ಷೇರುಗಳಲ್ಲಿ ಹಣ ಹೂಡುವ ಮೊದಲು ಸಂಶೋಧನೆ ಅತ್ಯಗತ್ಯ ಎನ್ನುತ್ತಾರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್
ಷೇರುಗಳ ಖರೀದಿಯನ್ನು ಡಾ ರಾವ್ ಮದುವೆಗೆ ಹೋಲಿಸುತ್ತಾರೆ. ಮದುವೆ ಒಮ್ಮೆ ಅಯ್ತು ಅಂತಾದರೆ, ಸಂಗಾತಿಯೊಂದಿಗೆ ಕೊನೆವರೆಗೆ ಜೊತೆಯಾಗಿರುತ್ತೇವೆ. ಷೇರುಗಳಲ್ಲಿ ಹೂಡಿಕೆ ಮಾಡುವಾಗಲೂ ನಮ್ಮ ಧೋರಣೆ ಅದೇ ತೆರನಾಗಿರಬೇಕು ಅಂತ ಅವರು ಹೇಳುತ್ತಾರೆ
ಉತ್ತಮ ಹೂಡಿಕೆದಾರನಾಗುವ ಬಗೆ ಹೇಗೆ, ಅದಕ್ಕೆ ನೀವು ಮಾಡಬೇಕಿರೋದು ಏನು ಅನ್ನವುದನ್ನು ಇವತ್ತಿನ ಸಂಚಿಕೆಯಲ್ಲಿ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ವಿವರಿಸಿದ್ದಾರೆ. ಷೇರುಗಳಲ್ಲಿ ಹೂಡಿಕೆ ಮಾಡುವಾಗ ನಮ್ಮಲ್ಲಿ ಯಾವ ಕಾರಣಕ್ಕೂ ಅವಸರದ ಪ್ರವೃತ್ತಿ ಇರಬಾರದು ಅಂತ ಹೇಳುವ ಅವರು ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ವಾರನ್ ಬಫೆಟ್ ಮತ್ತು ಭಾರತದ ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ಪ್ರವೃತ್ತಿಗಳನ್ನು ಉಲ್ಲೇಖಿಸುತ್ತಾರೆ. ಒಮ್ಮೆ ವ್ಯಕ್ತಿಯೊಬ್ಬರು ಬಫೆಟ್ ಅವರಿಗೆ ನೀವು ಒಂದು ಕಂಪನಿಯ ಷೇರು ಖರೀದಿಸಿದ ನಂತರ ಎಷ್ಟು ಸಮಯದವರೆಗೆ ಅದನ್ನು ಮಾರದೆ ನಿಮ್ಮೊಂದಿಗೆ ಇಟ್ಟುಕೊಂಡರುತ್ತೀರಿ ಅಂತ ಕೇಳಿದಾಗ ಅವರು ಚುಟಕಾಗಿ, ‘ಕೊನೆವರೆಗೆ’ ಅಂತ ಉತ್ತರಿಸಿದರಂತೆ! ಹಾಗೆಯೇ, ಜುಂಜುನ್ವಾಲಾ ಅವರು ಒಂದು ಕಂಪನಿಯ ಷೇರುಗಳನ್ನು 20 ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮೊಂದಿಗೆ ಇಟ್ಟುಕೊಂಡಿರುತ್ತಾರೆ.
ಷೇರುಗಳ ಖರೀದಿಯನ್ನು ಡಾ ರಾವ್ ಮದುವೆಗೆ ಹೋಲಿಸುತ್ತಾರೆ. ಮದುವೆ ಒಮ್ಮೆ ಅಯ್ತು ಅಂತಾದರೆ, ಸಂಗಾತಿಯೊಂದಿಗೆ ಕೊನೆವರೆಗೆ ಜೊತೆಯಾಗಿರುತ್ತೇವೆ. ಷೇರುಗಳಲ್ಲಿ ಹೂಡಿಕೆ ಮಾಡುವಾಗಲೂ ನಮ್ಮ ಧೋರಣೆ ಅದೇ ತೆರನಾಗಿರಬೇಕು ಅಂತ ಅವರು ಹೇಳುತ್ತಾರೆ. ಅದು ಸರಿ, ಹೂಡಿಕೆಗೆ ಕಂಪನಿಗಳನ್ನು ಆರಿಸಿಕೊಳ್ಳೋದು ಹೇಗೆ ಅನ್ನೋ ಪ್ರಶ್ನೆಗೆ ಡಾ ರಾವ್ ಸಂಶೋಧನೆ ಮುಖ್ಯ ಅಂತ ಹೇಳುತ್ತಾರೆ. ಸಂಶೋಧನೆ ಮಾಡುವುದು ಹೇಗೆ ಎನ್ನುವುದನ್ನು ಸಹ ಅವರು ವಿವರಿಸುತ್ತಾರೆ.
ಯಾವುದೇ ಒಂದು ಕಂಪನಿಯ ಪೂರ್ವಾಪರ ಮತ್ತು ಪ್ರಸಕ್ತ ಮಾರ್ಕೆಟ್ನಲ್ಲಿ ಅದರ ಸ್ಟ್ಯಾಂಡಿಂಗ್ ಅರ್ಥಮಾಡಿಕೊಳ್ಳಬೇಕಾದರೆ, ಬಿಸಿನೆಸ್ಗೆ ಸಂಬಂಧಿಸಿದ ಪತ್ರಿಕೆಗಳನ್ನು ನಿಯಮಿತವಾಗಿ ಓದಬೇಕು ಅಂತ ಡಾ ರಾವ್ ಹೇಳುತ್ತಾರೆ. ಒಂದು ಕಂಪನಿಯ ಜಾತಕ ನಮಗೆ ಗೊತ್ತಾಗಬೇಕಾದರೆ, ಎರಡು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಮೊದಲನೆಯದ್ದು ಅ ನಿರ್ದಿಷ್ಟ ಕಂಪನಿ ಲಾಭದಲ್ಲಿ ಸಾಗುತ್ತಿದೆಯಾ ಅನ್ನೋದನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಎರಡನೇಯದ್ದು ಕಂಪನಿಯು ತನ್ನ ಷೇರುದಾರರಿಗೆ ಡಿವಿಡೆಂಟ್ ನೀಡಿದೆಯಾ ಅನ್ನೋದು. ಇವೆರಡು ಗೊತ್ತಾದರೆ ನಿಮ್ಮ ಸಂಶೋಧನೆ ಶೇಕಡಾ 70 ರಷ್ಟು ಆದಂತೆಯೇ ಅನ್ನುತ್ತಾರೆ ರಾವ್.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿ ಎಸ್ ಈ) ನಲ್ಲಿ 5,000 ಕ್ಕೂ ಹೆಚ್ಚು, ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ ಎಸ್ ಈ) ನಲ್ಲಿ ಸುಮಾರು 2,200 ಕಂಪನಿಗಳು ಲಿಸ್ಟ್ ಆಗಿರುವುದರಿಂದ ನಮಗೆ ಪ್ರಿಯವೆನಿಸುವ ಸೆಕ್ಟರ್ನ ಕಂಪನಿಗಳನ್ನು ಹುಡುಕಿಕೊಳ್ಳಬೇಕು ಎನ್ನುವ ರಾವ್ ಹೂಡಿಕೆ ಮುನ್ನ ಶ್ರಮಪಡಲೇಬೇಕು ಅಂತ ಸಲಹೆ ನೀಡುತ್ತಾರೆ.
ಇದನ್ನೂ ಓದಿ: Viral Video: ಗೆಳೆಯನ ಮದುವೆ ಸಮಾರಂಭದಲ್ಲಿ ಸ್ನೇಹಿತರ ಮೋಜು ಮಸ್ತಿ; ನಗು ನಗುತ್ತಾ ಆಚರಿಸಿದ ಅರಿಶಿಣ ಶಾಸ್ತ್ರದ ವಿಡಿಯೋ ನೋಡಿ