರು

(Amazon Great Indian Festival 2021 Biggest Deals on Refrigerators)