AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blue Aadhaar card: ಏನಿದು ಹೊಸ ಬ್ಲೂ ಆಧಾರ್​ ಕಾರ್ಡ್?, ಇದನ್ನು ಹೇಗೆ ಪಡೆಯುವುದು: ಇಲ್ಲಿದೆ ಎಲ್ಲ ಮಾಹಿತಿ

Baal Aadhaar: ಹೆಚ್ಚಿನವರಿಗೆ ತಿಳಿದಿರುವುದು ಸಾಮನ್ಯ ಆಧಾರ್​ ಕಾರ್ಡ್, ಇದು ವಯಸ್ಕರಿಗೆ ಮಾತ್ರ ನೀಡಲಾಗುತ್ತೆ. ಮತ್ತೊಂದು ವಿಧದ ಆಧಾರ್​ ಕಾರ್ಡ್ ಸಹ ಇದೆ. ಇದನ್ನು ಬ್ಲೂ ಕಲರ್​ ಆಧಾರ್​ ಕಾರ್ಡ್ ಅಥವಾ ಬಾಲ ಆಧಾರ್​ಕಾರ್ಡ್ ಎಂದು ಕರೆಯಲಾಗುತ್ತೆ.

Blue Aadhaar card: ಏನಿದು ಹೊಸ ಬ್ಲೂ ಆಧಾರ್​ ಕಾರ್ಡ್?, ಇದನ್ನು ಹೇಗೆ ಪಡೆಯುವುದು: ಇಲ್ಲಿದೆ ಎಲ್ಲ ಮಾಹಿತಿ
Blue Aadhaar card
TV9 Web
| Updated By: Vinay Bhat|

Updated on: Oct 09, 2021 | 1:21 PM

Share

ಆಧಾರ್ (Aadhaar) ಎಂಬುದು ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನೀಡಿರುವ ವಿಶೇಷವಾದ 12 ಸಂಖ್ಯೆಗಳಾಗಿರುತ್ತದೆ. ನಿಮ್ಮ ಗುರುತನ್ನು ಸಾಬೀತು ಪಡಿಸುವುದಕ್ಕೆ ಇರುವ ಬಹಳ ಪ್ರಮುಖವಾದ ದಾಖಲಾತಿಗಳಲ್ಲಿ ಆಧಾರ್ ಕೂಡ ಒಂದು. ಐಟಿಆರ್ ಅನ್ನು ಸಲ್ಲಿಸುವುದು ಮತ್ತು ಭಾರತದ ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕಾಗಿ ಆಧಾರ್ ಬಹಳ ಪ್ರಮುಖವಾದುದ್ದಾಗಿದೆ. ಆಧಾರ್ ಕಾರ್ಡ್‌ನಲ್ಲಿ 2 ವಿಧವಿದ್ದು, ಮೊದಲನೆಯದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಆಧಾರ್ ಕಾರ್ಡ್‌ ಮತ್ತು ಇನ್ನೊಂದು ಬ್ಲೂ ಕಲರ್ ಆಧಾರ್ ಕಾರ್ಡ್‌ (Blue-coloured Aadhaar card) ಅಥವಾ ಬಾಲ್ ಆಧಾರ್ ಕಾರ್ಡ್ ಆಗಿದೆ.

ಹೌದು, ಹೆಚ್ಚಿನವರಿಗೆ ತಿಳಿದಿರುವುದು ಸಾಮನ್ಯ ಆಧಾರ್​ ಕಾರ್ಡ್, ಇದು ವಯಸ್ಕರಿಗೆ ಮಾತ್ರ ನೀಡಲಾಗುತ್ತೆ. ಮತ್ತೊಂದು ವಿಧದ ಆಧಾರ್​ ಕಾರ್ಡ್ ಸಹ ಇದೆ. ಇದನ್ನು ಬ್ಲೂ ಕಲರ್​ ಆಧಾರ್​ ಕಾರ್ಡ್ ಅಥವಾ ಬಾಲ ಆಧಾರ್​ಕಾರ್ಡ್ ಎಂದು ಕರೆಯಲಾಗುತ್ತೆ. ಬಾಲ ಆಧಾರ್ ಕಾರ್ಡ್ ಅನ್ನು UIDAI 2018 ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಪರಿಚಯಿಸಿತು. ನವಜಾತ ಶಿಶುಗಳ ಪೋಷಕರು ಭಾರತದಲ್ಲಿ ಬಾಲ್ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಆಧಾರ್​ ಕಾರ್ಡ್ ಪಡೆಯಲು ತಮ್ಮ ಫಿಂಗರ್​ಪ್ರಿಂಟ್ ಹಾಗೂ ಐರಿಸ್​ ಸ್ಕ್ಯಾನ್​ನಲ್ಲಿ ನೊಂದಾಯಿಸಿಕೊಳ್ಳಬೇಕು. ಆದರೆ ಬಾಲ ಆಧಾರ್​ ಕಾರ್ಡ್​ನಲ್ಲಿ ಇಂತಹ ಮಾಹಿತಿ ಯಾವುದು ಇರುವುದಿಲ್ಲ. ಬಾಲ ಆಧಾರ್​ ಕಾರ್ಡ್ ಪಡೆಯಲು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರಲ್ಲಿಒಬ್ಬರ ಆಧಾರ್​ ಕಾರ್ಡ್ ಸಂಖ್ಯೆ ನೀಡಬೇಕು. ಬಾಲ ಆಧಾರ್​ ಕಾರ್ಡ್ ಅನ್ನು ಪೋಷಕರೊಬ್ಬರ ಆಧಾರ್​ ಕಾರ್ಡ್​ಗ ಲಿಂಕ್​ ಮಾಡಲಾಗುತ್ತೆ.ಮಗುವಿಗೆ 5 ವರ್ಷ ದಾಟಿದ ನಂತರ, ಬಾಲ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ.

ಬ್ಲೂ ಆಧಾರ್ ಅಥವಾ ಬಾಲ ಆಧಾರ್ ಕಾರ್ಡ್ ಪಡೆಯುವುದು ಹೇಗೆ?:

  • ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ.
  • ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಒದಗಿಸಿ.
  • ಮಗುವಿನ ಛಾಯಾಚಿತ್ರವನ್ನು ಕ್ಲಿಕ್ ಮಾಡಲಾಗುತ್ತದೆ.
  • ಮಗುವಿನ ಆಧಾರ್ ಕಾರ್ಡ್ ಸಂಖ್ಯೆಯನ್ನು ಆತನ/ಆಕೆಯ ಪೋಷಕರ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಮಾಡಲಾಗುತ್ತದೆ.
  • ದೃಢೀಕರಣದ ನಂತರ, ಸ್ವೀಕೃತಿ ಸ್ಲಿಪ್ ಅನ್ನು ಸಂಗ್ರಹಿಸಿ.

Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್

Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್​ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ

(Blue Aadhaar card What is the blue-coloured Aadhaar card Here is how you can apply)

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