ರಾಷ್ಟ್ರಮಟ್ಟದ ಖೋ ಖೋ ಆಟಗಾರ್ತಿಯ ಅತ್ಯಾಚಾರ, ಕೊಲೆ ಹೇಗಾಯ್ತು?; ಮೊಬೈಲ್​ ಆಡಿಯೋದಿಂದ ಬಯಲು

TV9 Digital Desk

| Edited By: Sushma Chakre

Updated on: Sep 14, 2021 | 7:49 PM

Crime News: ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿನ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲೇ ಆಕೆ ತನ್ನ ಸ್ನೇಹಿತನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಆಗ ಆಕೆ ಆರೋಪಿಯ ಜೊತೆ ಜಗಳವಾಡಿದ, ಸಹಾಯಕ್ಕಾಗಿ ಅರಚಾಡಿದ್ದು ಫೋನ್​ನಲ್ಲಿ ರೆಕಾರ್ಡ್ ಆಗಿತ್ತು.

ರಾಷ್ಟ್ರಮಟ್ಟದ ಖೋ ಖೋ ಆಟಗಾರ್ತಿಯ ಅತ್ಯಾಚಾರ, ಕೊಲೆ ಹೇಗಾಯ್ತು?; ಮೊಬೈಲ್​ ಆಡಿಯೋದಿಂದ ಬಯಲು
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ತರ ಪ್ರದೇಶದ 24 ವರ್ಷದ ರಾಷ್ಟ್ರೀಯ ಮಟ್ಟದ ಖೋ-ಖೋ ಆಟಗಾರ್ತಿಯ ಮೇಲೆ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಪ್ರಕರಣದ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸ್ಲೀಪರ್​ಗಳ ಮಧ್ಯದಲ್ಲಿ ಖೋ ಖೋ ಆಟಗಾರ್ತಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದರು.

ಇದೀಗ ಖೋ ಖೋ ಆಟಗಾರ್ತಿಯ ಹಂತಕ ಪೊಲೀಸ್ ವಿಚಾರಣೆ ವೇಳೆ ಆ ದಿನ ನಡೆದ ಘಟನೆಯ ವಿವರ ನೀಡಿದ್ದಾನೆ. ಈ ಕೃತ್ಯ ನಡೆಯುವ ದಿನ ಸಂತ್ರಸ್ತೆ ತನ್ನ ಗೆಳೆಯನೊಂದಿಗೆ ಫೋನ್​ನಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್ ಎಲ್ಲೆಡೆ ಹರಿದಾಡುತ್ತಿದೆ. ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿನ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲೇ ಆಕೆ ತನ್ನ ಸ್ನೇಹಿತನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಆಗ ಆಕೆ ಆರೋಪಿಯ ಜೊತೆ ಜಗಳವಾಡಿದ, ಸಹಾಯಕ್ಕಾಗಿ ಅರಚಾಡಿದ್ದು ಫೋನ್​ನಲ್ಲಿ ರೆಕಾರ್ಡ್ ಆಗಿತ್ತು.

ಪೊಲೀಸರ ಪ್ರಕಾರ, ಸೆ. 10ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ದಲಿತ ಸಮುದಾಯಕ್ಕೆ ಸೇರಿದ ಖೋ ಖೋ ಆಟಗಾರ್ತಿ ಇಂಟರ್​ವ್ಯೂ ಮುಗಿಸಿಕೊಂಡು ಮನೆಗೆ ವಾಪಾಸ್ ಹೋಗುತ್ತಿದ್ದಳು. ಈ ವೇಳೆ ರೈಲ್ವೆ ಸ್ಟೇಷನ್​ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಹಜಾದ್ ಅಲಿಯಾಸ್ ಹಾದಿಮ್ ಆಕೆಯನ್ನು ಅಡ್ಡಗಟ್ಟಿ ಸಿಮೆಂಟ್ ರೈಲ್ವೆ ಸ್ಲೀಪರ್​ಗೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಈ ವೇಳೆ ಆಕೆ ಸಹಾಯಕ್ಕಾಗಿ ಕಿರುಚಾಡಿದ್ದಳು. ಆಕೆಯ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದ ಗೆಳೆಯ ಇದೆಲ್ಲವನ್ನೂ ಕೇಳಿಸಿಕೊಂಡು, ರೆಕಾರ್ಡ್ ಮಾಡಿಕೊಂಡಿದ್ದ. ಅದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಧ್ವನಿ ನಿಂತುಹೋಗಿತ್ತು.

