AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್

ತಾಂತ್ರಿಕ ಸಮಸ್ಯೆಯಿಂದಾಗಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ಈ ತೊಂದರೆ ಕಾಣಿಸಿಕೊಂಡಿದ್ದು, ನಿನ್ನೆ ರಾತ್ರಿ ಈ ಸಮಸ್ಯೆ ಉಂಟಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಈ ಸಮಸ್ಯೆ ಕಂಡುಬಂದಿದೆ.

Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್
Instagram Down
TV9 Web
| Updated By: Vinay Bhat|

Updated on: Oct 09, 2021 | 12:31 PM

Share

ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರು ಮತ್ತೊಮ್ಮೆ ಪರದಾಡಿದ ಸ್ಥಿತಿ ವರದಿಯಾಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ಎರಡು ಗಂಟೆಗಳ ಕಾಲ ಫೇಸ್‌ಬುಕ್, ಇನ್​ಸ್ಟಾ, ವಾಟ್ಸ್​ಆ್ಯಪ್ ಸೇವೆಯು ಸ್ಥಗಿತಗೊಂಡಿದ್ದು, ತನ್ನ ಬಳಕೆಗಾರರಲ್ಲಿ ಫೇಸ್‌ಬುಕ್ ಇನ್‌ಕಾರ್ಪೊರೇಷನ್ ಕ್ಷಮೆಯನ್ನು ಯಾಚಿಸಿದೆ. ಎರಡು ಗಂಟೆಗಳ ಕಾಲ ಮತ್ತೆ ಫೇಸ್‌ಬುಕ್ ಸ್ಥಗಿತಗೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ, ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ನಿನ್ನೆ ರಾತ್ರಿ ಈ ಸಮಸ್ಯೆ ಉಂಟಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಈ ಸಮಸ್ಯೆ ಕಂಡುಬಂದಿದೆ. ಕಳೆದ ಸೋಮವಾರ ಕೂಡ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 6 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಬಳಕೆ ಅಲಭ್ಯವಾಗಿತ್ತು.

ಸ್ಥಗಿತ ಆರಂಭವಾದ ಸ್ವಲ್ಪ ಸಮಯದ ನಂತರ ಫೇಸ್‌ಬುಕ್, ತನ್ನ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ತೊಂದರೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ. ಆದರೆ ಸಮಸ್ಯೆಯ ಸ್ವರೂಪದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಲಿಲ್ಲ. ಬಳಕೆದಾರರು ತಮಗೆ ಬೇಕಾದದ್ದನ್ನು ಪಡೆಯಲು ಅಗತ್ಯವಿರುವ ಡೊಮೈನ್‌ ನೇಮ್‌ ಸಿಸ್ಟಮ್‌ನಲ್ಲಿ ಉಂಟಾದ ಅಡಚಣೆಯೇ ಈ ಸ್ಥಗಿತಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳ ಸ್ಥಗಿತದಿಂದ ಕೇವಲ ನಷ್ಟಕ್ಕೆ ಒಳಗಾಗುವುದು ಮಾತ್ರವಲ್ಲದೇ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಮಾರ್ಕ್ ಜುಕರ್​​ಬರ್ಗ್​ ಅವರು ಕೆಳಗಿಳಿದಿದ್ದಾರೆ ಎಂದು ಹೇಳಲಾಗಿದೆ. ಕಳೆದ ವಾರ ಫೇಸ್‍ಬುಕ್ ಸೇವೆ ಸ್ಥಗಿತಗೊಂಡಿದ್ದರಿಂದ ಫೇಸ್‍ಬುಕ್‍ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9 ರಷ್ಟು ಕುಸಿದಿತ್ತು. ಪರಿಣಾಮ ಮಾಲೀಕ ಮಾರ್ಕ್ ಝುಕೆರ್‌ಬರ್ಗ್​ಗೆ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂಪಾಯಿ ನಷ್ಟ ಆಗಿತ್ತು.

ಭಾರತದಲ್ಲಿ 410 ಮಿಲಿಯನ್​ಗಿಂತಲೂ ಹೆಚ್ಚಿನ ಬಳಕೆದಾರರು ಫೇಸ್​ಬುಕ್​ ಬಳಕೆ ಮಾಡುತ್ತಿದ್ದು, ವಾಟ್ಸ್​ಆ್ಯಪ್​​​ 530 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿದೆ. ಇನ್​​​ಸ್ಟಾಗ್ರಾಂನಲ್ಲಿ 210 ಮಿಲಿಯನ್​ ಬಳಕೆದಾರರು ಇದ್ದಾರೆ.

ಕಳೆದ ಸೋಮವಾರ ರಾತ್ರಿ ಕೂಡ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ತಮ್ಮ ವಾಲ್‌ನಲ್ಲಿ ಹೊಸ ಪೋಸ್ಟ್‌ ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ವಾಟ್ಸ್​ಆ್ಯಪ್ ಬಳಕೆದಾರರಿಗೆ ಯಾವುದೇ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿರಲ್ಲ. ಈ ಕುರಿತು ಫೇಸ್​ಬುಕ್ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲೂ ಪ್ರತಿಕ್ರಿಯಿಸಿತ್ತು. ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿತ್ತು.

Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್​ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ

Moto G Pure: ಒಂದೇ ದಿನ ಬಜೆಟ್ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಮೋಟೋ

(Instagram went down for a lot of users on Friday evening Facebook Messenger was affected too)

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು