89ರ ಇಳಿಪ್ರಾಯದಲ್ಲೂ ಹಿರಿಯ ಮುತ್ಸದ್ದಿ ಎಸ್ ಎಮ್ ಕೃಷ್ಣ ವರ್ಚಸ್ಸು ಕೊಂಚವೂ ಕಡಿಮೆಯಾಗಿಲ್ಲ!
ಕೃಷ್ಣ ಅವರು ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಿಳಿ ಪಂಚೆ ಮತ್ತು ತಿಳಿ ಹಸಿರು ರೇಷ್ಮೆ ಜುಬ್ಬಾನಲ್ಲಿ ಕಂಗೊಳಿಸುತ್ತಿದ್ದ ಕೃಷ್ಣ ಅವರು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್ ಎಮ್ ಕೃಷ್ಣ ತಮ್ಮ ಇಳಿವಯಸ್ಸಿನಲ್ಲೂ ಕ್ರೌಡ್ ಪುಲ್ಲರ್ ಅನ್ನೋದು ಗುರುವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಸಾಬೀತಾಯಿತು. ಕೃಷ್ಣ ಅವರು ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಿಳಿ ಪಂಚೆ ಮತ್ತು ತಿಳಿ ಹಸಿರು ರೇಷ್ಮೆ ಜುಬ್ಬಾನಲ್ಲಿ ಕಂಗೊಳಿಸುತ್ತಿದ್ದ ಕೃಷ್ಣ ಅವರು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಆಫ್ ಕೋರ್ಸ್ ಅವರು ಉದ್ಘಾಟಕರಾಗಿದ್ದರಿಂದ ಎಲ್ಲರ ದೃಷ್ಟಿ ಅವರ ಮೇಲೆ ನೆಟ್ಟಿದ್ದು ನಿಜವೇ. ಆದರೆ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರ ಸಮ್ಮುಖದಲ್ಲಿ; ಬೆಂಗಳೂರನ್ನು ಸಿಲಿಕಾನ್ ಸಿಟಿ ಅಂತ ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕೃಷ್ಣ ಅವರು ಡಿಫರೆಂಟ್ ಆಗಿ ಕಾಣಿಸುತ್ತಿದ್ದರು. ಅವರ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ ಅವರ ವ್ಯಕ್ತಿತ್ವಕ್ಕೆ ಮೆರಗು ನೀಡಿತ್ತು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಸಚಿವ ಸಂಪುಟದ ಸಹೋದ್ಯೋಗಿಳಾಗಿರುವ ಅರ್ ಅಶೋಕ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ, ಬೈರತಿ ಬಸವರಾಜ, ಬಿಸಿ ಪಾಟೀಲ, ಜೆಡಿಎಸ್ ಧುರೀಣ ಜಿಟಿ ದೇವೇಗೌಡ, ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ತನ್ವೀರ್ ಸೇಟ್, ಮಾಜಿ ಸಚಿವ ಎಚ್ ವಿಶ್ವನಾಥ, ಸಂಸದ ಪ್ರತಾಪ ಸಿಂಹ, ಮೈಸೂರು ಮೇಯರ್ ಸುನಂದ ಪಳನೇತ್ರ ಮೊದಲಾದವರು ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪೂಜೆಯ ನಂತರ ಮೀಡಿಯಾ ಸ್ಯಾವಿಯಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಮಾಧ್ಯಮ ವರದಿಗಾರರು ಮತ್ತು ಕೆಮೆರಾಮನ್ಗಳೆಡೆ ಮುಗುಳುನಗೆ ಬೀರಿದರು.
ಇದನ್ನೂ ಓದಿ: Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