ಸಹಾಯಕ್ಕಾಗಿ ಕಿರುಚಾಡುತ್ತಿದ್ದ ಆಕೆಯ ಕುತ್ತಿಗೆಗೆ ದುಪಟ್ಟಾ ಬಿಗಿದು, ಉಸಿರುಗಟ್ಟಿಸಲಾಗಿತ್ತು. ರೈಲ್ವೆ ಸ್ಲೀಪರ್ ಗಳ ಬಳಿ ಹಾದುಹೋಗುತ್ತಿದ್ದ ಆಕೆಯ ನೆರೆಹೊರೆಯವರು ಆಕೆಯನ್ನು ಗುರುತಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು, ಆಕೆಯ ಹಲ್ಲು ಮುರಿದುಹೋಗಿತ್ತು. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರಿಶೀಲಿಸಿದ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು.

ಅತ್ಯಾಚಾರವೆಸಗಿದ ಬಳಿಕ ಆರೋಪಿ ಆಕೆಯ ಮೊಬೈಲ್​ ಫೋನ್​ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದ. ಮನೆಗೆ ಹೋದ ಬಳಿಕ ಆ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದ. ಆದರೆ, ಸಂತ್ರಸ್ತೆಯ ಗೆಳೆಯ ನೀಡಿದ ಮಾಹಿತಿಯ ಆಧಾರದ ಮೇಲೆ ಆಕೆಯ ಮೊಬೈಲ್​ನ ಕೊನೆಯ ಲೊಕೇಷನ್ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ನಡೆದ ಸ್ಥಳದಲ್ಲಿ ಆರೋಪಿಯ ಚಪ್ಪಲಿ, ಶರ್ಟ್​ನ ಬಟನ್​ಗಳು ಕೂಡ ಸಿಕ್ಕಿದ್ದವು. ಆರೋಪಿಯ ಮನೆಯಲ್ಲಿ ರಕ್ತದ ಕಲೆಗಳಿದ್ದ ಶರ್ಟ್​ ಕೂಡ ಸಿಕ್ಕಿತ್ತು. ಅಲ್ಲದೆ, ಆತನ ಬೆನ್ನಿನ ಮೇಲೆ ಉಗುರಿನಿಂದ ಪರಚಿದ ಕಲೆಗಳಿದ್ದವು.

ಆ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಮಗಳು ಕೂಡ ಇದ್ದಾಳೆ. ಡ್ರಗ್ ಅಡಿಕ್ಟ್ ಆಗಿದ್ದ ಆತನ ವಿರುದ್ಧ ಈಗಾಗಲೇ 4 ಕೇಸುಗಳಿವೆ. ಆತನ ಕಾಮದ ಚಟಕ್ಕೆ ಯುವತಿ ಬಲಿಯಾಗಿದ್ದಾಳೆ.

ಇದನ್ನೂ ಓದಿ: Crime News: ದರೋಡೆ ಬಳಿಕ ಮನೆಯವರ ಕಾಲಿಗೆ ಬಿದ್ದ ಕಳ್ಳರು; 6 ತಿಂಗಳಲ್ಲಿ ಕದ್ದ ಹಣ ವಾಪಾಸ್ ಕೊಡುತ್ತೇವೆಂದು ಪರಾರಿ!

ಉತ್ತರ ಪ್ರದೇಶ: ರಾಷ್ಟ್ರೀಯ ಮಟ್ಟದ ಖೋ ಖೋ ಕ್ರೀಡಾಪಟುವಿನ ಶವ ರೈಲ್ವೆ ಹಳಿ ಬಳಿ ಪತ್ತೆ; ಇದು ಅತ್ಯಾಚಾರ ಎಂದ ಕುಟುಂಬ

(Crime News Screamed for Help Chilling audio clip records Uttar Pradesh National Level kho kho player rape and Murder)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada