Flipkart Big Billion Days sale 2021: ಐಪೋನ್ ಖರೀದಿಸಲು ಈಗ ಹೆಚ್ಚು ಹಣ ಬೇಡ: ಕೇವಲ 30,000 ರೂ. ಇದ್ದರೆ ಸಾಕು

Flipkart Navaratri offers: ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಐಫೋನ್ ಎಸ್‌ಇ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ. 64GB ಸ್ಟೋರೇಜ್ ಮಾದರಿದ ಮೂಲಬೆಲೆ ಕೇವಲ 30,199 ರೂ. ಆಗಿದ್ದು, ಅತಿ ಕಡಿಮಮೆ ಬೆಲೆಗೆ ಮಾರಾಟ ಕಾಣುತ್ತಿದೆ.

Flipkart Big Billion Days sale 2021: ಐಪೋನ್ ಖರೀದಿಸಲು ಈಗ ಹೆಚ್ಚು ಹಣ ಬೇಡ: ಕೇವಲ 30,000 ರೂ. ಇದ್ದರೆ ಸಾಕು
Flipkart iPhone Discount

ಭಾರತದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ 2021 ಸೇಲ್ (Flipkart Big Billion Days sale) ಭರ್ಜರಿ ಆಗಿ ಸಾಗುತ್ತಿದೆ. ಈ ಮೇಳದಲ್ಲಿ ಆ್ಯಪಲ್‌ ಕಂಪೆನಿಯ ಆಯ್ದ ಐಫೋನ್‌ಗಳಿಗೆ (Apple iPhone 12) ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಅಕ್ಟೋಬರ್ 3 ರಿಂದ ಬಿಗ್ ಬಿಲಿಯನ್ ಡೇಸ್ 2021 ಆರಂಭವಾಗಿದ್ದು ಅನೇಕ ಪ್ರಾಡಕ್ಟ್​ಗಳು ಬಂಪರ್ ಡಿಸ್ಕೌಂಟ್​ನಲ್ಲಿ ಸಿಗುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021 ಪ್ಲಸ್ ಸೇಲ್ ಮುಗಿದ ನಂತರ ಎಲ್ಲಾ ಗ್ರಾಹಕರಿಗೂ ಫ್ಲಾಶ್ ಸೇಲ್ ಮಾರಾಟದಲ್ಲಿ ಹಲವು ಉತ್ಪನ್ನಗಳನ್ನು ಖರೀದಿಸುವ ಅವಕಾಶವನ್ನು ಫ್ಲಿಪ್‌ಕಾರ್ಟ್ ನೀಡಿದೆ.

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಐಫೋನ್ ಎಸ್‌ಇ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ. 64GB ಸ್ಟೋರೇಜ್ ಮಾದರಿದ ಮೂಲಬೆಲೆ ಕೇವಲ 30,199 ರೂ. ಆಗಿದ್ದು, ಐಸಿಐಸಿಐ ಬ್ಯಾಂಕ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,500 ರೂ. ಡಿಸ್ಕೌಂಟ್ ಕೂಡ ಇದೆ. ಒಂದು ವೇಳೆ ನೀವು ಎಕ್ಸ್​ಚೇಂಜ್ ಆಫರ್ ಮೂಲಕ ಖರೀದಿಸಲು ಬಯಸಿದರೆ ನಿಮ್ಮ ಹಳೇಯ ಮೊಬೈಲ್​ಗೆ 15,600 ರೂ. ವರೆಗೆ ಹಣವನ್ನೂ ಪಡೆಯಬಹುದು.

