Moto G Pure: ಒಂದೇ ದಿನ ಬಜೆಟ್ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಮೋಟೋ
Moto E40: ಮೋಟೋ E40 ಫೋನ್ ಯುರೋಪ್‌ನಲ್ಲಿ ಅನಾವರಣಗೊಳಿಸಿದೆ, ಮೋಟೋ ಜಿ ಪ್ಯೂರ್ ಯುಎಸ್‌ನಲ್ಲಿ ಪರಿಚಯಿಸಿದೆ. ಸದ್ಯದಲ್ಲೇ ಈ ಎರಡೂ ಸ್ಮಾರ್ಟ್‌ಫೋನ್ ಭಾರತಕ್ಕೆ ಲಗ್ಗೆಯಿಡಲಿದೆ.
ಈ ವರ್ಷ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಬಹು ನಿರೀಕ್ಷಿತ ಮೋಟೋ ಇ40 (Moto E40) ಮತ್ತು ಮೋಟೋ ಜಿ ಪ್ಯೂರ್ (Moto G Pure) ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಎರಡೂ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಮೋಟೋ E40 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮೋಟೋ G ಪ್ಯೂರ್ ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ನಿಂದ ಕೂಡಿದೆ.
ಮೋಟೋ E40 ಫೋನ್ ಯುರೋಪ್‌ನಲ್ಲಿ ಅನಾವರಣಗೊಳಿಸಿದೆ, ಮೋಟೋ ಜಿ ಪ್ಯೂರ್ ಯುಎಸ್‌ನಲ್ಲಿ ಪರಿಚಯಿಸಿದೆ. ಸದ್ಯದಲ್ಲೇ ಈ ಎರಡೂ ಸ್ಮಾರ್ಟ್‌ಫೋನ್ ಭಾರತಕ್ಕೆ ಲಗ್ಗೆಯಿಡಲಿದೆ. ಮೋಟೋ E40 ಬೆಲೆ ಯುರೋ 149, ಅಂದರೆ ಭಾರತದಲ್ಲಿ ಅಂದಾಜು 12,900 ರೂ. ಎನ್ನಬಹುದು. ಇದನ್ನು ಚಾರ್ಕೋಲ್ ಗ್ರೇ ಮತ್ತು ಕ್ಲೇ ಪಿಂಕ್ ಕಲರ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಮೋಟೋ ಜಿ ಪ್ಯೂರ್ ಸ್ಮಾರ್ಟ್‌ಫೋನ್ ಬೆಲೆ $ 159.99 ಭಾರತದಲ್ಲಿ ಅಂದಾಜು 12,00 0ರೂ. ಈ ಪೈಕಿ ಮೋಟೋ E40 ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಅಕ್ಟೋಬರ್ 12 ರಂದು ಬಿಡುಗಡೆಗೊಳ್ಳಲಿದೆ.
ಮೋಟೋ E40 ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೊಕ್ ಟಿ 700 ಆಕ್ಟಾ-ಕೋರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸರ್ನಿಂದ ಕೂಡಿದೆ. ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದ್ದು, ನೈಟ್ ಫೋಟೋಗ್ರಫೀಗೆ ಅನುಕೂಲವಾಗಲಿದೆ. ಜೊತೆಗೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 40 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ.
ಇತ್ತ ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್ 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G25 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಜೊತೆಗೆ 4,000mAh ಬ್ಯಾಟರಿ ಸಾಮರ್ಥ್ಯ ನೀಡಲಾಗಿದೆ.
Amitabh Bachchan Voice: ಅಮಿತಾಬ್ ಬಚ್ಚನ್ ಧ್ವನಿಯನ್ನು ಅಮೆಜಾನ್ ಎಕೋ ಮತ್ತು ಆ್ಯಪ್ಗೆ ಅಳವಡಿಸುವುದು ಹೇಗೆ?
Realme GT Neo 2: ಚೀನಾದಲ್ಲಿ ಧೂಳೆಬ್ಬಿಸಿದ ರಿಯಲ್ ಮಿ ಜಿಟಿ ನಿಯೋ 2 ಫೋನ್ ಅ. 13ಕ್ಕೆ ಭಾರತದಲ್ಲಿ ಬಿಡುಗಡೆ: ಬೆಲೆ?
(Moto E40 and Moto G Pure smartphones have gone official)