AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್​ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ

ಭಾರ್ತಿ ಏರ್ಟೆಲ್ ಸಂಸ್ಥೆ 100 ರೂ. ಒಳಗೆ ನಾಲ್ಕು ಡೇಟಾ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಅದರಲ್ಲಿ 48 ರೂಪಾಯಿಯ ಪ್ಲಾನ್​ ಬರೋಬ್ಬರಿ 3GB ಡೇಟಾ ಪ್ರಯೋಜನವನ್ನು ನೀಡುತ್ತದೆ.

Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್​ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ
Airtel Prepaid Plans
TV9 Web
| Edited By: |

Updated on: Oct 08, 2021 | 3:30 PM

Share

ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರಿಯುತ್ತಲೇ ಇದೆ. ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ತನ್ನ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಸದ್ಯ ಏರ್ಟೆಲ್ 48 ರೂ. ಯಿಂದ (Airtel rs 48 Pack) ಆರಂಭವಾದ ಯೋಜನೆಗಳನ್ನು ಪರಿಚಯಿಸಿದೆ. ಇದರ ಮೂಲಕ ಹೆಚ್ಚಿನ ಡೇಟಾ ಪ್ರಯೋಜನ ಪಡೆಯಬಹುದಾಗಿದೆ.

ಹೌದು, ಭಾರ್ತಿ ಏರ್ಟೆಲ್ ಸಂಸ್ಥೆ 100 ರೂ. ಒಳಗೆ ನಾಲ್ಕು ಡೇಟಾ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಅದರಲ್ಲಿ 48 ರೂಪಾಯಿಯ ಪ್ಲಾನ್​ ಬರೋಬ್ಬರಿ 3GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಅಂತೆಯೆ 78 ರೂ. ಪ್ಲಾನ್​ 5GB ಡೇಟಾ ಮತ್ತು 89 ರೂ. ಪ್ಲಾನ್ 6GB ಡೇಟಾವನ್ನು ನೀಡುತ್ತದೆ. ಈ 89 ರೂ. ಯೋಜನೆ ಮೂಲಕ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು ಉಚಿತ ಹಲೋ ಟ್ಯೂನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾದ ಆಫರ್ ಕೂಡ ಲಭ್ಯವಿದೆ.

ಇನ್ನು ಏರ್ಟೆಲ್​ನ 119 ರೂ. ಡೇಟಾ ಪ್ಲಾನ್ ಕೂಡ ಇದ್ದು ಇದರಲ್ಲಿ 15GB ಡೇಟಾವನ್ನು ಮತ್ತು ಎಕ್ಸ್ ಸ್ಟ್ರೀಮ್ ಮೊಬೈಲ್ ಪ್ಯಾಕ್ ಗೆ ಪ್ರವೇಶವನ್ನು ಪಡೆಯಬಹುದು. ಬಳಕೆದಾರರು ಏರ್ಟೆಲ್​ ಎಕ್ಸ್‌ಸ್ಟ್ರೀಮ್ ಕಂಟೆಂಟ್‌ಗೆ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಆಂಡ್ರಾಯ್ಡ್ ಅಥವಾ ಐಒಎಸ್ ಮೊಬೈಲ್ ಸಾಧನಗಳಲ್ಲಿ ಏರ್ಟೆಲ್​ ಎಕ್ಸ್‌ಸ್ಟ್ರೀಮ್ ಆ್ಯಪ್‌ನಲ್ಲಿ 30 ದಿನಗಳ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಆದರೆ, ಈ ಕೊಡುಗೆಯನ್ನು ಪಡೆಯಲು ಚಂದಾದಾರರು ತಮ್ಮ ಏರ್ಟೆಲ್​ ಎಕ್ಸ್‌ಸ್ಟ್ರೀಮ್ ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಬೇಕು.

ಏರ್ಟೆಲ್​ನ 379 ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್ಟೆಲ್​​​ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಪಡೆಯಬಹುದು.

ಅಂತೆಯೆ 598 ರೂ. ಪ್ರಿಪೇಯ್ಡ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್‌ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

Moto G Pure: ಒಂದೇ ದಿನ ಬಜೆಟ್ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಮೋಟೋ

Amitabh Bachchan Voice: ಅಮಿತಾಬ್‌ ಬಚ್ಚನ್‌ ಧ್ವನಿಯನ್ನು ಅಮೆಜಾನ್ ಎಕೋ ಮತ್ತು ಆ್ಯಪ್​ಗೆ ಅಳವಡಿಸುವುದು ಹೇಗೆ?

(Airtel has a host of interesting 4G data recharge plans that offer a good bundle of data)

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್