Oppo A54s: ಕುತೂಹಲ ಕೆರಳಿಸಿದ ಬಜೆಟ್ ಬೆಲೆಯ ಒಪ್ಪೋ A54s ಸ್ಮಾರ್ಟ್ಫೋನಿನ ಫೀಚರ್ಸ್
ಒಪ್ಪೋ A54s ಫೋನಿನ ಲುಕ್ ಹಾಗೂ ಫೀಚರ್ಸ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಈ ಫೋನ್ ಬಹುತೇಕ ಒಪ್ಪೋ A16 ಫೋನಿನ ಹೋಲಿಕೆಯನ್ನು ಒಳಗೊಂಡಿದೆ.
ಒಪ್ಪೊ (Oppo) ಮೊಬೈಲ್ ಕಂಪನಿ ಬಜೆಟ್ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದರಲ್ಲಿ ಎತ್ತಿದ ಕೈ. ಈಗಾಗಲೇ ಕಡಿಮೆ ಬೆಲೆಗೆ ಹಲವು ಶ್ರೇಣಿಯಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿ ಸೈ ಅನಿಸಿಕೊಂಡಿದೆ. ಸದ್ಯ ಅಂತಹದೇ ಮತ್ತೊಂದು ಫೋನ್ ಬಿಡುಗಡೆ ಮಾಡಲು ಒಪ್ಪೋ ಸಿದ್ಧತೆ ನಡೆಸುತ್ತಿದೆ. ಒಪ್ಪೋ ಸಂಸ್ಥೆಯು ತನ್ನ A ಸರಣಿಯಲ್ಲಿ ಒಪ್ಪೋ A54s (Oppo A54s) ಸ್ಮಾರ್ಟ್‌ಫೋನ್ ಅನಾವರಣ ಮಾಡಲು ಸಜ್ಜಾಗಿದ್ದು ಇದರ ಫೀಚರ್ಸ್ ಈಗ ಲೀಕ್ ಅಗಿದೆ.
ಒಪ್ಪೋ A54s ಫೋನಿನ ಲುಕ್ ಹಾಗೂ ಫೀಚರ್ಸ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಈ ಫೋನ್ ಬಹುತೇಕ ಒಪ್ಪೋ A16 ಫೋನಿನ ಹೋಲಿಕೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಫೋನ್ ಕೆಳ ಬಲಭಾಗದಲ್ಲಿ ಒಪ್ಪೋ ಲೋಗೋ ನೀಡಲಾಗಿದೆ.
ಈ ಸ್ಮಾರ್ಟ್‌ಫೋನ್ ಶೈನ್ ಫಿನಿಶ್ ಇರುವಂತೆ ಕಾಣುತ್ತದೆ. ಫೋನಿನ ಮೇಲ್ಭಾಗದಲ್ಲಿ ವಾಟರ್‌ಡ್ರಾಪ್ ಶೈಲಿಯ ನಾಚ್ ಇದ್ದು, ಇದೊಂದು ಬಜೆಟ್ ಬೆಲೆಯ ಫೋನ್ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 6.52 ಇಂಚಿನ IPS LCD ಮಾದರಿಯಲ್ಲಿ ಇರಲಿದ್ದು ಇದರ ಜೊತೆಗೆ ಡಿಸ್‌ಪ್ಲೇಯು HD+ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿವೈಸ್ ಸಹ ಆಕರ್ಷಕ ಎನ್ನಲಾಗಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಬಹುದು. ಇನ್ನುಳಿದಂತೆ ಉಳಿದೆರಡು ರಿಯರ್ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಿಂಗ್ ಕ್ಯಾಮೆರಾ ಆಗಿರಲಿವೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ. ಇನ್ನು ಸೆಲ್ಫಿ ಕ್ಯಾಮೆರಾಗಾಗಿ 8 ಮೆಗಾ ಪಿಕ್ಸಲ್ ಸೆನ್ಸಾರ್ ನೀಡುವ ಸಾಧ್ಯತೆಗಳಿವೆ.
ಒಪ್ಪೋ A54s ಫೋನ್ ಮೀಡಿಯಾ ಟೆಕ್ ಹೆಲಿಯೋ G35 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11 ಅನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಇವೆ. ಇನ್ನು ಒಪ್ಪೋ A54s ಫೋನಿನ ಬ್ಯಾಟರಿ ಬ್ಯಾಕ್‌ಅಪ್ ಬಗ್ಗೆ ಮಾಹಿತಿಯು ಈಗ ಲಭ್ಯವಿಲ್ಲ. ಆದರೆ ಲೀಕ್ ವರದಿಯಂತೆ ಈ ಫೋನ್ ಪರ್ಲ್ ಬ್ಲೂ ಮತ್ತು ಕ್ರಿಸ್ಟಲ್ ಬ್ಲಾಕ್ ಬಣ್ಣಗಳಲ್ಲಿ ಬರುತ್ತದೆ ಎಂದು ಹೇಳಲಾಗಿದೆ.
Blue Aadhaar card: ಏನಿದು ಹೊಸ ಬ್ಲೂ ಆಧಾರ್ ಕಾರ್ಡ್?, ಇದನ್ನು ಹೇಗೆ ಪಡೆಯುವುದು: ಇಲ್ಲಿದೆ ಎಲ್ಲ ಮಾಹಿತಿ
Instagram down: ವಾರದಲ್ಲಿ ಎರಡನೇ ಬಾರಿ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್
(Oppo A54s key specifications include 50-megapixel cameras render leaked)