Coal Shortage: ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣ ತೆರೆದಿಟ್ಟ ವಿದ್ಯುತ್ ಸಚಿವಾಲಯ

TV9 Digital Desk

| Edited By: shivaprasad.hs

Updated on: Oct 10, 2021 | 7:49 AM

ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಬಿಕ್ಕಟ್ಟು ಉದ್ಭವಿಸಲು ಕಾರಣಗಳೇನು ಎಂಬ ಬಗ್ಗೆ ವಿದ್ಯುತ್ ಸಚಿವಾಲಯದಿಂದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Coal Shortage: ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣ ತೆರೆದಿಟ್ಟ ವಿದ್ಯುತ್ ಸಚಿವಾಲಯ
ಸಾಂದರ್ಭಿಕ ಚಿತ್ರ
Follow us

ಆರ್ಥಿಕತೆಯ ಚೇತರಿಕೆಯಿಂದಾಗಿ ವಿಪರೀತ ಹೆಚ್ಚಾದ ವಿದ್ಯುತ್ ಬೇಡಿಕೆ, ಸೆಪ್ಟೆಂಬರ್‌ ತಿಂಗಳಿನಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಆಮದು ಮಾಡಿಕೊಂಡ ಕಲ್ಲಿದ್ದಲು ಬೆಲೆಯಲ್ಲಿನ ಹೆಚ್ಚಳವು ಸಹ ದೇಶೀಯ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಲು ಇವೆಲ್ಲ ಕಾರಣಗಳು ಎಂದು ವಿದ್ಯುತ್ ಸಚಿವಾಲಯ ಶನಿವಾರ ತಿಳಿಸಿದೆ. ವಿದ್ಯುತ್ ಸಚಿವಾಲಯವು ತಿಳಿಸಿರುವಂತೆ, ದೈನಂದಿನ ವಿದ್ಯುತ್ ಬಳಕೆಯು 4 ಬಿಲಿಯನ್ ಯೂನಿಟ್ ಮೀರಿದೆ ಮತ್ತು ಶೇ 65ರಿಂದ 70ರಷ್ಟು ಬೇಡಿಕೆಯನ್ನು ಕಲ್ಲಿದ್ದಲು ಬಳಸಿದ ವಿದ್ಯುತ್ ಉತ್ಪಾದನೆಯಿಂದ ಪೂರೈಸಲಾಗುತ್ತಿದೆ ಎನ್ನಲಾಗಿದೆ. ವಿದ್ಯುತ್ ಸಚಿವಾಲಯವು ಸ್ಥಾಪಿಸಿದ ಕೋರ್ ಮ್ಯಾನೇಜ್‌ಮೆಂಟ್ ಟೀಮ್ (ಸಿಎಂಟಿ) ಪ್ರತಿದಿನವೂ ಕಲ್ಲಿದ್ದಲು ದಾಸ್ತಾನುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ. ಹಾಗೂ ಕೋಲ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಮುಂದಿನ ಕ್ರಮಗಳನ್ನು ಖಾತ್ರಿಪಡಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತೀಯ ರೈಲ್ವೆಯು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಸುಧಾರಿಸುತ್ತದೆ ಎಂದು ಅದು ಹೇಳಿದೆ. “ಕೋಲ್ ಇಂಡಿಯಾದ ಒಟ್ಟು ಕಲ್ಲಿದ್ದಲು ರವಾನೆಯು ಅಕ್ಟೋಬರ್ 7ರಂದು 1.501 MT (ಮೆಟ್ರಿಕ್ ಟನ್) ಮುಟ್ಟಿತು. ಕಲ್ಲಿದ್ದಲು ಸಚಿವಾಲಯ ಮತ್ತು ಕೋಲ್ ಇಂಡಿಯಾವು ಖಾತ್ರಿ ಪಡಿಸಿರುವಂತೆ, ಮುಂದಿನ 3 ದಿನಗಳಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಯನ್ನು ದಿನಕ್ಕೆ 1.6 ಮೆಟ್ರಿಕ್ ಟನ್ ನಿರೀಕ್ಷಿಸಬಹುದು. ಆ ನಂತರ ದಿನಕ್ಕೆ 1.7 ಮೆಟ್ರಿಕ್ ಟನ್ ಗುರಿ ಇದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿದ್ಯುತ್ ಬಿಕ್ಕಟ್ಟಿನತ್ತ ಭಾರತ ದೆಹಲಿ ಮತ್ತು ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದೆ. ಹೆಚ್ಚಿನ ಮಳೆಯಿಂದಾಗಿ ಕಲ್ಲಿದ್ದಲು ಸಾಗಾಟ ಕಷ್ಟವಾಗುತ್ತಿದೆ ಮತ್ತು ದಾಖಲೆಯ ಬೆಲೆಗೆ ಕಲ್ಲಿದ್ದಲು ದರ ಏರಿಕೆಯಾಗಿದ್ದರಿಂದ ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಅವುಗಳ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ಉತ್ಪಾದನೆ ಆಗುತ್ತಿದೆ. ದೇಶವು ದಾಖಲೆಯ ಪ್ರಮಾಣದಲಲ್ಇ ಕಲ್ಲಿದ್ದಲನ್ನು ಉತ್ಪಾದಿಸಿದ ಒಂದು ವರ್ಷದಲ್ಲಿ ಮಳೆಯಿಂದಾಗಿ ಗಣಿಗಳಿಂದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಾಗಾಟ ಮಾಡುವುದಕ್ಕೆ ಸಮಸ್ಯೆ ಆಗಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ವಿದ್ಯುತ್ ಉತ್ಪಾದಕರು ಮತ್ತು ವಿತರಕರು ಬ್ಲಾಕ್‌ಔಟ್‌ ಬಗ್ಗೆ ಎಚ್ಚರಿಕೆ ನೀಡಿದ್ದು, ಉತ್ಪಾದನಾ ಘಟಕಗಳು ಎರಡು ದಿನಗಳಿಗಿಂತಲೂ ಕಡಿಮೆ ಕಲ್ಲಿದ್ದಲು ದಾಸ್ತಾನುಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಕಲ್ಲಿದ್ದಲು ಸಚಿವಾಲಯವು ಹೇಳುವಂತೆ, ದೇಶವು ಸಾಕಷ್ಟು ಕಲ್ಲಿದ್ದಲು ದಾಸ್ತಾನುಗಳನ್ನು ಹೊಂದಿದೆ ಮತ್ತು ಕಡಿಮೆ ದಾಸ್ತಾನು ಎಂದರೆ ಸ್ಟಾಕ್‌ಗಳನ್ನು ನಿರಂತರವಾಗಿ ಮರುಪೂರಣ ಮಾಡುವುದರಿಂದ ಉತ್ಪಾದನೆ ನಿಲ್ಲುತ್ತದೆ ಎಂದಲ್ಲ. ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿರುವ ಇನ್ನೊಂದು ಅಂಶವೆಂದರೆ, ವಿದ್ಯುತ್ ಉತ್ಪಾದಿಸಲು ಆಮದು ಮಾಡಿದ ಕಲ್ಲಿದ್ದಲನ್ನು ಬಳಸಿದ ವಿದ್ಯುತ್ ಸ್ಥಾವರಗಳು, ಉತ್ಪಾದನೆಯನ್ನು ಮೊಟಕುಗೊಳಿಸಿದವು ಅಥವಾ ಅಂತಾರಾಷ್ಟ್ರೀಯ ಇಂಧನ ಬೆಲೆಯಲ್ಲಿನ ಏರಿಕೆಯಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಗುಜರಾತ್‌ಗೆ 1,850 ಮೆಗಾವ್ಯಾಟ್, ಪಂಜಾಬ್‌ಗೆ 475 ಮೆಗಾವ್ಯಾಟ್, ರಾಜಸ್ಥಾನಕ್ಕೆ 380 ಮೆ.ವ್ಯಾ., ಮಹಾರಾಷ್ಟ್ರಕ್ಕೆ 760 ಮೆಗಾವ್ಯಾಟ್ ಮತ್ತು ಹರ್ಯಾಣಕ್ಕೆ 380 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುವ ಒಪ್ಪಂದಕ್ಕೆ ಸಹಿ ಹಾಕಿರುವ ಟಾಟಾ ಪವರ್, ಗುಜರಾತ್‌ನ ಮುಂದ್ರಾದಲ್ಲಿನ ತನ್ನ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದೆ. ಅದಾನಿ ಪವರ್‌ನ ಮುಂದ್ರಾ ಘಟಕ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶಾದ್ಯಂತ ವಿದ್ಯುತ್ ಸ್ಥಾವರಗಳು ಸ್ಟಾಕ್ ಕಡಿಮೆಯಾದ ನಂತರ ಉತ್ಪಾದನೆಯನ್ನು ನಿಯಂತ್ರಿಸುತ್ತಿವೆ.

ಇದನ್ನೂ ಓದಿ: Coal Crisis: ದೇಶದ ಕಲ್ಲಿದ್ದಲು ಸಂಗ್ರಹ 4 ದಿನಗಳಿಗೆ ಇಳಿಕೆ; ಭಾರತದಲ್ಲೂ ಎದುರಾಗುತ್ತಾ ವಿದ್ಯುತ್ ಬಿಕ್ಕಟ್ಟು?

ತಾಜಾ ಸುದ್ದಿ

Related Stories

Click on your DTH Provider to Add TV9 Kannada