ಕಳೆದ ವರ್ಷ  128GB ಸ್ಟೋರೇಜ್ ಆಯ್ಕೆಗೆ ಐಫೋನ್​ ಎಸ್​ಇ ರೂ. 30,999 ಕ್ಕೆ ಮಾರಾಟ ಮಾಡಿತ್ತು. ಅಂತೆಯೇ 256GB ಆಯ್ಕೆಯ ಬೆಲೆ  40,999 ಆಗಿತ್ತು. ಇದೀಗ ಫ್ಲಿಪ್‌ಕಾರ್ಟ್ ಕಡಿಮೆ ಬೆಲೆ ಸೇಲ್​ ಮಾಡುತ್ತಿದೆ. ಅದರ ಜೊತೆಗೆ ಕರ್ಟೈನ್ ರೈಸರ್‌ನ ಒಂದು ಭಾಗವಾಗಿ ಆಯ್ದ ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೂ ಕೊಡುಗೆಗಳನ್ನು ನೀಡಿದೆ. ಗಮನಾರ್ಹವಾಗಿ, ಗ್ರಾಹಕರು ಕೆಲವು ಮಾರಾಟದ ಕೊಡುಗೆಗಳನ್ನು ಪಡೆಯುವ ಮೂಲಕ ಐಫೋನ್ ಎಸ್‌ಇ ಅನ್ನು ಕಡಿಮೆ ಬೆಲೆಗೆ ಕೊಂಡೊಯ್ಯಬಹುದಾಗಿದೆ.

ಆ್ಯಪಲ್ ಐಫೋನ್ ಎಸ್‌ಇ 4.7 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ ಡಾಲ್ಬಿ ವಿಷನ್ ಮತ್ತು HDR10ನೊಂದಿಗೆ ಬರುತ್ತದೆ.  ಆ್ಯಪಲ್ A13 ಬಯೋನಿಕ್ ಚಿಪ್ ಅನ್ನು ಅಳವಡಿತ್ತಾ ಬಂದಿದೆ. ಇದು ಆ್ಯಪಲ್ ಐಫೋನ್ 11 ಲೈನ್‌ಅಪ್‌ಗೆ ಶಕ್ತಿಯನ್ನು ನೀಡುತ್ತದೆ.

ಇನ್ನೂಬಿಗ್ ಬಿಲಿಯನ್ ಡೇಸ್ 2021 ಮಾರಾಟದಲ್ಲಿ ಆ್ಯಪಲ್‌ನ ಐಫೋನ್ 12 ಮತ್ತು ಐಫೋನ್ 12 ಮಿನಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಐಫೋನ್ 12 (64 ಜಿಬಿ) ರೂ. 49,999 ಆಗಿದ್ದು, ಐಫೋನ್ 12 ಮಿನಿ (64 ಜಿಬಿ) ರೂ. 42,999 ರೂ. ಗೆ ನಿಮ್ಮದಾಗಿಸ ಬಹುದು. ಐಫೋನ್ 12 ಸರಣಿಯ ಮಾದರಿಗಳು ಭಾರತದಲ್ಲಿ ಪ್ರಾರಂಭವಾದಾಗಿನಿಂದ ನಾವು ನೋಡಿದ ಅತ್ಯಂತ ಕಡಿಮೆ ಬೆಲೆಗಳು ಇದಾಗಿದ್ದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 15,800. ಮೌಲ್ಯದ ವಿನಿಮಯ ಕೊಡುಗೆಗಳನ್ನು ಒಳಗೊಂಡಿದೆ.

OnePlus 9RT: ಬಿಡುಗಡೆಗೆ ಸಜ್ಜಾದ ವಿಶೇಷ ವಿನ್ಯಾಸದ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್: ಇದರಲ್ಲಿದೆ ಸಾಕಷ್ಟು ವಿಶೇಷತೆ

ನೀವು ವಾಟ್ಸ್​ಆ್ಯಪ್​ನಲ್ಲಿ ವಾಯ್ಸ್ ಮೆಸೇಜ್ ಹೆಚ್ಚು ಉಪಯೋಗಿಸ್ತೀರಾ?: ಹಾಗಾದ್ರೆ ಈ ಸ್ಟೋರಿ ಓದಿ

(Flipkart Navaratri offers for the year 2021 are here Big Discount Offers On Apple iPhones)

Read Full Article

Click on your DTH Provider to Add TV9 Kannada