IPL 2025: ಆರ್‌ಸಿಬಿ vs ಕೆಕೆಆರ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಹೆಚ್ಚು ನಷ್ಟ?
RCB, KKR IPL 2025 Match 58: ಮೇ 17 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ RCB ಮತ್ತು KKR ನಡುವಿನ ಐಪಿಎಲ್ 2025 ರ 58 ನೇ ಪಂದ್ಯ ಮಳೆಯಿಂದಾಗಿ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಪಂದ್ಯ ರದ್ದಾದರೆ ಆರ್ಸಿಬಿಗೆ ಲಾಭ ಮತ್ತುಕೆಕೆಆರ್ಗೆ ನಷ್ಟವಾಗುವ ಸಾಧ್ಯತೆ ಇದೆ. ಆರ್‌ಸಿಬಿ ಪ್ಲೇಆಫ್‌ಗೆ ಹತ್ತಿರವಾದರೆ, ಕೆಕೆಆರ್ನ ಪ್ಲೇಆಫ್ ಕನಸು ಭಗ್ನವಾಗಲಿದೆ.

ಐಪಿಎಲ್ 2025 (IPL 2025) ರ 58 ನೇ ಪಂದ್ಯ ಇಂದು ಅಂದರೆ ಮೇ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ನಡುವೆ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ ಇದುವರೆಗೂ ಆರಂಭವಾಗಿಲ್ಲ. ಟಾಸ್ ಕೂಡ ನಡೆದಿಲ್ಲ. ಹೀಗಾಗಿ ಈ ಪಂದ್ಯ ನಡೆಯುವುದು ಕಷ್ಟಸಾಧ್ಯವಾಗಿದೆ. ಆದಾಗ್ಯೂ ಮಳೆ ನಿಂತರೆ ಕೇವಲ 15 ನಿಮಿಷಗಳಲ್ಲಿ ಪಂದ್ಯ ಆರಂಭವಾಗಲಿದೆ. ಇದಕ್ಕೆ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ. ಒಂದು ವೇಳೆ ಮಳೆಯಿಂದಾಗಿ ಈ ಪಂದ್ಯ ರದ್ದಾದರೆ ಏನಾಗಬಹುದು ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ. ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭ, ಯಾವ ತಂಡಕ್ಕೆ ನಷ್ಟ? ಎಂಬುದಕ್ಕೆ ಉತ್ತರ ಇಲ್ಲಿದೆ.
8:45 ರಿಂದ ಓವರ್ ಕಡಿತ ಆರಂಭ
ಪ್ರಸ್ತುತ ಬೆಂಗಳೂರಿನಲ್ಲಿ ಮಳೆ ಇನ್ನಷ್ಟು ಜೋರಾಗಿದೆ. ಪಂದ್ಯ ಇಷ್ಟರೊಳಗೆ ಆರಂಭವಾಗಬೇಕಿತ್ತು ಆದರೆ ಇದುವರೆಗೂ ಆರಂಭವಾಗಿಲ್ಲ. ಅಧಿಕೃತ ಮಾಹಿತಿಯ ಪ್ರಕಾರ, ಪಂದ್ಯದ ಓವರ್ ಕಡಿತವು 8:45 ರಿಂದ ಪ್ರಾರಂಭವಾಗುತ್ತದೆ. ಅಂತಿಮವಾಗಿ ಈ ಪಂದ್ಯದ ಫಲಿತಾಂಶ ಹೊರಬೀಳಬೇಕೆಂದರೆ ಉಭಯ ತಂಡಗಳು ತಲಾ ಐದು ಓವರ್ಗಳ ಆಟವನ್ನು ಪೂರ್ಣಗೊಳಿಸಬೇಕು. ಹೀಗಾಗಿ ಪಂದ್ಯವು 10:56 ರೊಳಗೆ ಪ್ರಾರಂಭವಾಗಬೇಕಾಗುತ್ತದೆ.
ಆರ್‌ಸಿಬಿ ಪ್ಲೇ ಆಫ್ ಹಾದಿ ಸುಲಭ
ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ, ಆರ್‌ಸಿಬಿ ತಂಡಕ್ಕೆ ಸ್ವಲ್ಪ ಲಾಭವಾಗುತ್ತದೆ. ಪಂದ್ಯ ರದ್ದಾದ ನಂತರ, ಆರ್‌ಸಿಬಿ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ದೃಢಪಡಿಸಿಕೊಳ್ಳುತ್ತದೆ. ಪ್ರಸ್ತುತ ರಜತ್ ಪಡೆ ಆಡಿದ 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಸೋಲುಗಳೊಂದಿಗೆ 16 ಅಂಕಗಳನ್ನು ಹೊಂದಿದೆ. ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆಯಾಗುತ್ತದೆ. ಇನ್ನು ಒಂದು ಅಂಕ ಗಳಿಸಿದರೆ, ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕಗಳನ್ನು ಪಡೆಯಲಿದ್ದು, ಅಗ್ರ-4 ರಲ್ಲಿ ಸ್ಥಾನ ಪಡೆಯುವ ಹಾದಿ ಸುಲಭವಾಗಲಿದೆ.
RCB vs KKR Live Score, IPL 2025: ಬೆಂಗಳೂರಿನಲ್ಲಿ ಭಾರೀ ಮಳೆ
ಕೆಕೆಆರ್ ಲೀಗ್ನಿಂದ ಔಟ್
ಪಂದ್ಯ ರದ್ದಾದರೆ ಕೆಕೆಆರ್ ತಂಡಕ್ಕೆ ಹೊಡೆತ ಬೀಳಲಿದ್ದು ರಹಾನೆ ಪಡೆಯ ಪ್ಲೇಆಫ್ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ. ಕೆಕೆಆರ್ ತಂಡ 12 ಪಂದ್ಯಗಳಲ್ಲಿ 5 ಗೆಲುವು, 6 ಸೋಲು ಮತ್ತು ಒಂದು ರದ್ದಾದ ಪಂದ್ಯದೊಂದಿಗೆ ಪ್ರಸ್ತುತ 11 ಅಂಕಗಳನ್ನು ಹೊಂದಿದೆ. ಇದೀಗ ಈ ಪಂದ್ಯವೂ ನಡೆಯದಿದ್ದರೆ ಕೆಕೆಆರ್ 13 ಪಂದ್ಯಗಳಿಂದ 12 ಅಂಕಗಳನ್ನು ಪಡೆದಂತ್ತಾಗುತ್ತದೆ. ಅಂತಿಮವಾಗಿ ಉಳಿದ 1 ಪಂದ್ಯವನ್ನು ಗೆದ್ದರೂ ಕೆಕೆಆರ್ ಬಳಿ 14 ಅಂಕಗಳಿರುತ್ತವೆ. ಹೀಗಾಗಿ 14 ಅಂಕಗಳೊಂದಿಗೆ ಕೆಕೆಆರ್ ತಂಡ ಪ್ಲೇಆಫ್ ತಲುಪಲು ಸಾಧ್ಯವಾಗುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Sat, 17 May 25
