Apple Watch Series 7: ಆಪಲ್ ವಾಚ್ ಸರಣಿ 7 ಭಾರತದಲ್ಲಿ ಅ.15ರಿಂದ ಮಾರಾಟಕ್ಕೆ; ಬೆಲೆ ಮತ್ತಿತರ ವಿವರ ಹೀಗಿದೆ
ಆಪಲ್ ವಾಚ್ ಸರಣಿ 7 ಭಾರತದಲ್ಲಿ ಅಕ್ಟೋಬರ್ 15ರಿಂದ ಖರೀದಿಗೆ ಲಭ್ಯ ಆಗಲಿದೆ. ಆಪಲ್ ಕಂಪೆನಿ ವಾಚ್ 7ರ ವೈಶಿಷ್ಟ್ಯ, ಬೆಲೆ ಮತ್ತಿತರ ವಿವರಗಳು ಇಲ್ಲಿವೆ.
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಆಪಲ್ ಕಂಪೆನಿಯ ವಾರ್ಷಿಕ ಹಾರ್ಡ್‌ವೇರ್ ಬಿಡುಗಡೆ ಸಮಾರಂಭದಲ್ಲಿ ಐಫೋನ್ 13 ಸರಣಿಯೊಂದಿಗೆ ಆಪಲ್ ವಾಚ್ ಸರಣಿ 7 ಅನಾವರಣಗೊಳಿಸಲಾಯಿತು. ಭಾರತದಲ್ಲಿ ಸ್ಮಾರ್ಟ್ ವಾಚ್‌ಗಾಗಿ ಮುಂಗಡ ಆರ್ಡರ್ ಅಕ್ಟೋಬರ್ 8ರಿಂದ ಆರಂಭವಾಯಿತು. ಈಗ ಈ ವಾಚ್ 7 ಮುಂದಿನ ವಾರದಿಂದ ದೇಶದಲ್ಲಿ ಮಾರಾಟಕ್ಕೆ ಬರಲಿದೆ. ಅಕ್ಟೋಬರ್ 15ರಿಂದ ಆಪಲ್ ವಾಚ್ ಮಾರಾಟ ಆರಂಭವಾಗುತ್ತದೆ. ಆಪಲ್ ವಾಚ್ 7 ಪ್ರಸ್ತುತ ಆಪಲ್ ಇಂಡಿಯಾ ಸ್ಟೋರ್ ಮತ್ತು ಅಧಿಕೃತ ಆಪಲ್ ರೀಟೇಲರ್ರೊಂದಿಗೆ ಪ್ರೀ ಆರ್ಡರ್ಗಾಗಿ ಲಭ್ಯವಿದೆ. ಸ್ಮಾರ್ಟ್ ವಾಚ್ 41 ಎಂಎಂ ಮತ್ತು 45 ಎಂಎಂ ಆಯ್ಕೆಗಳಲ್ಲಿ ಲಭ್ಯ ಇದೆ. ಆಪಲ್ ವಾಚ್ 7 ಹಸಿರು, ಮಿಡ್ನೈಟ್, ನ್ಯೂ ಬ್ಲೂ, ಸ್ಟಾರ್‌ಲೈಟ್ ಮತ್ತು (ಪ್ರಾಡಕ್ಟ್) RED ಬಣ್ಣ ಹೀಗೆ ಐದು ಅಲ್ಯೂಮಿನಿಯಂ ಕೇಸ್‌ಗಳಲ್ಲಿ ಲಭ್ಯವಿದೆ. ಸ್ಟೈನ್‌ಲೆಸ್ ಸ್ಟೀಲ್ ಆಯ್ಕೆಗಳು ಗೋಲ್ಡ್, ಗ್ರ್ಯಾಫೈಟ್ ಮತ್ತು ಸಿಲ್ವರ್ ಕಲರ್ ಫಿನಿಷ್ಗಳಲ್ಲಿ ಲಭ್ಯ ಇರುತ್ತವೆ. ಇದನ್ನು ಸ್ಪೇಸ್ ಬ್ಲ್ಯಾಕ್ ಟೈಟಾನಿಯಂ ಮತ್ತು ಟೈಟಾನಿಯಂ ಫಿನಿಷಿಂಗ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.
ವಾಚ್ ಸರಣಿ 7ರ ಬೆಲೆಯು ಫ್ಲಿಪ್‌ಕಾರ್ಟ್ ಪಟ್ಟಿಯ ಪ್ರಕಾರ, ಅಲ್ಯೂಮಿನಿಯಂ ಕೇಸ್‌ನಲ್ಲಿ ಜಿಪಿಎಸ್ ವೇರಿಯಂಟ್ಗೆ 41,900 ರೂಪಾಯಿಯಿಂದ ಆರಂಭವಾಗುತ್ತದೆ. ಜಿಪಿಎಸ್ ವೇರಿಯಂಟ್ 45 ಎಂಎಂ ವರ್ಷನ್ ಇ-ಕಾಮರ್ಸ್ ಸೈಟ್‌ನಲ್ಲಿನ ಬೆಲೆ ವಿವರಗಳ ಪ್ರಕಾರ 44,900 ರೂಪಾಯಿಗೆ ಮಾರಾಟ ಆಗುತ್ತದೆ. ಫ್ಲಿಪ್‌ಕಾರ್ಟ್ ಜಿಪಿಎಸ್+ಸೆಲ್ಯುಲಾರ್ ವೇರಿಯಂಟ್ 41 ಎಂಎಂ ವರ್ಷನ್ಗೆ 50,900 ರೂ. ಮತ್ತು 45 ಎಂಎಂಗೆ ರೂ. 53,900ಕ್ಕೆ ಪಟ್ಟಿ ಮಾಡಿದೆ. ಇ-ಟೇಲರ್ ಸ್ಟೈನ್‌ಲೆಸ್ ಸ್ಟೀಲ್ ಫಿನಿಷ್ಗಳನ್ನು 41 ಎಂಎಂ ಆವೃತ್ತಿಗೆ ರೂ. 69,900 ಮತ್ತು ದೊಡ್ಡದಾದ 45 ಎಂಎಂ ಆವೃತ್ತಿಗೆ ರೂ. 73,900 ಎಂದು ಪಟ್ಟಿ ಮಾಡಿದೆ.
ಆಪಲ್ ವಾಚ್ 7 ವಿಶೇಷ ಮತ್ತು ವೈಶಿಷ್ಟ್ಯಗಳು ಆಪಲ್ ವಾಚ್ ಸರಣಿ- 7 ತೆಳ್ಳಗಿನ 1.7 ಎಂಎಂ ಬೆಜೆಲ್‌ಗಳೊಂದಿಗೆ ಯಾವಾಗಲೂ ಆನ್ (Always On) ರೆಟಿನಾ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈಗಿರುವ ಡಬ್ಲ್ಯೂಆರ್ 50 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಜೊತೆಗೆ ಧೂಳಿನ ಪ್ರತಿರೋಧಕ್ಕಾಗಿ ಸ್ಮಾರ್ಟ್ ವಾಚ್ನ ಹೊಸದರಲ್ಲಿ IP6Xನಲ್ಲಿ ಪುನರಾವರ್ತನೆ ಮಾಡಲಾಗಿದೆ. ವಾಚ್ ಸರಣಿ 7ರಲ್ಲಿ SpO2 ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯುವ ಸಾಮರ್ಥ್ಯ, ECG ಮತ್ತು ಎಲೆಕ್ಟ್ರಿಕಲ್ ಹೃದಯ ಸಂವೇದಕಗಳನ್ನು ಹಾಗೇ ಉಳಿಸಿಕೊಂಡಿದೆ. ಅಪ್‌ಗ್ರೇಡ್ ಮಾಡಿದ ವಾಚ್‌ಓಎಸ್ 8 ಮೈಂಡ್‌ಫುಲ್‌ನೆಸ್ ಅಪ್ಲಿಕೇಷನ್ ಅನ್ನು ಧರಿಸುವವರಿಗೆ ತಮ್ಮ ಒತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ದೊಡ್ಡ ಪರದೆಯು ಹೊಸ QWERTY ಕೀಬೋರ್ಡ್ ಮತ್ತು ಎರಡು ವಿಶಿಷ್ಟ ಗಡಿಯಾರ ಮುಖಗಳನ್ನು ಸಹ ನೀಡುತ್ತದೆ – ಕಾಂಟರ್ ಮತ್ತು ಮಾಡ್ಯುಲರ್ ಜೋಡಿ. ಆಪಲ್ ವಾಚ್ 7ರಲ್ಲಿ 18 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಹಿಂದಿನ ಪೀಳಿಗೆಯ ಅಪ್ಗ್ರೇಡ್ನಲ್ಲಿ ಹೊಸ ಆಪಲ್ ವಾಚ್ ಶೇಕಡಾ 33ರಷ್ಟು ವೇಗದ ಚಾರ್ಜಿಂಗ್ ಪಡೆಯುತ್ತದೆ.
ಇದನ್ನೂ ಓದಿ: Apple iPhone: ಆಪಲ್ ಐಫೋನ್ 13ರ ಸರಣಿಯ ನಾಲ್ಕು ಫೋನ್ ಬಿಡುಗಡೆ; ಬೆಲೆ, ಫೀಚರ್ ಮತ್ತಿತರ ವಿವರ ಇಲ್ಲಿದೆ
Published On - 9:07 pm, Sat, 9 October 21