Realme GT Neo 2: ಚೀನಾದಲ್ಲಿ ಧೂಳೆಬ್ಬಿಸಿದ ರಿಯಲ್ ಮಿ ಜಿಟಿ ನಿಯೋ 2 ಫೋನ್ ಅ. 13ಕ್ಕೆ ಭಾರತದಲ್ಲಿ ಬಿಡುಗಡೆ: ಬೆಲೆ?
ರಿಯಲ್ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್ 6.62-ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು ಇದೇ ಅಕ್ಟೋಬರ್ 13 ರಂದು ಮಧ್ಯಾಹ್ನ 12:30ಕ್ಕೆ ಭಾರತದಲ್ಲಿ ಅನಾವರಣಗೊಳ್ಳಲಿದೆ.
ಇತ್ತಿಚಿಗಷ್ಟೇ ಚೀನಾ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ್ದ ರಿಯಲ್ ಮಿ (Realme) ಕಂಪನಿಯ ಬಹುನಿರೀಕ್ಷಿತ ನೂತನ ರಿಯಲ್ ಮಿ ಜಿಟಿ ನಿಯೋ 2 (Realme GT Neo 2) ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಲಾಂಚ್ ಆಗಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ತಿಳಿಸಿದ್ದು, ಇದೇ ಅಕ್ಟೋಬರ್ 13 ರಂದು ಭಾರತದಲ್ಲಿ ರಿಯಲ್ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ ಎಂದು ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಮಾಹಿತಿ ಹಂಚಿಕೊಂಡಿದೆ.
ರಿಯಲ್ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್ 6.62-ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು ಪೂರ್ಣ-ಎಚ್ಡಿ + ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1,300 ಗರಿಷ್ಠ ಹೊಳಪನ್ನು ಹೊಂದಿದೆ. HDR10+ ಕಂಟೆಂಟ್, DC 600Hz ಟಚ್ ಸ್ಯಾಂಪ್ಲಿಂಗ್ ದರವನ್ನು ಸಹ ಬೆಂಬಲಿಸುತ್ತದೆ. 8GB RAM ಮತ್ತು 128GB ಅಂತರ್ನಿರ್ಮಿತ ಸಂಗ್ರಹಣೆಯನ್ನು ಪ್ಯಾಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇತ್ತೀಚಿನ ಆಂಡ್ರಾಯ್ಡ್ 11 ರನ್ ಮಾಡುತ್ತದೆ ಹಾಗೂ ಇದು ಶಕ್ತಿಯುತವಾದ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 55W ನ ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಪಡೆದುಕೊಂಡಿದೆ.
ರಿಯಲ್ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನಿನ ಕ್ಯಾಮೆರಾ ವಿಶೇಷತೆಗಳಿಗೆ ಸಂಬಂಧಿಸಿದಂತೆ, ಈ ರಿಯಲ್ ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ. 8 ಮೆಗಾಪಿಕ್ಸೆಲ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಆಟೋಫೋಕಸ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಸೆಲ್ಫಿಗಳಿಗಾಗಿ ಸಿಂಗಲ್ ಫ್ರಂಟ್ ಕ್ಯಾಮೆರಾ ಸೆಟಪ್ ಹೊಂದಿದ್ದು, 16 ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಇನ್ನು ಎಐ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವುದನ್ನು ನೋಡಬಹುದು.
ಚೀನಾದಲ್ಲಿ 8GB RAM + 128GB ಸ್ಟೋರೇಜ್ ವೇರಿಯಂಟ್ನಲ್ಲಿ ಸಿಗುವ ರಿಯಲ್ ಮಿ ಜಿಟಿ ನಿಯೋ 2 ಸಿಎನ್ವೈ 2,499 (ಭಾರತದಲ್ಲಿ ಅಂದಾಜು ರೂ. 28,500) ನಿಂದ ಆರಂಭವಾಗುತ್ತದೆ ಮತ್ತು ಟಾಪ್ 12 ಜಿಬಿ RAM + 256GB ಸ್ಟೋರೇಜ್ ಮಾಡೆಲ್ಗೆ ಸಿಎನ್ವೈ 2,999 (ಅಂದಾಜು ರೂ 34,200) ವರೆಗೆ ಇರಲಿದೆ. 8GB RAM + 128GB ಸ್ಟೋರೇಜ್ ಆಯ್ಕೆಯ ಫೋನ್ ಬೆಲೆ CNY 2,699 (ಅಂದಾಜು ರೂ. 30,800) ಇರಲಿದೆ. ಗ್ರಾಹಕರು ನಿಯೋ ಗ್ರೀನ್, ಪೇಲ್ ಬ್ಲೂ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇದೇ ಅಕ್ಟೋಬರ್ 13 ರಂದು ಮಧ್ಯಾಹ್ನ 12:30ಕ್ಕೆ ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಅನಾವರಣಗೊಳ್ಳಲಿದೆ.
(Realme GT Neo 2 is coming to India on October 13 the company has announced)