Apple iPhone 12: ಆಪಲ್ ಐಫೋನ್ ಖರೀದಿಗೆ ಪುಕ್ಕಟೆ ಏರ್ಪಾಡ್ಸ್ ಅಥವಾ ಏರ್ಪಾಡ್ಸ್ ಪ್ರೊಗೆ ಭಾರೀ ರಿಯಾಯಿತಿ
ಆಪಲ್ ಕಂಪೆನಿಯ ಐಫೋನ್ 12 ಹಾಗೂ 12 ಮಿನಿ ಮೇಲೆ ಭಾರೀ ಡಿಸ್ಕಾಂಟ್ ಘೋಷಣೆ ಮಾಡಲಾಗಿದೆ. ಏನು ಆ ಹೊಸ ಆಫರ್ ಎಂಬುದುರ ಬಗ್ಗೆ ವಿವರ ಇಲ್ಲಿದೆ.
ಆಪಲ್ನಿಂದ ಕಳೆದ ವರ್ಷದ ಐಫೋನ್ 12ರ ಮೇಲೆ ವಿಶೇಷ ದೀಪಾವಳಿ ಆಫರ್ ಘೋಷಣೆ ಮಾಡಲಾಗಿದೆ. ಐಫೋನ್ 12 ಮತ್ತು ಐಫೋನ್ 12 ಮಿನಿ ಖರೀದಿದಾರರು ಈ ಆಫರ್ಗೆ ಅರ್ಹರು. ಆಪಲ್ ಐಫೋನ್ 12 ಮತ್ತು ಐಫೋನ್ 12 ಮಿನಿ ಖರೀದಿ ಜತೆಗೆ ಏರ್ಪಾಡ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕವಾಗಿ ಆಪಲ್ ಖರೀದಿದಾರರು ಈ ಹೊಸ ಆಫರ್ ಪಡೆಯಬಹುದು. ಐಫೋನ್ 12ರ ಪುಟಕ್ಕೆ ತೆರಳಿ ತಮ್ಮ ಆಯ್ಕೆಯ, ಅಂದರೆ 64GB, 128GB ಅಥವಾ 256GB ಪೈಕಿ ಒಂದನ್ನು ಹಾಗೂ ಅದೇ ರೀತಿ ಆರು ಬಣ್ಣಗಳಲ್ಲಿ (ನೇರಳೆ, ನೀಲಿ, ಹಸಿರು, ಬಿಳಿ, ಕಪ್ಪು ಮತ್ತು ಕೆಂಪು) ಈ ಪೈಕಿ ಒಂದನ್ನು ಆರಿಸಿಕೊಳ್ಳಬೇಕು.
ಹೀಗೆ ಆಯ್ಕೆ ಮಾಡಿದ ಮೇಲೆ Continue ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಆ ನಂತರ ತೆರೆದುಕೊಳ್ಳುವ ಪುಟದಲ್ಲಿ ತಮ್ಮ ಆಯ್ಕೆಯ ಆಫರ್ ಅನ್ನು ಆರಿಸಿಕೊಳ್ಳಬಹುದು. ಮೊದಲನೆಯದು, ಏರ್ಪಾಡ್ಸ್ ಹಾಗೂ ಜತೆಗೆ ಚಾರ್ಜಿಂಗ್ ಕೇಸ್. ಇದಕ್ಕೆ ಖರೀದಿದಾರರು ಏನನ್ನೂ ಪಾವತಿಸುವ ಅಗತ್ಯ ಇಲ್ಲ. ಎರಡನೆಯದು, ಏರ್ಪಾಡ್ಸ್ ಜತೆಗೆ ವಯರ್ಲೆಸ್ ಚಾರ್ಜಿಂಗ್. ಇದಕ್ಕಾಗಿ ಖರೀದಿದಾರರು 4000 ರೂಪಾಯಿ ಪಾವತಿಸಬೇಕು. ಇನ್ನು ಏರ್ಪಾಡ್ಸ್ ಪ್ರೊಗಾಗಿ ಖರೀದಿಯ ಸಂದರ್ಭದಲ್ಲಿ ಹೆಚ್ಚುವರಿಯಾಗಿ 10,000 ರೂಪಾಯಿ ಕೊಡಬೇಕಾಗುತ್ತದೆ. ಅಂತಿಮ ಹಂತವು ಖರೀದಿಸಿದ ಉತ್ಪನ್ನಗಳಿಗೆ ಪಾವತಿ ಮಾಡುವುದಾಗಿದೆ.
ಆಪಲ್ ಐಫೋನ್ 12 ಅನ್ನು ಫ್ಲಿಪ್ಕಾರ್ಟ್ನಲ್ಲಿ ರಿಯಾಯಿತಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಭಾರೀ ದರ ಕಡಿತವನ್ನು ಮಾಡಲಾಗಿದೆ. 64GBಯ ಫೋನ್ಗೆ 52,999 ರೂಪಾಯಿ ಇದ್ದರೆ, 128GB ಫೋನ್ 57,999ಕ್ಕೆ ಮಾರಲಾಗುತ್ತಿದೆ. ಇದರ ಜತೆಗೆ ಫ್ಲಿಪ್ಕಾರ್ಟ್ನಿಂದ ವಿನಿಮಯ ಮೌಲ್ಯ ರೂ. 15,600ರ ತನಕ ಆಫರ್ ಮಾಡಲಾಗುತ್ತಿದೆ. ಕ್ಯಾಶ್ಬ್ಯಾApfmಕ್ ಕೂಡ ಸಿಗುತ್ತಿರುವುದರಿಂದ ಮತ್ತಷ್ಟು ಬೆಲೆ ಕಡಿತದ ಆಯ್ಕೆಗಳಿವೆ.
ಇದನ್ನೂ ಓದಿ:Apple iPhone 13: ಆಪಲ್ ಐಫೋನ್ 13 ಖರೀದಿಸಲು ಯಾವ ದೇಶದ ಜನ ಎಷ್ಟು ಸಮಯ ದುಡಿಯಬೇಕು ಗೊತ್ತಾ?