6 ತಿಂಗಳ ಹಿಂದೆ ಮೃತಪಟ್ಟ ಮಹಿಳೆ ಹೆಸರಲ್ಲಿ ಕೊವಿಡ್ ಎರಡನೇ ಲಸಿಕೆ ಸಕ್ಸಸ್! ಮೆಸೆಜ್ ನೋಡಿದ ಮನೆಯವರಿಗೆ ಶಾಕ್

ಮೃತ ಮಹಿಳೆ ಮಾಲಾ ಸಾವನ್ನಪ್ಪಿರುವ ಮರಣ ಪ್ರಮಾಣ ಪತ್ರ ಕುಟುಂಬಸ್ಥರ ಬಳಿ ಇದೆ. ಆದರೆ ಮಾಲಾ ಅವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು

6 ತಿಂಗಳ ಹಿಂದೆ ಮೃತಪಟ್ಟ ಮಹಿಳೆ ಹೆಸರಲ್ಲಿ ಕೊವಿಡ್ ಎರಡನೇ ಲಸಿಕೆ ಸಕ್ಸಸ್! ಮೆಸೆಜ್ ನೋಡಿದ ಮನೆಯವರಿಗೆ ಶಾಕ್
ಕೊರೊನಾ ಎರಡನೇ ಲಸಿಕೆ ಪಡೆದಿರುವ ಮೆಸೇಜ್, ಮೃತ ಮಹಿಳೆ ಮಾಲಾ ಪ್ರಕಾಶ ಪಾವಟೆ

ಬಾಗಲಕೋಟೆ: 6 ತಿಂಗಳ ಹಿಂದೆ ಸಾವನ್ನಪ್ಪಿದ ಮಹಿಳೆ ಕೊರೊನಾ ಎರಡನೇ ಲಸಿಕೆಯನ್ನು (Corona 2nd Dose Vaccine) ಪಡೆದಿದ್ದಾರೆ ಅಂತ ಇದೀಗ ಮೆಸೇಜ್ ಬಂದಿದ್ದು, ಮೆಸೇಜ್ ನೋಡಿದ ಕುಟುಂಬಸ್ಥರಿಗೆ ಶಾಕ್ ಆಗಿದೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಮಾಲಾ ಪ್ರಕಾಶ ಪಾವಟೆ ಎಂಬುವರು ಎರಡನೇ ಡೋಸ್ ಪಡೆದಿದ್ದಾರೆ ಅಂತ ಸಕ್ಷಸ್ ಫುಲ್ ಮೆಸೇಜ್ ಮನೆಯವರ ಮೊಬೈಲ್​ಗೆ ಬಂದಿದೆ. ಆದರೆ ಆರು ತಿಂಗಳ ಹಿಂದೆ ಮಾಲಾ ಮರಣ ಹೊಂದಿದ್ದಾರೆ. ಹೀಗಿದ್ದೂ ಮೃತ ಮಹಿಳೆ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಮೆಸೇಜ್ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಮೃತ ಮಹಿಳೆ ಮಾಲಾ ಸಾವನ್ನಪ್ಪಿರುವ ಮರಣ ಪ್ರಮಾಣ ಪತ್ರ ಕುಟುಂಬಸ್ಥರ ಬಳಿ ಇದೆ. ಆದರೆ ಮಾಲಾ ಅವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಸೆಪ್ಟೆಂಬರ್ 8ಕ್ಕೆ ಮನೆಯವರ ಮೊಬೈಲ್​ಗೆ ಮೆಸೇಜ್ ಬಂದಿದೆ. ಇದರ ಜೊತೆಗೆ ಲಸಿಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಶುರುವಾಯ್ತು ಟೆನ್ಷನ್
ಡೆಲ್ಟಾ ರೂಪಾಂತರಿಗಳಿಂದ ರಾಜ್ಯದಲ್ಲಿ ಟೆನ್ಷನ್ ಶುರುವಾಗಿದ್ದು, ಡೆಲ್ಟಾ ರೂಪಾಂತರಿಯಿಂದಲೇ ಮೂರನೇ ಅಲೆ ಶುರುವಾಗುತ್ತಾ ಎಂಬ ಭೀತಿ ಹೆಚ್ಚಾಗುತ್ತಿದೆ. ಡೆಲ್ಟಾ ವೈರಸ್ನಷ್ಟೇ ರೂಪಾಂತರಿಗಳು ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಡೆಲ್ಟಾ ರೂಪಾಂತರಿಗಳಿಂದ 60 ವರ್ಷ ಮೇಲ್ಪಟವರಿಗೆ ಬ್ಲಡ್ ಕಾಟ್, ಉಸಿರಾಟದ ಸಮಸ್ಯೆ ಸೇರಿದಂತೆ ಶಾಸ್ವಕೋಶದ ಮೇಲೆ ಗಂಭೀರ ಪ್ರಭಾವ ಬೀರುವ ಆತಂಕ ಶುರುವಾಗಿದೆ.

ಇದನ್ನೂ ಓದಿ

ಕೊರೊನಾ ಟೆಸ್ಟ್ ಫ್ರೀ ಅಂತಾ ವಾರಕ್ಕೆ 2 ತಿಂಗಳಿಗೆ 15 ಬಾರಿ ಟೆಸ್ಟ್, ಸುಖಾಸುಮ್ಮನೆ ಟೆಸ್ಟ್ ಮಾಡಿಸುತ್ತಿರುವವರ ಪಟ್ಟಿ ತಯಾರಿ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಯಿಲೆಗಳು; ಕೊರೊನಾ, ನಿಫಾ, ಡೆಲ್ಟಾ ಮಧ್ಯೆ ಡೆಂಗ್ಯೂ ಕೇಸ್ ಹೆಚ್ಚಳ

(A mobile message has comes that a woman who died 6 months ago has received a second vaccine in Bagalkot)

Read Full Article

Click on your DTH Provider to Add TV9 Kannada