NEET Exam 2021: ದೇಶದಾದ್ಯಂತ ಇಂದು ಮಧ್ಯಾಹ್ನದಿಂದ ನೀಟ್ ಪರೀಕ್ಷೆ ಶುರು

TV9 Digital Desk

| Edited By: Ayesha Banu

Updated on: Sep 12, 2021 | 8:36 AM

ನೀಟ್ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಳಿಗೆ ಮೊದಲ‌ ಡೋಸ್ ಲಸಿಕೆ ಕಡ್ಡಾಯ. ಕೊರೊನಾ ವ್ಯಾಕ್ಸಿನ್ ರಿಪೋರ್ಟ್, ಮೆಸೇಜ್ ಪರಿಶೀಲನೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತೆ. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ವಿರುವುದಿಲ್ಲ.

NEET Exam 2021: ದೇಶದಾದ್ಯಂತ ಇಂದು ಮಧ್ಯಾಹ್ನದಿಂದ ನೀಟ್ ಪರೀಕ್ಷೆ ಶುರು
ಸಾಂಕೇತಿಕ ಚಿತ್ರ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ಗಳ ಕಾಲೇಜು ಪ್ರವೇಶಕ್ಕೆ ಇರುವ 2020-21ನೇ ಸಾಲಿನ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ದೇಶದಾದ್ಯಂತ ಇಂದು ನಡೆಯಲಿದೆ. ನೀಟ್ ಪ್ರವೇಶ ಪರೀಕ್ಷೆ ಇಂದು ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು ದೇಶಾದ್ಯಂತ 201 ಪ್ರಮುಖ ನಗರಗಳಲ್ಲಿ ಹಾಗೂ ಕರ್ನಾಟಕದ ಒಟ್ಟು 9 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿದೆ.

ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮೈಸೂರು, ಮಂಗಳೂರು, ಉಡುಪಿಯಲ್ಲಿ ಪರೀಕ್ಷೆ ನಡೆಯಲಿದೆ. ನೀಟ್ಗೆ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಒಟ್ಟು 180 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 4 ಅಂಕಗಳಿರಲಿವೆ. ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ ಪ್ರಶ್ನೆಯ ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಕಡಿತವಾಗುತ್ತೆ. 3 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತೆ. ಒಟ್ಟು 13 ಭಾಷೆಗಳಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಷಯಗಳಿಗೆ ತಲಾ 45 ಪ್ರಶ್ನೆಗಳಿರಲಿವೆ.

ನೀಟ್ ಪರೀಕ್ಷೆಗೆ ಮಾರ್ಗಸೂಚಿ ಇನ್ನು ನೀಟ್ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಳಿಗೆ ಮೊದಲ‌ ಡೋಸ್ ಲಸಿಕೆ ಕಡ್ಡಾಯ. ಕೊರೊನಾ ವ್ಯಾಕ್ಸಿನ್ ರಿಪೋರ್ಟ್, ಮೆಸೇಜ್ ಪರಿಶೀಲನೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತೆ. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ವಿರುವುದಿಲ್ಲ. ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಸೋಂಕಿನ ಲಕ್ಷಣವಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಬೆಂಚ್ನಲ್ಲಿ ಒಬ್ಬ ಅಭ್ಯರ್ಥಿ ಕೂರಲು ಅವಕಾಶ ನೀಡಲಾಗಿದ್ದು ಜಿಗ್ ಜಾಗ್ ಮಾದರಿಯಲ್ಲಿ ಕುಳಿತುಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ದಾಖಲೆ ಪರಿಶೀಲನೆ ನಡೆಯುತ್ತೆ.

ಬಳಿಕ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರಿಶೀಲನೆ, ಅರ್ಧ ಗಂಟೆ ಮುಂಚೆ ಪರೀಕ್ಷಾ ಕೊಠಡಿಯಲ್ಲಿರಬೇಕು. ವಿದ್ಯಾರ್ಥಿಗಳು ಪರೀಕ್ಷೆಗೆ ಪೆನ್ ಕೊಂಡೊಯ್ಯುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಕೊಡುವ ಪೆನ್ ಬಳಸಬೇಕು. ವಾಚ್, ಫುಲ್ ಸ್ಲೀವ್ಸ್ ಡ್ರೆಸ್, ಶೂ, ಬ್ಯಾಗ್, ಪರ್ಸ್ ನಿಷೇಧ. ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ಕೊಂಡೊಯ್ಯುವಂತಿಲ್ಲ. ಪಾಸ್ಪೋರ್ಟ್ ಸೈಜ್ ಫೋಟೋ ತಂದಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ ಕಡ್ಡಾಯವಿರಬೇಕು.

ಇದನ್ನೂ ಓದಿ: ಭಾನುವಾರ ವೈದ್ಯಕೀಯ ನೀಟ್ ಪರೀಕ್ಷೆ: ಅಭ್ಯರ್ಥಿಗಳಿಗೆ ಮೊದಲ‌ ಡೋಸ್ ಲಸಿಕೆ ಕಡ್ಡಾಯ, ಬೆಳಗ್ಗೆ 11 ರಿಂದ ದಾಖಲೆಗಳ ಪರಿಶೀಲನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada