Coronavirus cases in India: ಭಾರತದಲ್ಲಿ 28,591 ಹೊಸ ಕೊವಿಡ್ ಪ್ರಕರಣಗಳು ಪತ್ತೆ, 338 ಸಾವು
Covid-19: ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿಯಾಗಿ ಕೊವಿಡ್ ಸಂಬಂಧಿತ ಸಾವುಗಳ ಸಂದರ್ಭದಲ್ಲಿ ಅಧಿಕೃತ ದಾಖಲೆ ನೀಡುವ ಮಾರ್ಗಸೂಚಿಗಳನ್ನು ಹೊರತಂದಿವೆ.
ದೆಹಲಿ: ಭಾರತದಲ್ಲಿ ಶನಿವಾರ 28,591 ಹೊಸ ಕೊವಿಡ್ (Covid-19) ಪ್ರಕರಣ ಮತ್ತು 338 ಸಾವುಗಳು ವರದಿಯಾಗಿವೆ. ಈ ಪೈಕಿ ಕೇರಳದಲ್ಲಿ20,487 ಪ್ರಕರಣಗಳನ್ನು ವರದಿ ಮಾಡಿದರೆ, ಮಹಾರಾಷ್ಟ್ರವು 3,075 ಪ್ರಕರಣಗಳನ್ನು ವರದಿ ಮಾಡಿದೆ. ಸಕ್ರಿಯ ಪ್ರಕರಣಗಳು 3.84 ಲಕ್ಷಕ್ಕೆ ಇಳಿದಿವೆ. ಕೇರಳವು ಶನಿವಾರ 20,487 ಹೊಸ ಕೊವಿಡ್ -19 ಪ್ರಕರಣಗಳು, 22,155 ಚೇತರಿಕೆ ಮತ್ತು 181 ಸಾವುಗಳನ್ನು ವರದಿ ಮಾಡಿದೆ. ಇಲ್ಲಿ ಸಾವಿನ ಸಂಖ್ಯೆ 22,484 ಕ್ಕೆ ತಲುಪಿದೆ ಮತ್ತು 2,31,792 ಸಕ್ರಿಯ ಪ್ರಕರಣಗಳಿವೆ. ಧನಾತ್ಮಕ ದರವು ಶೇ15.19ನಲ್ಲಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,84,921 ಆಗಿದ್ದು ಒಟ್ಟು 3,24,09,345 ಮಂದಿ ಚೇತರಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರ 752 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಆಗಿದ್ದು ಒಟ್ಟು ಪ್ರಕರಣ ಸಂಖ್ಯೆ 15,56,157 ಕ್ಕೆ ತಲುಪಿದೆ. 14 ಜನರು ಸೋಂಕಿಗೆ ಬಲಿಯಾಗಿದ್ದು ರಾಜ್ಯದ ಕೊರೊನಾವೈರಸ್ ಸಾವಿನ ಸಂಖ್ಯೆ 18,567 ಕ್ಕೆ ತಲುಪಿದೆ. ರಾಜ್ಯದಲ್ಲಿ ಈಗ 8,203 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 754 ಸೇರಿದಂತೆ ಇದುವರೆಗೆ 15,29,387 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕರೋನವೈರಸ್ ರೋಗಿಗಳಲ್ಲಿ ಚೇತರಿಕೆಯ ಪ್ರಮಾಣವು 98.28 ಶೇಕಡಾವನ್ನು ಹೊಂದಿದೆ ಎಂದು ಆರೋಗ್ಯ ಬುಲೆಟಿನ್ ಹೇಳಿದೆ.
India reports 28,591 new #COVID19 cases, 34,848 recoveries, and 338 deaths in last 24 hours, as per Health Ministry.
