ಉತ್ತರ ಪ್ರದೇಶ: ರಾಷ್ಟ್ರೀಯ ಮಟ್ಟದ ಖೋ ಖೋ ಕ್ರೀಡಾಪಟುವಿನ ಶವ ರೈಲ್ವೆ ಹಳಿ ಬಳಿ ಪತ್ತೆ; ಇದು ಅತ್ಯಾಚಾರ ಎಂದ ಕುಟುಂಬ

Uttar Pradesh: ಮರಣೋತ್ತರ ಪರೀಕ್ಷೆಯ ವರದಿಯು "ದಾರಿ ತಪ್ಪಿಸುತ್ತಿದೆ" ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ. "ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆಕೆಯ ದೇಹದ ಸ್ಥಿತಿ, ಕಳಚಿದ ಬಟ್ಟೆ ಮತ್ತು ಗಾಯಗಳು ಇದಕ್ಕೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶ: ರಾಷ್ಟ್ರೀಯ ಮಟ್ಟದ ಖೋ ಖೋ ಕ್ರೀಡಾಪಟುವಿನ ಶವ ರೈಲ್ವೆ ಹಳಿ ಬಳಿ ಪತ್ತೆ; ಇದು ಅತ್ಯಾಚಾರ ಎಂದ ಕುಟುಂಬ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 12, 2021 | 11:54 AM

ಬಿಜ್ನೋರ್: ಉತ್ತರ ಪ್ರದೇಶದಲ್ಲಿ 24 ವರ್ಷದ ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ (kho kho player) ಶವವಾಗಿ ಪತ್ತೆಯಾಗಿದ್ದು, ಆಕೆಯ ಮೃತದೇಹವು ಶುಕ್ರವಾರ ಮಧ್ಯಾಹ್ನ ಬಿಜ್ನೋರ್‌ನಲ್ಲಿರುವ ಆಕೆಯ ಮನೆಯಿಂದ 100 ಮೀ ಗಿಂತಲೂ ಕಡಿಮೆ ಸಿಮೆಂಟ್ ರೈಲ್ವೆ ಸ್ಲೀಪರ್‌ಗಳ ರಾಶಿಯ ನಡುವೆ ಸಿಕ್ಕಿದೆ. ಶವ ಪತ್ತೆಯಾದಾಗ ಆಕೆಯ ಬಟ್ಟೆಗಳು ಅಸ್ತವ್ಯಸ್ತವಾಗಿದ್ದು ಮುಖದ ಮೇಲೆ ಗಂಭೀರ ಗಾಯಗಳಿತ್ತು. ಹಲ್ಲು ಮುರಿದಿದೆ, ಕುತ್ತಿಗೆಯಲ್ಲಿ ಬಿಗಿದ ಗುರುತುಗಳಿವೆ. ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಆಕೆಯ ಕುಟುಂಬ ಹೇಳಿದೆ. ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದಲಿತ ಸಮುದಾಯಕ್ಕೆ ಸೇರಿರುವ ಸಂತ್ರಸ್ತೆ ಐದು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಉತ್ತರ ಭಾರತದ ಎರಡು ದೊಡ್ಡ ರಾಜ್ಯಗಳನ್ನು ಪ್ರತಿನಿಧಿಸಿದ್ದರು ಎಂದು ಮೂಲ ಶಿಕ್ಷಣ ಕ್ರೀಡಾ ಅಧಿಕಾರಿ ಅರವಿಂದ ಅಹ್ಲಾವತ್ ಹೇಳಿದರು.

” ನನ್ನ ಮಗಳು ಕುಟುಂಬಕ್ಕೆ ಸಹಾಯ ಮಾಡಲು ಬಯಸಿದ್ದಳು. ಆದ್ದರಿಂದ, ಆಕೆಯ ಕ್ರೀಡಾ ವೃತ್ತಿಜೀವನವನ್ನು ಮುಂದುವರಿಸುವ ಬದಲು, ಅವಳು ಇತರರಿಗೆ ತರಬೇತಿ ನೀಡಿದಳು. ಅವಳು ವಿಶ್ವವಿದ್ಯಾನಿಲಯದಲ್ಲಿ ದೈಹಿಕ ಶಿಕ್ಷಣ ಕಲಿಕೆ ಮುಂದುವರಿಸಿ ಮತ್ತು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಸಾಂಕ್ರಾಮಿಕ ರೋಗದಿಂದಾಗಿ ಅವಳು ಏಪ್ರಿಲ್‌ನಲ್ಲಿ ತನ್ನ ಉದ್ಯೋಗವನ್ನು ಕಳೆದುಕೊಂಡಳು ಎಂದು ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುವ ಆಕೆಯ ಅಪ್ಪ ಹೇಳಿದರು. “ಶುಕ್ರವಾರ ಆಕೆ ಉದ್ಯೋಗ ಸಂದರ್ಶನಕ್ಕಾಗಿ ಖಾಸಗಿ ಶಾಲೆಗೆ ಹೋಗಿದ್ದಳು ಎಂದಿದ್ದಾರೆ ಅವರು.

