ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡುವುದಾಗಿ ಭರವಸೆ ನೀಡಿದ ತೆಲಂಗಾಣ ಸಚಿವ

TV9 Digital Desk

| Edited By: Rashmi Kallakatta

Updated on: Sep 15, 2021 | 12:30 PM

Hyderabad Rape Case: "ನಾವು ಖಂಡಿತವಾಗಿಯೂ ಆರೋಪಿಯನ್ನು ಬಂಧಿಸುತ್ತೇವೆ ಮತ್ತು ಅವರನ್ನು ಎನ್‌ಕೌಂಟರ್‌ ಮಾಡಿ ಕೊಲ್ಲುತ್ತೇವೆ. ಆತನನ್ನು ಬಿಡುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ ಮಲ್ಲಾ ರೆಡ್ಡಿ.

ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡುವುದಾಗಿ ಭರವಸೆ ನೀಡಿದ ತೆಲಂಗಾಣ ಸಚಿವ
ಮಲ್ಲಾ ರೆಡ್ಡಿ
Follow us

ಹೈದರಾಬಾದ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ( Hyderabad rape case)  ಆರೋಪಿಗಳನ್ನು “ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗುವುದು” ಎಂದು ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ(Malla Reddy) ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಹೈದರಾಬಾದಿನ ಸೈದಾಬಾದ್ ನಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕೇಳಿದಾಗ, “ನಾವು ಆರೋಪಿಗಳನ್ನು ಖಂಡಿತವಾಗಿಯೂ ಬಂಧಿಸುತ್ತೇವೆ ಮತ್ತು ಎನ್‌ಕೌಂಟರ್‌ ಮಾಡುತ್ತೇವೆ” ಎಂದಿದ್ದಾರೆ ಮಲ್ಲಾ ರೆಡ್ಡಿ.

ಮಲ್ಲಾ ರೆಡ್ಡಿ ಹೈದರಾಬಾದ್ ಅತ್ಯಾಚಾರ ಪ್ರಕರಣದಲ್ಲಿ 6 ವರ್ಷದ ಸಂತ್ರಸ್ತೆಗೆ ಶೀಘ್ರ ನ್ಯಾಯ ಒದಗಿಸುವ ಭರವಸೆ ನೀಡಿದರು.

“ನಾವು ಖಂಡಿತವಾಗಿಯೂ ಕುಟುಂಬ ಸದಸ್ಯರನ್ನು ಭೇಟಿಯಾಗುತ್ತೇವೆ ಮತ್ತು ಅವರಿಗೆ ಪರಿಹಾರ ನೀಡುತ್ತೇವೆ. ನಾವು ಕುಟುಂಬಕ್ಕೆ ಸಹಾಯ ಮಾಡುತ್ತೇವೆ” ಎಂದು ಮಂಗಳವಾರ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಾ ರೆಡ್ಡಿ ಹೇಳಿದ್ದಾರೆ.

“ನಾವು ಖಂಡಿತವಾಗಿಯೂ ಆರೋಪಿಯನ್ನು ಬಂಧಿಸುತ್ತೇವೆ ಮತ್ತು ಅವರನ್ನು ಎನ್‌ಕೌಂಟರ್‌ ಮಾಡಿ ಕೊಲ್ಲುತ್ತೇವೆ. ಆತನನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ ಮಲ್ಲಾ ರೆಡ್ಡಿ.

ಸೋಮವಾರ ಮಲ್ಕಾಜಗಿರಿ ಸಂಸದ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ, ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದರು, ಅತ್ಯಾಚಾರ ಆರೋಪಿಗಳ ‘ಎನ್‌ಕೌಂಟರ್‌ ‘ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದರು.

ಸೆಪ್ಟೆಂಬರ್ 9 ರಂದು ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದು ಕೊಲೆ ಮಾಡಲಾಗಿದೆ. ಆಕೆಯ ದೇಹವು ಬೀಗ ಹಾಕಿದ ಮನೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ನೆರೆಹೊರೆಯ 30ರ ಹರೆಯದ ಆರೋಪಿಯನ್ನು ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

15 ತಂಡಗಳನ್ನು ರಚಿಸಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ. 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಹೈದರಾಬಾದ್ ಪೊಲೀಸರು ಈ ಹಿಂದೆ 10 ಲಕ್ಷ ಬಹುಮಾನವನ್ನು ಘೋಷಿಸಿದ್ದರು.

ಏತನ್ಮಧ್ಯೆ, ವಿಶಾಖಪಟ್ಟಣದಲ್ಲಿ ಮೇಣದ ಬತ್ತಿ ರ್ಯಾಲಿಯನ್ನು ಆಯೋಜಿಸಲಾಯಿತು. ಹೈದರಾಬಾದ್‌ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: Statue of Equality: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಎರಡನೇ ಅತೀ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ‌

ಇದನ್ನೂ ಓದಿ: ರಾಷ್ಟ್ರಮಟ್ಟದ ಖೋ ಖೋ ಆಟಗಾರ್ತಿಯ ಅತ್ಯಾಚಾರ, ಕೊಲೆ ಹೇಗಾಯ್ತು?; ಮೊಬೈಲ್​ ಆಡಿಯೋದಿಂದ ಬಯಲು

(Telangana Labour Minister Malla Reddy assures encounter of Hyderabad rape case accused)

ತಾಜಾ ಸುದ್ದಿ

Related Stories

Click on your DTH Provider to Add TV9 Kannada