IPL 2025: ಆರ್‌ಸಿಬಿ ಫೈನಲ್ಗೇರಿದರೆ ಮ್ಯಾಚ್ ನೋಡಲು ಬರ್ತೀನಿ; ಡಿವಿಲಿಯರ್ಸ್ ಭರವಸೆ
AB de Villiers: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ನಡುವೆ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಆರ್‌ಸಿಬಿ ಫೈನಲ್ ತಲುಪಿದರೆ ಭಾರತಕ್ಕೆ ಬಂದು ವಿರಾಟ್ ಕೊಹ್ಲಿ ಜೊತೆ ಟ್ರೋಫಿ ಎತ್ತುವುದಾಗಿ ಭರವಸೆ ನೀಡಿದ್ದಾರೆ. 11 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ ಡಿವಿಲಿಯರ್ಸ್ ಅವರ ಬೆಂಬಲ ಆರ್‌ಸಿಬಿಗೆ ಹೆಚ್ಚಿನ ಉತ್ಸಾಹ ತುಂಬಿದೆ.

2025 ರ ಐಪಿಎಲ್ (IPL 2025)ನಲ್ಲಿ ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದೆ. ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿರುವ ರೆಡ್ ಆರ್ಮಿ ಪ್ಲೇಆಫ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕೇವಲ ಒಂದು ಇನ್ನೊಂದು ಹೆಜ್ಜೆ ದೂರದಲ್ಲಿದೆ. ಆದರೆ ಶನಿವಾರ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ, ಆರ್‌ಸಿಬಿಗೆ ಹೆಚ್ಚಿನ ನಷ್ಟವಾಗುವುದಿಲ್ಲ. ಆದರೆ ಹಾಲಿ ಚಾಂಪಿಯನ್ ಕೆಕೆಆರ್ ಮಾತ್ರ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ಇನ್ನು ಇದೇ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿರುವ ಆರ್‌ಸಿಬಿಗೆ ಎಬಿ ಡಿವಿಲಿಯರ್ಸ್ (AB de Villiers) ಮತ್ತೊಂದು ಸಂತಸದ ಸುದ್ದಿ ನೀಡಿದ್ದಾರೆ.
ನಾನು ಭಾರತಕ್ಕೆ ಬರುತ್ತೇನೆ
ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಆರ್‌ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ‘ಆರ್‌ಸಿಬಿ ಫೈನಲ್‌ಗೆ ತಲುಪುವಲ್ಲಿ ಯಶಸ್ವಿಯಾದರೆ, ನಾನು ಫೈನಲ್ ಪಂದ್ಯವನ್ನು ನೋಡಲು ಖಂಡಿತವಾಗಿಯೂ ಭಾರತಕ್ಕೆ ಬರುವುದಾಗಿ ತಿಳಿಸಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಜೊತೆ ಟ್ರೋಫಿ ಎತ್ತುವ ಆಸೆ ಇದೆ ಅಂತಲೂ ಡಿವಿಲಿ ಹೇಳಿಕೊಂಡಿದ್ದಾರೆ.
‘ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಆರ್‌ಸಿಬಿ ಫೈನಲ್ ತಲುಪಿದರೆ, ನಾನು ತಂಡದೊಂದಿಗೆ ಕ್ರೀಡಾಂಗಣದಲ್ಲಿ ಇರುತ್ತೇನೆ. ವಿರಾಟ್ ಕೊಹ್ಲಿ ಜೊತೆ ಟ್ರೋಫಿ ಎತ್ತಿ ಹಿಡಿಯುವುದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರೊಂದಿಲ್ಲ. ನಾನು ಹಲವು ವರ್ಷಗಳಿಂದ ಇದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ.
AB de Villiers is coming to India for the Playoffs and he said he’ll be present at the stadium with the boys if RCB makes it to the final, fingers crossed.pic.twitter.com/BlNYS8gA1D
— Kevin (@imkevin149) May 17, 2025
11 ವರ್ಷ ಆರ್‌ಸಿಬಿ ಪರ ಆಡಿದ್ದ ಎಬಿಡಿ
ಐಪಿಎಲ್‌ನಲ್ಲಿ ಎಬಿ ಡಿವಿಲಿಯರ್ಸ್ 11 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದರು. 2011 ರಿಂದ 2021 ರವರೆಗೆ ತಂಡದ ಪ್ರಮುಖ ಆಟಗಾರರಾಗಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಅವರೊಂದಿಗೆ ಅನೇಕ ಸ್ಮರಣೀಯ ಜೊತೆಯಾಟವನ್ನು ಹಂಚಿಕೊಂಡಿದ್ದರು. ಒಂದು ಕಾಲದಲ್ಲಿ ಆರ್‌ಸಿಬಿ, ಕೊಹ್ಲಿ, ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಒಳಗೊಂಡ ಮಾರಕ ಬ್ಯಾಟಿಂಗ್ ವಿಭಾಗವನ್ನು ಹೊಂದಿತ್ತು. ಆದರೆ ಇದರ ಹೊರತಾಗಿಯೂ, ಆರ್‌ಸಿಬಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
IPL 2025: ಆರ್‌ಸಿಬಿ vs ಕೆಕೆಆರ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಹೆಚ್ಚು ನಷ್ಟ?
ಜೂನ್ 3 ರಂದು ಫೈನಲ್ ಪಂದ್ಯ
ಐಪಿಎಲ್ 2025 ರ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿವೆ. ಕ್ವಾಲಿಫೈಯರ್-1 ಮತ್ತು ಎಲಿಮಿನೇಟರ್-2 ಪಂದ್ಯಗಳು ಮೇ 29 ಮತ್ತು 30 ರಂದು ನಡೆಯಲಿವೆ. ಕ್ವಾಲಿಫೈಯರ್-2 ಜೂನ್ 1 ರಂದು ನಡೆಯಲಿದೆ. ಆದಾಗ್ಯೂ ಯಾವುದೇ ತಂಡವು ಇನ್ನೂ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Sat, 17 May 25
