IPL 2025: ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್; ವೈಭವ್ ಸೂರ್ಯವಂಶಿಗೆ ತಂಡದಿಂದ ಕೋಕ್?
Rajasthan Royals IPL 2025: ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 2025 ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ ಪ್ಲೇಆಫ್‌ನಿಂದ ಹೊರಬಿದ್ದಿದೆ. ಆದರೆ 14 ವರ್ಷದ ವೈಭವ್ ಸೂರ್ಯವಂಶಿ ತಂಡದ ಉತ್ತಮ ಅನ್ವೇಷಣೆಯಾಗಿದೆ. ಇದೀಗ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್ ಆಗಿರುವುದರಿಂದ ವೈಭವ್ ಅವರ ಸ್ಥಾನ ಕಡಿತವಾಗಲಿದೆಯೇ ಎಂಬುದು ಪ್ರಶ್ನಾರ್ಹ. ತಂಡದ ಆಯ್ಕೆಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಐಪಿಎಲ್ 2025 (IPL 2025) ರ ಸೀಸನ್ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಕ್ಕೆ ದುಸ್ವಪ್ನವಾಗಿತ್ತು. ಕಳೆದ ಕೆಲವು ಸೀಸನ್ಗಳಿಂದ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಈ ತಂಡ, ಈ ಬಾರಿ ಲೀಗ್ ಹಂತದ ಪಂದ್ಯಗಳು ಮುಗಿಯುವ ಮೊದಲೇ ಪ್ಲೇಆಫ್ ರೇಸ್‌ನಿಂದ ಹೊರಬಿತ್ತು. ಇದರ ಹೊರತಾಗಿಯೂ, ಈ ಸೀಸನ್‌ನಲ್ಲಿ ರಾಜಸ್ಥಾನಕ್ಕೆ ಸಿಕ್ಕ ಒಳ್ಳೆಯ ಸುದ್ದಿಯೆಂದರೆ 14 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಯಂತಹ (Vaibhav Suryavanshi) ಯುವ ಪ್ರತಿಭೆಯನ್ನು ತಂಡಕ್ಕೆ ಸೇರಿಸಿಕೊಂಡಿದ್ದು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದ ವೈಭವ್, ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದರು. ಆದರೆ ಅದ್ಭುತ ಪ್ರದರ್ಶನದ ಹೊರತಾಗಿಯೂ ವೈಭವ್ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.
ನಾಯಕ ಸ್ಯಾಮ್ಸನ್ ಆಡಲು ಫಿಟ್
ಐಪಿಎಲ್ 2025 ರ ಸೀಸನ್ ಮತ್ತೆ ಆರಂಭವಾಗಿದ್ದು, ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್‌ಗೆ ಉಳಿದ ಪಂದ್ಯಗಳು ಕೇವಲ ಔಪಚಾರಿಕವಾಗಿವೆ. ಏಕೆಂದರೆ ತಂಡವು ಈಗಾಗಲೇ ಸತತ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದಾಗ್ಯೂ ತಂಡಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದ್ದು, ವರದಿಯ ಪ್ರಕಾರ, ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಕೊನೆಯ ಎರಡು ಪಂದ್ಯಗಳಲ್ಲಿ ಆಡಲು ಸಿದ್ಧರಾಗಿದ್ದಾರೆ.
ಈ ಇಡೀ ಸೀಸನ್‌ನಲ್ಲಿ ಸಂಜು ಸ್ಯಾಮ್ಸನ್ ಆಡಿದ್ದಕ್ಕಿಂತ ಬೆಂಚ್ ಮೇಲೆ ಕುಳಿತಿದ್ದೆ ಹೆಚ್ಚು. ಈ ಸೀಸನ್ನ ಮೊದಲ 3 ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಸಂಜು, ಆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡದ ಚುಕ್ಕಾಣಿ ಹಿಡಿದಿದ್ದರು. ಆದರೆ ಪಂದ್ಯದ ಸಮಯದಲ್ಲಿ ಮತ್ತೊಮ್ಮೆ ಗಾಯಗೊಂಡ ಸಂಜು ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಸಂಜು ಸಂಪೂರ್ಣವಾಗಿ ಫಿಟ್ ಆಗಿದ್ದು, ಮೇ 18 ರ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಮರಳಲು ಸಿದ್ಧರಾಗಿದ್ದಾರೆ.
IPL 2025: ಆರ್ಸಿಬಿ ಫೈನಲ್ಗೇರಿದರೆ ಮ್ಯಾಚ್ ನೋಡಲು ಬರ್ತೀನಿ; ಡಿವಿಲಿಯರ್ಸ್ ಭರವಸೆ
ವೈಭವ್ ಸೂರ್ಯವಂಶಿಗೆ ಕೋಕ್?
ಸಂಜು ಸ್ಯಾಮ್ಸನ್ ಫಿಟ್ ಆಗಿರುವ ಕಾರಣ 14 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರನ್ನು ತಂಡದಿಂದ ಕೈಬಿಡಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಂತಹ ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ?. ಏಕೆಂದರೆ ಈ ಸೀಸನ್‌ನಲ್ಲಿ ಸಂಜು ಆರಂಭಿಕನಾಗಿ ಆಡುತ್ತಿದ್ದರು ಮತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ವಾಸ್ತವವಾಗಿ ಸಂಜು ಗಾಯಗೊಂಡ ನಂತರವೇ ವೈಭವ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿತು. ಆದರೀಗ ಸಂಜು ತಂಡಕ್ಕೆ ಮರಳಿರುವ ಕಾರಣ ವೈಭವ್ ಅವರನ್ನು ತಂಡದಿಂದ ಕೈಬಿಡುತ್ತಾರಾ? ಅಥವಾ ಬೇರೆ ಕ್ರಮಾಂಕದಲ್ಲಿ ಆಡಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಈ ಸೀಸನ್‌ನಲ್ಲಿ ವೈಭವ್ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 155 ರನ್ ಗಳಿಸಿದ್ದಾರೆ, ಅವರ ಸ್ಟ್ರೈಕ್ ರೇಟ್ 209 ಆಗಿದೆ. ಹೀಗಿರುವಾಗ ವೈಭವ್ರನ್ನು ತಂಡದಿಂದ ಕೈಬಿಡುವುದು ಸೂಕ್ತವಲ್ಲ. ಆದ್ದರಿಂದ, ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಬಹುದು ಮತ್ತು ಸಂಜು ಸ್ಯಾಮ್ಸನ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರಬಹುದು ಎಂಬುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಶುಭಂ ದುಬೆ ಅಥವಾ ನಿತೀಶ್ ರಾಣಾ ಅವರನ್ನು ತಂಡದಿಂದ ಕೈಬಿಡಬಹುದು. ಎರಡನೆಯ ಆಯ್ಕೆಯೆಂದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಕೊನೆಯ 2 ಪಂದ್ಯಗಳಿಂದ ವಿಶ್ರಾಂತಿ ನೀಡಬಹುದು, ಇದರಿಂದಾಗಿ ಅವರು ಭಾರತ-ಎ ಜೊತೆ ಇಂಗ್ಲೆಂಡ್‌ಗೆ ಹೋಗುವ ಮೊದಲು ಸ್ವಲ್ಪ ವಿಶ್ರಾಂತಿ ಪಡೆಯಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
