ಉತ್ತರಪ್ರದೇಶ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಸುವುದಾಗಿ ಶಿವಸೇನೆ ಘೋಷಣೆ; ಮೈತ್ರಿಗೆ ಮನಸಿದ್ದರೂ ಮಾರ್ಗ ಯಾವುದು?
UP Assembly elections 2022: ಉತ್ತರಪ್ರದೇಶದಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ (ಎಸ್ಪಿ), ಕಾಂಗ್ರೆಸ್ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರ ಶುರು ಮಾಡಿವೆ. ಒಂದೊಂದು ಪಕ್ಷಗಳೂ ಭಿನ್ನ-ವಿಭಿನ್ನ ಅಜೆಂಡಾಗಳೊಂದಿಗೆ ಚುನಾವಣಾ ಕಣಕ್ಕೆ ಇಳಿದಿವೆ.
ಲಖನೌ: ಮುಂದಿನ ವರ್ಷ (2022) ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Election 2022) ಎಲ್ಲ 403 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕುವುದಾಗಿ ಶಿವಸೇನೆ ಇಂದು ಘೋಷಿಸಿದೆ. ಹಾಗೇ, ಶಿವಸೇನೆ (Shiv Sena) ಉತ್ತರಪ್ರದೇಶದಲ್ಲಿ ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷದೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಮೈತ್ರಿಯ ಸಾಧ್ಯತೆಯ ಬಗ್ಗೆಯೂ ಸಣ್ಣ ಸುಳಿವು ನೀಡಿದೆ. ಆದರೆ ಬಿಜೆಪಿಯೊಂದಿಗೆ ಅದು ಸಾಧ್ಯವಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ.
2022ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಹಲವು ವಿಷಯಗಳನ್ನು ಚರ್ಚಿಸಲು ಲಖನೌದಲ್ಲಿ ಶಿವಸೇನೆ ನಾಯಕರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಆಳವಾಗಿ ಚರ್ಚೆ, ಸಾಧಕ-ಬಾಧಕಗಳ ಪರಿಶೀಲನೆ ಮಾಡಿದ ಬಳಿಕ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಸುವ ನಿರ್ಧಾರವನ್ನು ಶಿವಸೇನೆ ತೆಗೆದುಕೊಂಡಿದೆ. ಹಾಗೇ, ಸದ್ಯ ಇರುವ ಶಿಕ್ಷಣ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ, ಕೊವಿಡ್ 19 ಸಾಂಕ್ರಾಮಿಕ, ರೈತರ ಪ್ರತಿಭಟನೆಗಳ ಬಗ್ಗೆಯೂ ಈ ಸಭೆಯಲ್ಲಿ ಶಿವಸೇನೆ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಮಾತನಾಡಿದ ಶಿವಸೇನೆ ಉತ್ತರಪ್ರದೇಶ ಮುಖ್ಯಸ್ಥ ಠಾಕೂರ್ ಅನಿಲ್ ಸಿಂಗ್, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಕಾಡಿನ ರಾಜ್ಯ ಚಾಲ್ತಿಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ (ಎಸ್ಪಿ), ಕಾಂಗ್ರೆಸ್ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರ ಶುರು ಮಾಡಿವೆ. ಒಂದೊಂದು ಪಕ್ಷಗಳೂ ಭಿನ್ನ-ವಿಭಿನ್ನ ಅಜೆಂಡಾಗಳೊಂದಿಗೆ ಚುನಾವಣಾ ಕಣಕ್ಕೆ ಇಳಿದಿವೆ. ಮೊನ್ನೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಉತ್ತರಪ್ರದೇಶದಲ್ಲಿ ಪ್ರಚಾರಕ್ಕೆ ಹೋಗಿದ್ದರು. ಇದರ ಬೆನ್ನಲ್ಲೇ ಶಿವಸೇನೆ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಶಿವಸೇನೆ ಮೈತ್ರಿಗೇನೋ ಸಿದ್ಧವಿರುವ ಸುಳಿವು ನೀಡಿದ್ದರೂ, ಯಾವ ಪಕ್ಷದೊಟ್ಟಿಗೆ ಮಾಡಿಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿಯೊಂದಿಗೆ ಈಗಾಗಲೇ ಮುರಿದುಕೊಂಡಿದೆ…ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿಯಿದ್ದರೂ ಅಲ್ಲಿ ಬೂದಿಮುಚ್ಚಿದ ಕೆಂಡದಂತೆ ಸಣ್ಣದಾಗಿ ಹೊಗೆಯಾಡುತ್ತಲೇ ಇದೆ.
Shiv Sena to contest for all 403 seats in Uttar Pradesh Assembly elections in 2022. The party has not allied with any other political party as of now but has signaled the possibility of an alliance. pic.twitter.com/qqdZz6FQXH
— ANI (@ANI) September 11, 2021
Indian Railways: ಭಾರತೀಯ ರೈಲ್ವೆಯಿಂದ ಬೋಗಿಗಳನ್ನು ಖಾಸಗಿಗೆ ಭೋಗ್ಯಕ್ಕೆ, ಮಾರಾಟಕ್ಕೆ ಸಿದ್ಧತೆ