Total cases: 3,32,36,921 Active cases: 3,84,921 Total recoveries: 3,24,09,345 Death toll: 4,42,655
Total vaccination: 73,82,07,378 (72,86,883 in last 24 hours) pic.twitter.com/6JoT6wJkPC
— ANI (@ANI) September 12, 2021
ಏತನ್ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿಯಾಗಿ ಕೊವಿಡ್ ಸಂಬಂಧಿತ ಸಾವುಗಳ ಸಂದರ್ಭದಲ್ಲಿ ಅಧಿಕೃತ ದಾಖಲೆ ನೀಡುವ ಮಾರ್ಗಸೂಚಿಗಳನ್ನು ಹೊರತಂದಿವೆ. ಈ ಮಾರ್ಗಸೂಚಿಗಳ ಪ್ರಕಾರ ಕೊವಿಡ್ ಸಾವುಗಳಿಗೆ ಪರಿಹಾರ ಕೋರುವ ಪ್ರಕರಣದಲ್ಲಿ ಕೇಂದ್ರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರಕರಣಗಳು, ಆರ್‌ಟಿ-ಪಿಸಿಆರ್ / ಕ್ಷಿಪ್ರ ಆಂಟಿಜೆನ್ ಪರೀಕ್ಷೆ ಅಥವಾ ಆಸ್ಪತ್ರೆಯಲ್ಲಿ ವೈದ್ಯಕೀಯವಾಗಿ ನಿರ್ಧರಿಸಲಾದ ಪ್ರಕರಣಗಳು ವೈದ್ಯರಿಂದ ಒಳರೋಗಿ ಸೌಲಭ್ಯವಿದ್ದು ಅಲ್ಲಿ ಒಬ್ಬರನ್ನು ದಾಖಲಿಸಿದರೆ, ಕೊವಿಡ್ ಪ್ರಕರಣಗಳು ಎಂದು ಗುರುತಿಸಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಯಾವುದೇ ಹೊಸ ಸಾವುಗಳಿಲ್ಲ ಉತ್ತರ ಪ್ರದೇಶದಲ್ಲಿ ಶನಿವಾರ ಯಾವುದೇ ಹೊಸ ಕೊವಿಡ್ -19 ಸಾವು ವರದಿಯಾಗಿಲ್ಲ. ಇಲ್ಲಿ ಸಾವಿನ ಸಂಖ್ಯೆ 22,874 ಕ್ಕೆ ತಲುಪಿದೆ. 14 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 17,09,526 ಕ್ಕೆ ಏರಿಕೆ
ಹೊಸ ಪ್ರಕರಣಗಳಲ್ಲಿ, ಆಗ್ರಾದಿಂದ ಮೂರು, ಗೌತಮ್ ಬುಧನಗರ ಮತ್ತು ಬಿಜ್ನೋರ್ ನಿಂದ ತಲಾ ಎರಡು ಮತ್ತು ಪ್ರಯಾಗರಾಜ್, ಬದೌನ್, ವಾರಣಾಸಿ, ಅಂಬೇಡ್ಕರ್ ನಗರ, ಗಾಜಿಯಾಬಾದ್, ಹಾಪುರ್ ಮತ್ತು ಮುಜಾಫರ್ ನಗರಗಳಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 19 ಕೊವಿಡ್ -19 ರೋಗಿಗಳು ರಾಜ್ಯದಲ್ಲಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, ಚೇತರಿಸಿಕೊಂಡವರ ಸಂಖ್ಯೆ 16,86,468 ಕ್ಕೆ ತಲುಪಿದೆ. ಚೇತರಿಕೆಯ ಪ್ರಮಾಣವು ಶೇಕಡಾ 98.7 ಆಗಿದ್ದು, ರಾಜ್ಯದಲ್ಲಿ 184 ಸಕ್ರಿಯ ಕೊವಿಡ್ -19 ಪ್ರಕರಣಗಳಿವೆ ಎಂದು ಪ್ರಕಟಣೆ ತಿಳಿಸಿದೆ.
COVID19 | Over 72.21 crore doses of vaccines have been provided to States/UTs. More than 5.16 crore balance doses are still available with States/UTs with over 57 lakh doses in the pipeline: Government of India pic.twitter.com/mhcP0fXKA5
— ANI (@ANI) September 12, 2021
72.21 ಕೋಟಿ ಡೋಸ್‌ಗಳಷ್ಟು ಲಸಿಕೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ. 5.16 ಕೋಟಿಗಿಂತ ಹೆಚ್ಚು ಬ್ಯಾಲೆನ್ಸ್ ಡೋಸ್‌ಗಳು ಇನ್ನೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಲಭ್ಯವಿದ್ದು, ಪೈಪ್‌ಲೈನ್‌ನಲ್ಲಿ 57 ಲಕ್ಷದಷ್ಟು ಡೋಸ್‌ಗಳಿವೆ ಎಂದು ಭಾರತ ಸರ್ಕಾರ ಹೇಳಿದೆ.
ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟ ಮಹಿಳೆ ಹೆಸರಲ್ಲಿ ಕೊವಿಡ್ ಎರಡನೇ ಲಸಿಕೆ ಸಕ್ಸಸ್! ಮೆಸೆಜ್ ನೋಡಿದ ಮನೆಯವರಿಗೆ ಶಾಕ್
(India reports 28,591 new cases of coronavirus Out of this Kerala reported 20,487 cases)