Mutibagger Stock: ಈ ಬ್ಯಾಂಕ್ ಸ್ಟಾಕ್‌ನಲ್ಲಿ ಹಾಕಿದ 1 ಲಕ್ಷ ರೂಪಾಯಿ 20 ವರ್ಷಗಳಲ್ಲಿ ಅದೆಷ್ಟು ಕೋಟಿ ಆಗಿದೆ ಗೊತ್ತೆ?
ಇಪ್ಪತ್ತು ವರ್ಷಗಳ ಹಿಂದೆ ಈ ಬ್ಯಾಂಕಿಂಗ್ ಸ್ಟಾಕ್ ಮೇಲೆ ಮಾಡಿದ್ದ 1 ಲಕ್ಷ ರೂಪಾಯಿಯ ಹೂಡಿಕೆ 20 ವರ್ಷದಲ್ಲಿ ಅದೆಷ್ಟು ಕೋಟಿ ರೂಪಾಯಿ ಆಗಿದೆ ಎಂಬುದರ ಲೆಕ್ಕಾಚಾರ ಸಹಿತವಾದ ಮಾಹಿತಿ ಇಲ್ಲಿದೆ.
ಈಗಾಗಲೇ ಸಾಕಷ್ಟು ಸಲ ಹೇಳಿದಂತೆ, ಷೇರು ಮಾರುಕಟ್ಟೆಯಲ್ಲಿ ತಾಳ್ಮೆಯು ಫಲವನ್ನು ನೀಡುತ್ತದೆ. ಮಾರ್ಕೆಟ್ ತಜ್ಞರ ಪ್ರಕಾರ, ಗುಣಮಟ್ಟದ ಕಂಪೆನಿಯ ಷೇರು ಎಂದು ಖಾತ್ರಿಯಾದ ಮೇಲೆ ಸಾಧ್ಯವಾದಷ್ಟೂ ಸಮಯ ಅದನ್ನು ಇಟ್ಟುಕೊಳ್ಳಬೇಕು. ಖರೀದಿಸಿ, ಇಟ್ಟುಕೊಳ್ಳಿ ಮತ್ತು ಮರೆತುಬಿಡಿ (Purchase, hold and forget) ತಂತ್ರವು ಹೂಡಿಕೆದಾರರಿಗೆ ಅಮೋಘವಾದ ರಿಟರ್ನ್ಸ್ ನೀಡುತ್ತದೆ. ಆದ್ದರಿಂದಲೇ ದೀರ್ಘ ಕಾಲದ ಹೂಡಿಕೆಯು ಆದಾಯವನ್ನು ಹಲವು ಪಟ್ಟು ಸೇರ್ಪಡೆಯಾಗುತ್ತದೆ. ದೀರ್ಘಾವಧಿಯ ಈಕ್ವಿಟಿ ಹೂಡಿಕೆಯು ಹೇಗೆ ರಿಟರ್ನ್ಸ್ ನೀಡುತ್ತದೆ ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು. ಈ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆ ಶುಕ್ರವಾರದಂದು ಬೆಳಗಿನ ವಹಿವಾಟಿನಲ್ಲಿ 1966 ರೂಪಾಯಿಗೆ ವ್ಯವಹಾರ ನಡೆಸುತ್ತಿತ್ತು. ಇದೇ ಷೇರಿನ ಬೆಲೆ 20 ವರ್ಷಗಳ ಹಿಂದೆ (ಅಕ್ಟೋಬರ್ 12, 2001) ರೂ. 1.94 ಇತ್ತು. ಈ ಇಪ್ಪತ್ತು ವರ್ಷದ ಅವಧಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ 1011 ಪಟ್ಟು ಹೆಚ್ಚಾಗಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆ ಇತಿಹಾಸ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಕಳೆದ ಒಂದು ತಿಂಗಳಲ್ಲಿ ಪ್ರತಿ ಷೇರಿಗೆ 1815.35 ರೂಪಾಯಿಯಿಂದ ರೂ. 1966 ಮಟ್ಟಕ್ಕೆ ಏರಿದೆ – ಇದು ಸುಮಾರು ಶೇಕಡಾ 8ರಷ್ಟು ಹೆಚ್ಚಾಗಿದೆ. ಕಳೆದ 3 ತಿಂಗಳಲ್ಲಿ ಈ ಬ್ಯಾಂಕಿಂಗ್ ಷೇರು 1720 ರೂಪಾಯಿಯಿಂದರಿಂದ 1966ಕ್ಕೆ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ. 2021ರ ಜೂನ್ನಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಸ್ಟಾಕ್ ಮಾರಾಟದ ಒತ್ತಡದಲ್ಲಿತ್ತು ಮತ್ತು ಆದ್ದರಿಂದ ಕಳೆದ 6 ತಿಂಗಳಲ್ಲಿ, ಮಲ್ಟಿಬ್ಯಾಗರ್ ಸ್ಟಾಕ್ ತನ್ನ ಷೇರುದಾರರಿಗೆ ಕೇವಲ ಶೇ 10ರಷ್ಟು ಲಾಭವನ್ನು ನೀಡಿದೆ. ಕಳೆದ ಒಂದು ವರ್ಷದಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆ ರೂ.1320 ರಿಂದ ರೂ.1966ಕ್ಕೆ ಹೆಚ್ಚಳವಾಗಿದೆ – ಈ ಅವಧಿಯಲ್ಲಿ ಶೇ 50ರಷ್ಟು ಗಳಿಕೆ ದಾಖಲಿಸಿದೆ.
ಇನ್ನು ಕಳೆದ 5 ವರ್ಷಗಳಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆ 781.75ರಿಂದ 1966 ರೂಪಾಯಿಗೆ ಏರಿದೆ – ಈ ಅವಧಿಯಲ್ಲಿ ಸುಮಾರು ಶೇ 150ರಷ್ಟು ರಿಟರ್ನ್ಸ್ ನೀಡಿದೆ. ಕಳೆದ 10 ವರ್ಷಗಳಲ್ಲಿ ಕೊಟಕ್ ಬ್ಯಾಂಕ್ ಷೇರಿನ ಬೆಲೆ 232.93 ರೂಪಾಯಿಯಿಂದ ರೂ. 1966ಕ್ಕೆ ಏರಿದೆ. – ಇದು ಶೇ 750ಕ್ಕಿಂತ ಹೆಚ್ಚಾಗಿದೆ. ಅದೇ ರೀತಿ ಕಳೆದ 20 ವರ್ಷಗಳಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆ ರೂ. 1.94ರಿಂದ ರೂ. 1966ಕ್ಕೆ ಏರಿದೆ – ಅಂದರೆ ಕಳೆದ ಎರಡು ದಶಕಗಳಲ್ಲಿ ಸುಮಾರು 1011 ಪಟ್ಟು ಹೆಚ್ಚಾಗಿದೆ.
ಹೂಡಿಕೆಯ ಮೇಲೆ ಪರಿಣಾಮ ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆಯ ಇತಿಹಾಸವನ್ನು ಗಮನಿಸಿದರೆ, ಒಂದು ತಿಂಗಳ ಹಿಂದೆ ಈ ಷೇರುಗಳಲ್ಲಿ ಹೂಡಿಕೆದಾರರು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು 1.08 ಲಕ್ಷ ರೂಪಾಯಿ ಆಗಿರುತ್ತಿತ್ತು. 3 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, 1.15 ಲಕ್ಷಕ್ಕೆ ಏರಿರುತ್ತಿತ್ತು. ಒಂದು ವರ್ಷದ ಹಿಂದೆ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ರೂ. 1.50 ಲಕ್ಷ ಆಗಿರುತ್ತಿತ್ತು. 5 ವರ್ಷಗಳ ಹಿಂದೆ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಇಲ್ಲಿಯವರೆಗೆ ಉಳಿಸಿಕೊಂಡಿದ್ದಲ್ಲಿ ರೂ. 2.50 ಲಕ್ಷಕ್ಕೆ ಹೆಚ್ಚಳ ಆಗಿರುತ್ತಿತ್ತು. ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 10 ವರ್ಷಗಳ ಹಿಂದೆ 1 ಲಕ್ಷ ಹೂಡಿದ್ದರೆ ಅದರ ರೂ.8.50 ಲಕ್ಷ ಆಗುತ್ತಿತ್ತು. 20 ವರ್ಷಗಳ ಹಿಂದೆ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಎರಡು ದಶಕಗಳ ಅವಧಿಯಲ್ಲಿ 10.11 ಕೋಟಿ ರೂಪಾಯಿಗೆ ತಿರುಗುತ್ತಿತ್ತು.
ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬಗ್ಗೆ ತಜ್ಞರ ದೃಷ್ಟಿಕೋನ ಷೇರು ಮಾರುಕಟ್ಟೆಯ ತಜ್ಞರು ಇನ್ನೂ ಕೌಂಟರ್ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಹೂಡಿಕೆದಾರರಿಗೆ ಅಲ್ಪಾವಧಿಗೆ 2100 ರೂಪಾಯಿ ತನಕ ಏರಿ, ಉತ್ತಮ ರಿಟರ್ನ್ಸ್ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರು ಬೆಲೆ ಗುರಿಯ ಕುರಿತು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಮಾತನಾಡಿ, “ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರನ್ನುಸದ್ಯದ ಮಾರುಕಟ್ಟೆ ದರದಲ್ಲಿ ಖರೀದಿಸಿದರೆ ಅಲ್ಪಾವಧಿಯ ಗುರಿಯಾದ 2050 ರಿಂದ 2100 ರೂಪಾಯಿವರೆಗೆ ತಲುಪಬಹುದು,” ಎಂದಿದ್ದಾರೆ.
ಎಚ್ಚರಿಕೆ: ಈ ಲೇಖನದಲ್ಲಿನ ಶಿಫಾರಸು ಮತ್ತು ಅಭಿಪ್ರಾಯಗಳು ಆಯಾ ವಿಶ್ಲೇಷಕರು ಹಾಗೂ ಲೇಖಕರಿಗೆ ಸಂಬಂಧಿಸಿದ್ದು. ಇದರ ಆಧಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ನಷ್ಟ ಸಂಂಭವಿಸಿದಲ್ಲಿ ಅದಕ್ಕೆ ಟಿವಿ9 ನೆಟ್ವರ್ಕ್ ಜವಾಬ್ದಾರ ಅಲ್ಲ.
ಇದನ್ನೂ ಓದಿ: ಷೇರುಗಳಲ್ಲಿ ಹಣ ಹೂಡುವ ಮೊದಲು ಸಂಶೋಧನೆ ಅತ್ಯಗತ್ಯ ಎನ್ನುತ್ತಾರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್
Published On - 1:21 pm, Sat, 9 October 21