OnePlus 9RT: ಬಿಡುಗಡೆಗೆ ಸಜ್ಜಾದ ವಿಶೇಷ ವಿನ್ಯಾಸದ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್: ಇದರಲ್ಲಿದೆ ಸಾಕಷ್ಟು ವಿಶೇಷತೆ

ಕಂಪನಿ ಮಾತ್ರ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್ ಬಗ್ಗೆ ಯಾವುದೇ ಮಾಹಿತಿಯನ್ನು ಈವರೆಗೆ ಹಂಚಿಕೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 888 SoC ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಬರಲಿದೆಯಂತೆ.

OnePlus 9RT: ಬಿಡುಗಡೆಗೆ ಸಜ್ಜಾದ ವಿಶೇಷ ವಿನ್ಯಾಸದ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್: ಇದರಲ್ಲಿದೆ ಸಾಕಷ್ಟು ವಿಶೇಷತೆ
OnePlus 9RT
Follow us
TV9 Web
| Updated By: Vinay Bhat

Updated on: Oct 11, 2021 | 2:28 PM

ದಿನದಿಂದ ದಿನಕ್ಕೆ ಸ್ಮಾರ್ಟ್​ಫೋನ್ (Smartphone) ಜಗತ್ತು ಹೊಸ ರೂಪ ಪಡೆದುಕೊಳ್ಳುತ್ತಿದೆ. ನಾನಾ ಬಗೆಯ ವಿಶೇಷ ಮೊಬೈಲ್​ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಸದ್ಯ ಇದೇ ಸಾಲಿನಲ್ಲಿ ಒನ್​ಪ್ಲಸ್ (OnePlus) ಕಂಪನಿ ಕೂಡ ಸಾಗುತ್ತಿದ್ದು ಒನ್ ಪ್ಲಸ್ 9 ಸರಣಿಯಲ್ಲಿ ತನ್ನ ಹೊಸ ವಿನ್ಯಾಸದ ಒನ್​ಪ್ಲಸ್ 9ಆರ್​ಟಿ (OnePlus 9RT) ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಒನ್ ಪ್ಲಸ್ 9Rನ (OnePlus 9R) ಮುಂದುವರಿದ ಆವೃತ್ತಿ ಒನ್​ಪ್ಲಸ್ 9RT ಆಗಿದ್ದು, ಇದೇ ಅಕ್ಟೋಬರ್ 13 ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ.

ಕಂಪನಿ ಮಾತ್ರ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್ ಬಗ್ಗೆ ಯಾವುದೇ ಮಾಹಿತಿಯನ್ನು ಈವರೆಗೆ ಹಂಚಿಕೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 888 SoC ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಬರಲಿದೆಯಂತೆ. ಒನ್​ಪ್ಲಸ್ 9 ಸರಣಿಯಂತೆ ಇದೊಂದು 5G ಸ್ಮಾರ್ಟ್​​ಫೋನ್ ಆಗಿದೆ. 12GB RAM ಇರಲಿದೆ.

1,080×2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.55 AMOLED ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದ್ದು, 120Hz E4 ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿರಲಿದೆ.

ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ ಎಂಬ ಮಾತಿದೆ. 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಇರಬಹುದು..

ಇನ್ನೂ ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿರುವುದು ಖಚಿತವಾಗಿದೆ. ಇದಕ್ಕೆ 65T Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್, ಲೇಸರ್ ಸೆನ್ಸರ್ ಸೇರಿವೆ.

ಒನ್ ಪ್ಲಸ್ 9RT ಬೆಲೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದಾಗ್ಯೂ ಇತ್ತೀಚಿನ ವರದಿ ಹೊಸ ಸ್ಮಾರ್ಟ್ ಫೋನ್ CNY 2000 (ಸರಿ ಸುಮಾರು ರೂ. 23,300) ಮತ್ತು CNY 3000 (ಸರಿಸುಮಾರು ರೂ. 34900) ನಡುವೆ ಲಭ್ಯವಿರುತ್ತದೆ ಎಂದು ಹೇಳಿದೆ.

ನೀವು ವಾಟ್ಸ್​ಆ್ಯಪ್​ನಲ್ಲಿ ವಾಯ್ಸ್ ಮೆಸೇಜ್ ಹೆಚ್ಚು ಉಪಯೋಗಿಸ್ತೀರಾ?: ಹಾಗಾದ್ರೆ ಈ ಸ್ಟೋರಿ ಓದಿ

Amazon Great Indian Festival: ಅಮೆಜಾನ್​ನಲ್ಲಿ ಫ್ರಿಡ್ಜ್ ಮೇಲೆ ಬಂಪರ್ ಡಿಸ್ಕೌಂಟ್: ಇಂದೇ ಖರೀದಿಸಿ

(OnePlus 9RT OnePlus has announced to unveil its next OnePlus 9 series phone on October 13)