ಫೇಸ್ಬುಕ್, ವಾಟ್ಸ್ಆ್ಯಪ್ ಸರ್ವರ್ ಡೌನ್ ಆದ ದಿನ ಪಾರ್ನ್ಹಬ್ ಜಾಲತಾಣದ ಬಳಕೆ ಹೆಚ್ಚಳ
ಸಾಮಾಜಿಕ ಜಾಲತಾಣಗಳನ್ನು ಬಳಸಲು ಸಾಧ್ಯವಾಗದೇ ಜನರು ಪಾರ್ನ್ ಸೈಟ್ಗಳತ್ತ ಮುಖ ಮಾಡಿದ್ದರು ಎಂಬುದು ತಿಳಿದುಬಂದಿದೆ.
ಕಳೆದ ಸೋಮವಾರ ಸರ್ವರ್ ದೋಷದಿಂದ 6 ಗಂಟೆಗಳ ಕಾಲ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಬಳಕೆದಾರರು ಫಜೀತಿ ಅನುಭವಿಸಿದ್ದರು. ಈ ಅವಧಿಯನ್ನು ಟೆಲಿಗ್ರಾಂ ಸೇರಿದಂತೆ ಹಲವು ಇತರ ಕಂಪನಿಗಳು ಅವಕಾಶವನ್ನಾಗಿ ಬಳಸಿಕೊಂಡು ತಮ್ಮ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದವು. ಫೇಸ್ಬುಕ್, ವಾಟ್ಸ್ಆ್ಯಪ್, ಮತ್ತು ಇನ್ಸ್ಟಾಗ್ರಾಂ ಸರ್ವರ್ ದೋಷದಿಂದ ಇನ್ನೊಂದು ಜಾಲತಾಣವೊಂದು ಲಾಭ ಮಾಡಿಕೊಂಡ ಸುದ್ದಿಯೊಂದು ಇದೀಗ ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳನ್ನು ಬಳಸಲು ಸಾಧ್ಯವಾಗದೇ ಜನರು ಪಾರ್ನ್ ಸೈಟ್ಗಳತ್ತ ಮುಖ ಮಾಡಿದ್ದರು ಎಂಬುದು ತಿಳಿದುಬಂದಿದೆ. ಅದರಲ್ಲೂ ಪಾರ್ನ್ಹಬ್ ಜಾಲತಾಣದ ಬಳಕೆದಾರರಲ್ಲಿ ಶೇಕಡಾ 10.5ರಷ್ಟು ಏರಿಕೆ ಫೇಸ್ಬುಕ್ ಸರ್ವರ್ ದೋಷ ಉಂಟಾದ ಅವಧಿಯಲ್ಲಿ ಕಂಡುಬಂದಿದೆ. ಭಾರತದಲ್ಲಿ ಪಾರ್ನ್ ವೆಬ್ ಪೋರ್ಟಲ್ಗಳಿಗೆ ನಿಷೇಧವಿದ್ದರೂ ಸಹ ಪಾರ್ನ್ಹಬ್ ಸೇರಿ ಕೆಲವು ಜಾಲತಾಣಗಳ ಬಳಕೆದಾರರಲ್ಲಿ ಹೆಚ್ಚಳ ಕಂಡುಬಂದಿದೆ.
ಒಬ್ಬನ ಭಾರಿ ನಷ್ಟ ಮತ್ತೊಬ್ಬನಿಗೆ ಭಾರಿ ಲಾಭ. ಕಾರ್ಪೋರೇಟ್ ವಿಶ್ವದಲ್ಲಿ ಆಗೋದೇ ಹಾಗೆ. ಸೋಮವಾರ ಫೇಸ್ಬುಕ್ ಮತ್ತು ಅದರ ಎರಡು ಪ್ಲಾಟ್ಫಾರ್ಮ್ಗಳಾದ ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಸೇವೆಗಳಲ್ಲಿ 6 ಗಂಟೆ ವ್ಯತ್ಯಯ ಉಂಟಾಗಿದ್ದರಿಂದ ಅದರ ಸಿಈಓ ಮಾರ್ಕ್ ಝಕರ್ಬರ್ಗ್ ರೂ. 52,000 ಕೋಟಿ ಕಳೆದುಕೊಂಡಿದ್ದಷ್ಟೇ ಅಲ್ಲ ಅದರೊಂದಿಗೆ ಅಪಾರ ಪ್ರಮಾಣದ ಗ್ರಾಹಕರನ್ನೂ ಕಳೆದುಕೊಂಡಿದ್ದಾರೆ. ಫೇಸ್ಬುಕ್ ಪ್ರತಿಸ್ಪರ್ಧಿ ಟೆಲಿಗ್ರಾಮ್ ಆ ಒಂದು ದಿನದ ಅವಧಿಯಲ್ಲಿ ಸುಮಾರು 7 ಕೋಟಿ ಹೊಸ ಗ್ರಾಹಕರನ್ನು ಸಂಪಾದಿಸಿಕೊಂಡಿದೆಯಂತೆ!
ಟೆಲಿಗ್ರಾಮ್ ಫ್ಲಾಟ್ಫಾರ್ಮ್ ಸಿಇಒ ಪವೆಲ್ ಡುರೊವ್ ಅವರು ತಮ್ಮ ಚ್ಯಾನೆಲ್ನಲ್ಲಿ ‘ಬೇರೆ ಫ್ಲಾಟ್ಫಾರ್ಮ್ ಗಳ ಸುಮಾರು 70 ಮಿಲಿಯನ್ ನಿರಾಶ್ರಿತರನ್ನು ನಾವು ಒಂದು ದಿನದಲ್ಲಿ ಬರಮಾಡಿಕೊಂಡಿದ್ದೇವೆ,’ ಎಂದು ಹೇಳಿದ್ದು ಗ್ರಾಹಕರ ನೋಂದಣಿ ಕಾರ್ಯವನ್ನು ಭರದಿಂದ ಮಾಡಿರುವ ತಮ್ಮ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ:
Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್
ಫೇಸ್ಬುಕ್ ಮತ್ತು ಅದರ ಎರಡು ಪ್ಲಾಟ್ಫಾರ್ಮ್ಗಳಲ್ಲಿ ವ್ಯತ್ಯಯ ಉಂಟಾಗಿದ್ದಕ್ಕೆ ಅಸಲಿ ಕಾರಣವಿದು!