Maharashtra Bandh: ಲಖಿಂಪುರ ಖೇರಿಯ ರೈತರ ಹತ್ಯೆ ವಿರೋಧಿಸಿ ಇಂದು ಮಹಾರಾಷ್ಟ್ರ ಬಂದ್
ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಎನ್ಸಿಪಿಯನ್ನೊಳಗೊಂಡ ಮಹಾ ವಿಕಾಸ್ ಅಘಾಡಿ ಸರ್ಕಾರ ಬಂದ್ಗೆ ಕರೆ ನೀಡಿದ್ದು, ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಮುಂಬೈ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕಳೆದ ವಾರ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ನಡೆದ ಹಿಂಸಾಚಾರದಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದರು. ರೈತರ ಮೇಲೆ ನಡೆದ ಈ ದಾಳಿಯನ್ನು ವಿರೋಧಿಸಿ ಇಂದು ಮಹಾರಾಷ್ಟ್ರ ಬಂದ್ಗೆ ಕರೆ ನೀಡಲಾಗಿದೆ. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಇಂದು ಮಹಾರಾಷ್ಟ್ರದಲ್ಲಿ ಸಂಪೂರ್ಣ ಬಂದ್ ಘೋಷಿಸಿದೆ. ಇಲ್ಲಿನ ಅಂಗಡಿಗಳು, ಶಾಲಾ ಕಾಲೇಜುಗಳು ಬಂದ್ ಆಗಿದ್ದು, ಹಲವು ಸಂಘಟನೆಗಳು ಕೂಡ ಬಂದ್ಗೆ ಬೆಂಬಲ ನೀಡಿವೆ.
ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಎನ್ಸಿಪಿಯನ್ನೊಳಗೊಂಡ ಮಹಾ ವಿಕಾಸ್ ಅಘಾಡಿ ಸರ್ಕಾರ ಬಂದ್ಗೆ ಕರೆ ನೀಡಿದ್ದು, ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮೆಡಿಕಲ್ ಶಾಪ್, ಹಾಲಿನ ಅಂಗಡಿ ಸೇರಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ, ಮಾರುಕಟ್ಟೆಯನ್ನು ಮುಚ್ಚಲಾಗಿದೆ. ಬಂದ್ನಿಂದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸರ್ಕಾರದಿಂದ 500 ಗೃಹ ರಕ್ಷಕ ದಳ, 3 ಎಸ್ಆರ್ಪಿಎಫ್ ತಂಡ ಮತ್ತು 700 ಇತರೆ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.
Local trains are operating on their regular schedule, so you can plan your day accordingly.
Essential services are functional as usual.
Watch this space for any updates on disruption in traffic etc.#MumbaiUpdates
— Mumbai Police (@MumbaiPolice) October 11, 2021
ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಮಹಾರಾಷ್ಟ್ರದಲ್ಲಿ ಬಂದ್ ಘೋಷಿಸಲಾಗಿದ್ದು, ಇಂದು ಸಂಜೆಯವರೆಗೂ ಮಹಾರಾಷ್ಟ್ರ ಬಹುತೇಕ ಸ್ತಬ್ಧವಾಗಲಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಬಂದ್ ಜಾರಿಯಲ್ಲಿದ್ದು, ಪುಣೆ, ಘಟಕೋಪರ್, ಮಹೀಂ ಮುಂತಾದೆಡೆ ಅಂಗಡಿಗಳನ್ನು ಮುಚ್ಚಲಾಗಿದೆ. ಸ್ಥಳೀಯ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಕೆಲವೇ ಕೆಲವು ರೈಲುಗಳು ಮಾತ್ರ ಸಂಚರಿಸುತ್ತಿವೆ. ಮಹಾರಾಷ್ಟ್ರದ 2000ಕ್ಕೂ ಹೆಚ್ಚು ಹಣ್ಣು, ತರಕಾರಿ, ಹೂವು ಮಾರಾಟಗಾರರು ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
Maharashtra: Maha Vikas Aghadi that comprises of Congress, Shiv Sena, and NCP has called for a statewide bandh today in protest against the Lakhimpur Kheri violence that claimed the lives of 8 people including 4 farmers
Visuals from Bandra Reclamation area in Mumbai pic.twitter.com/57yOFikZLv
— ANI (@ANI) October 11, 2021
ಮಹಾರಾಷ್ಟ್ರದಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಬಾರದು ಎಂದು ಶಿವಸೇನೆ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ. ಒಂದುವೇಳೆ ಒತ್ತಾಯದಿಂದ ಅಂಗಡಿಗಳನ್ನು ಮುಚ್ಚಿಸಿದರೆ ಬಿಜೆಪಿ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಟ್ವೀಟ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
The Congress-Shiv Sena-NCP alliance has called for a bandh in Maharashtra today to protest the Lakhimpur Kheri violence that claimed the lives of 8 people including 4 farmers
Visuals from different areas of Aurangabad city pic.twitter.com/B0vp8Ucj2q
— ANI (@ANI) October 11, 2021
ಇದನ್ನೂ ಓದಿ: Lakhimpur Kheri ಲಖಿಂಪುರ್ ಘಟನೆಯನ್ನು ಹಿಂದೂ- ಸಿಖ್ ನಡುವಿನ ಕದನ ಮಾಡಲು ಪ್ರಯತ್ನ ನಡೆಯುತ್ತಿದೆ: ವರುಣ್ ಗಾಂಧಿ
ಲಖಿಂಪುರ ಖೇರಿ ಹಿಂಸಾಚಾರ ವಿರೋಧಿಸಿ ಸರಣಿ ಆಂದೋಲನಕ್ಕೆ ಮುಂದಾದ ರೈತರು; ಅ.18ರಂದು ರೈಲು ತಡೆ ಚಳವಳಿ
Published On - 9:57 am, Mon, 11 October 21