ಅವಳು ಸುಮಾರು ಹೊತ್ತಾಗಿಯ ಹಿಂತಿರುಗದಿದ್ದಾಗ ನಮಗೆ ಆತಂಕವಾಯಿತು. “ನಾವು ಅವಳನ್ನು ಹುಡುಕತೊಡಗಿದೆವು. ಮಧ್ಯಾಹ್ನ 3 ರ ಸುಮಾರಿಗೆ ಅವಳು ಪ್ರಜ್ಞಾಹೀನಳಾಗಿದ್ದಾಳೆ ಬಿದ್ದಿದ್ದಾಳೆ ಎಂದು ನೆರೆಹೊರೆಯವರು ಹೇಳಿದಾಗ ಆ ಸ್ಥಳಕ್ಕೆ ಹೋದೆವು . ಸಿಮೆಂಟ್ ಸ್ಲೀಪರ್‌ಗಳ ನಡುವೆ ರೈಲ್ವೇ ಮಾರ್ಗದ ಹತ್ತಿರ ಬಿದ್ದಿರುವುದು ನನ್ನ ತಂಗಿ ಎಂದು ಗೊತ್ತಾಯಿತು ಎಂದುಕೆಯ ಸಹೋದರಿ ಹೇಳಿದಳು. ಈ ಪ್ರದೇಶವು ನಿರ್ಜನ ಪ್ರದೇಶದಲ್ಲಿದೆ. ಬಳಸಿದ ಸಿರಿಂಜ್‌ಗಳು ಮತ್ತು ಖಾಲಿ ಪ್ಲಾಸ್ಟಿಕ್ ಚೀಲಗಳು ದೇಹದ ಬಳಿ ಕಂಡುಬಂದಿವೆ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.

ಅಪರಾಧ ನಡೆದ ಪ್ರದೇಶವು ತಮ್ಮ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಇದು ಸರ್ಕಾರಿ ರೈಲ್ವೆ ಪೋಲಿಸ್ (ಜಿಆರ್‌ಪಿ) ನೋಡಬೇಕಾದ ವಿಷಯ ಎಂದು ಪೊಲೀಸರು ಹೇಳಿದರು. ಹತ್ತಿರದ ಜಿಆರ್‌ಪಿ ನಿಲ್ದಾಣವು ನಜಿಬಾಬಾದ್‌ನಲ್ಲಿ ಸುಮಾರು 40 ಕಿಮೀ ದೂರದಲ್ಲಿದೆ, ಸ್ಥಳೀಯ ಬಿಎಸ್‌ಪಿ ನಾಯಕರು ಮಧ್ಯಪ್ರವೇಶಿಸಿದ ನಂತರ ಎಫ್‌ಐಆರ್ ದಾಖಲಿಸಲಾಯಿತು. ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ಬಿಜ್ನೋರ್ ಎಸ್ಪಿ ಧರಮವೀರ್ ಸಿಂಗ್ ಶವಪರೀಕ್ಷೆ ವರದಿಯಲ್ಲಿ ಕೊಲೆ ಹೊರತುಪಡಿಸಿ ಯಾವುದೇ ಅಪರಾಧ ಕೃತ್ಯವೆಲಸಗಿದ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದರು. “ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಕತ್ತು ಹಿಸುಕಿರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಆಕೆಯ ಮೇಲೆ ಬೇರೆ ಯಾವುದೇ ಅಪರಾಧ ನಡೆದಿಲ್ಲ ಎಂದು ವರದಿಯು ಹೇಳುತ್ತದೆ. ಪ್ರಕರಣದ ತನಿಖೆಗಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಮರಣೋತ್ತರ ಪರೀಕ್ಷೆಯ ವರದಿಯು “ದಾರಿ ತಪ್ಪಿಸುತ್ತಿದೆ” ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ. “ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆಕೆಯ ದೇಹದ ಸ್ಥಿತಿ, ಕಳಚಿದ ಬಟ್ಟೆ ಮತ್ತು ಗಾಯಗಳು ಇದಕ್ಕೆ ಸಾಕ್ಷಿಯಾಗಿದೆ. ಅವಳು ಕಂಡುಬಂದ ಸ್ಥಿತಿಯ ಚಿತ್ರಗಳನ್ನು ನೋಡಬಹುದು. ಆಕೆಯ ಮೇಲೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ದಾಳಿ ಮಾಡಿರಬೇಕು. ಅವಳು ಒಬ್ಬ ಕ್ರೀಡಾಪಟುವಾಗಿದ್ದಳು. ಅವಳನ್ನು ಮೀರಿಸುವುದು ಸುಲಭವಲ್ಲ. ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.

ಅತ್ಯಾಚಾರ ಆರೋಪಗಳನ್ನು ಕೈಬಿಡಲಾಗುತ್ತದೆಯೋ ಇಲ್ಲವೋ ಎಂಬುದು ತನಿಖೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ನಜಿಬಾಬಾದ್‌ನ ಜಿಆರ್‌ಪಿ ನಿಲ್ದಾಣದ ಎಸ್‌ಎಚ್‌ಒ ಸರ್ವೇಜ್ ಖಾನ್ ಹೇಳಿದ್ದಾರೆ. “ನಾನು ಇನ್ನೂ ಮರಣೋತ್ತರ ಪರೀಕ್ಷೆಯ ವರದಿಯನ್ನು ನೋಡಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಸುವುದಾಗಿ ಶಿವಸೇನೆ ಘೋಷಣೆ; ಮೈತ್ರಿಗೆ ಮನಸಿದ್ದರೂ ಮಾರ್ಗ ಯಾವುದು?

(24-year-old national-level kho kho player from UP was found dead on railway tracks her face badly bruised neck had strangulation marks)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್