AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Broadband Plans: 1,500 ರೂ. ಒಳಗಿನ ಏರ್ಟೆಲ್ ಎಕ್ಸ್‌ಸ್ಟ್ರೀಮ್​​, ಜಿಯೋ ಫೈಬರ್, ಬಿಎಸ್​ಎನ್​ಎಲ್ ಬ್ರಾಡ್​ಬ್ಯಾಂಡ್ ಪ್ಲಾನ್​ನಲ್ಲಿ ಬಂಪರ್ ಆಫರ್

Best Broadband Plans Under Rs 1500: ಜಿಯೋ ಫೈಬರ್ 699 ರೂಪಾಯಿಯ ಬ್ರಾಡ್​ಬ್ಯಾಂಡ್​ ಪ್ಲಾನ್ 60Mbps ವೇಗದಲ್ಲಿ ಅನಿಯಮಿತ ಇಂಟರ್​ನೆಟ್​ ನೀಡುತ್ತದೆ. ಈ ಯೋಜನೆಯು ಜಿಯೋ ಆ್ಯಪ್​ಗಳನ್ನು ಹೊರತುಪಡಿಸಿ ಹೆಚ್ಚುವರಿ OTT ಚಂದಾದಾರಿಕೆಗಳೊಂದಿಗೆ ಬರುವುದಿಲ್ಲ.

Best Broadband Plans: 1,500 ರೂ. ಒಳಗಿನ ಏರ್ಟೆಲ್ ಎಕ್ಸ್‌ಸ್ಟ್ರೀಮ್​​, ಜಿಯೋ ಫೈಬರ್, ಬಿಎಸ್​ಎನ್​ಎಲ್ ಬ್ರಾಡ್​ಬ್ಯಾಂಡ್ ಪ್ಲಾನ್​ನಲ್ಲಿ ಬಂಪರ್ ಆಫರ್
best broadband plans
TV9 Web
| Edited By: |

Updated on: Oct 12, 2021 | 2:13 PM

Share

ದೇಶದ ಇಂಟರ್‌ನೆಟ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಫೈಬರ್ (JioFiber ) ಪ್ರವೇಶದ ಬಳಿಕ ಪ್ರಮುಖ ಟೆಲಿಕಾಂ ಕಂಪೆನಿ ಏರ್ಟೆಲ್ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಭಾರೀ ಸ್ಪರ್ಧೆ ನಡೆಸುತ್ತಿದೆ. ರಿಲಯನ್ಸ್ ಜಿಯೋ ಫೈಬರ್​ಗೆ ಟ್ಟಕರ್ ಕೊಡಲು ಏರ್ಟೆಲ್ (Airtel) ಎಕ್ಸ್‌ಸ್ಟ್ರೀಮ್ ಸೇವೆಗಳನ್ನು ಭರ್ಜರಿ ಆಫರ್​ನಲ್ಲಿ ಬಿಡುಗಡೆ ಮಾಡುತ್ತಿದೆ. ಇತ್ತ ಬಿಎಸ್​ಎನ್​ಎಲ್ ಕೂಡ ಇದರಲ್ಲಿ ಹಿಂದೆಬಿದ್ದಿಲ್ಲ. ಆನ್​ಲೈನ್ ತರಗತಿಗಳು, ಸ್ಟ್ರೀಮಿಂಗ್ ಶೋಗಳು, ಇನ್ನಿತರ ಬಳಕೆಗಾಗಿ ದಿನನಿತ್ಯದ ಇಂಟರ್​ನೆಟ್​ ಸಾಕಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಜಿಯೋ ಫೈಬರ್, ಏರ್ಟೆಲ್ ಎಕ್ಸ್‌ಸ್ಟ್ರೀಮ್​​ (Airtel Xstream), ಬಿಎಸ್ಎನ್ಎಲ್ (BSNL) ಭಾರತ್ ಫೈಬರ್ ಬಂಪರ್ ಆಫರ್​ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ದಿನನಿತ್ಯದ 1,500 ರೂ. ಕ್ಕಿಂತ ಕಡಿಮೆ ಬೆಲೆಯ ವಿವಿಧ ಪ್ಲಾನ್​ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಜಿಯೋ ಫೈಬರ್ 699 ರೂಪಾಯಿಯ ಬ್ರಾಡ್​ಬ್ಯಾಂಡ್​ ಪ್ಲಾನ್ 60Mbps ವೇಗದಲ್ಲಿ ಅನಿಯಮಿತ ಇಂಟರ್​ನೆಟ್​ ನೀಡುತ್ತದೆ. ಈ ಯೋಜನೆಯು ಜಿಯೋ ಆ್ಯಪ್​ಗಳನ್ನು ಹೊರತುಪಡಿಸಿ ಹೆಚ್ಚುವರಿ OTT ಚಂದಾದಾರಿಕೆಗಳೊಂದಿಗೆ ಬರುವುದಿಲ್ಲ. ಆದರೆ ಅನಿಯಮಿತ ಕರೆಯ ಸೌಲಭ್ಯವನ್ನು ನೀಡುತ್ತದೆ. ಇದರ ಜೊತೆಗೆ ಜಿಯೋಫೈಬರ್ 999 ರೂಪಾಯಿಯ ಬ್ರಾಡ್​ಬ್ಯಾಂಡ್​ ಪ್ಲಾನ್ 150Mbps ವರೆಗಿನ ಡೌನ್ಲೋಡ್ ಮತ್ತು ಅಪ್ಲೋಡ್ ವೇಗ ಮತ್ತು ಅನಿಯಮಿತ ಇಂಟರ್​ನೆಟ್​ನೊಂದಿಗೆ ಬರುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ ಸ್ಟಾರ್, ಸೋನಿ ಎಲ್ಐವಿ, ಜೀ 5, ಆಲ್ಟ್ ಬಾಲಾಜಿ ಸೇರಿದಂತೆ 14 OTT ಆ್ಯಪ್​ಗಳಿಗೆ ವೀಕ್ಷಿಸುವ ಪ್ರಯೋಜನ ನೀಡುತ್ತದೆ.

ಏರ್ಟೆಲ್ ಎಕ್ಸ್‌ಸ್ಟ್ರೀಮ್​ನಲ್ಲಿ 799 ರೂ. ವಿನ ಬ್ರಾಡ್​ಬ್ಯಾಂಡ್ ಯೋಜನೆಯು 70 Mbps ವೇಗದೊಂದಿಗೆ ಅನಿಯಮಿತ ಇಂಟರ್​ನೆಟ್ ನೀಡುತ್ತದೆ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಯಂತಹ ಇತರ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ನೀವು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್, ವೂಟ್ ಬೇಸಿಕ್, ಎರೋಸ್ ನೌ, ಹಂಗಾಮ ಪ್ಲೇ, ಬಳಸಬಹುದಾಗಿದೆ. ಏರ್ಟೆಲ್​ನ ಇನ್ನೊಂದು 999 ರೂ. ವಿನ ಬ್ರಾಡ್​ಬ್ಯಾಂಡ್ ಪ್ಲಾನ್ ಮೂಲಕ ಅನಿಯಮಿತ ಕರೆ ಮತ್ತು 200 Mbps ವೇಗದ ಇಂಟರ್​ನೆಟ್​ ಅನ್ನು ನೀಡುತ್ತದೆ. ಇದು Zee5, Amazon Prime, Disney+ Hotstar ಗೆ VIP ಚಂದಾದಾರಿಕೆ ಮತ್ತು Airtel XStream ಅಪ್ಲಿಕೇಶನ್​ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್​ಗಳಿಗೆ ಪ್ರವೇಶವನ್ನು ನೀಡುತ್ತದೆ.

ಇನ್ನೂ BSNL ಭಾರತ್ ಫೈಬರ್​ನ 799 ರೂ. ಬ್ರಾಡ್​ಬ್ಯಾಂಡ್ ಯೋಜನೆಯು 100 Mbps ವೇಗವನ್ನು 3300GB ಅಥವಾ 3.3 TB ಅಥವಾ 3300GB ಡೇಟಾವನ್ನು ನೀಡುತ್ತದೆ. FUP ಮಿತಿಯನ್ನು ತಲುಪಿದ ನಂತರ, ವೇಗವನ್ನು 2 Mbps ಗೆ ಇಳಿಸಲಾಗುತ್ತದೆ. BSNL ಇತ್ತೀಚೆಗೆ ಭಾರತ್ ಫೈಬರ್ ಸೂಪರ್ಸ್ಟಾರ್ ಪ್ರೀಮಿಯಂ ಎಂಬ OTT ಪ್ರಯೋಜನಗಳನ್ನು ಹೊಂದಿರುವ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ರೂ 749 ಬೆಲೆಯಿದೆ ಮತ್ತು 100 Mbps ವೇಗವನ್ನು 100 GB ವರೆಗೆ ನೀಡುತ್ತದೆ. ನಂತರ ಅದನ್ನು 5 Mbps ಗೆ ಇಳಿಸಲಾಗುತ್ತದೆ. ಈ ಯೋಜನೆ ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ.

Flipkart Big Billion Days sale 2021: ಐಪೋನ್ ಖರೀದಿಸಲು ಈಗ ಹೆಚ್ಚು ಹಣ ಬೇಡ: ಕೇವಲ 30,000 ರೂ. ಇದ್ದರೆ ಸಾಕು

OnePlus 9RT: ಬಿಡುಗಡೆಗೆ ಸಜ್ಜಾದ ವಿಶೇಷ ವಿನ್ಯಾಸದ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್: ಇದರಲ್ಲಿದೆ ಸಾಕಷ್ಟು ವಿಶೇಷತೆ

(Airtel XStream JioFiber and BSNL Bharat Fiber offer a range of broadband plans that are priced under Rs 1500)

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