AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ಭಾರತೀಯ ರೈಲ್ವೆಯಿಂದ ಬೋಗಿಗಳನ್ನು ಖಾಸಗಿಗೆ ಭೋಗ್ಯಕ್ಕೆ, ಮಾರಾಟಕ್ಕೆ ಸಿದ್ಧತೆ

ಭಾರತೀಯ ರೈಲ್ವೆಯಿಂದ ಬೋಗಿಗಳನ್ನು ಖಾಸಗಿಯವರಿಗೆ ಭೋಗ್ಯಕ್ಕೆ ನೀಡುವ ಅಥವಾ ಮಾರಾಟ ಮಾಡುವುದಕ್ಕೆ ಸಿದ್ಧತೆ ನಡೆದಿದೆ.

Indian Railways: ಭಾರತೀಯ ರೈಲ್ವೆಯಿಂದ ಬೋಗಿಗಳನ್ನು ಖಾಸಗಿಗೆ ಭೋಗ್ಯಕ್ಕೆ, ಮಾರಾಟಕ್ಕೆ ಸಿದ್ಧತೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Sep 11, 2021 | 10:35 PM

Share

ಭಾರತೀಯ ರೈಲ್ವೆಯಿಂದ ರೈಲು ಬೋಗಿಗಳನ್ನು ಖಾಸಗಿಯವರಿಗೆ ಭೋಗ್ಯಕ್ಕೆ ನೀಡಲು ಮತ್ತು ಮಾರಾಟ ಮಾಡಲು ನಿರ್ಧರಿಸಿದ್ದು, ಯೋಜನೆ ಸಿದ್ಧಪಡಿಸಿದೆ. ಸಂಸ್ಕೃತಿ- ಧಾರ್ಮಿಕ ಮತ್ತು ಪ್ರವಾಸಿ ಸರ್ಕ್ಯೂಟ್ ರೈಲುಗಳ ಥೀಮ್ ಆಧಾರದಲ್ಲಿ ಈ ತೀರ್ಮಾನ ಕೈಗೊಳ್ಳಲಿದೆ. ಸೆಪ್ಟೆಂಬರ್ 11ರ ಶನಿವಾರದಂದು ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಕಾರ್ಯಕಾರಿ ನಿರ್ದೇಶಕ (ED) ಮಟ್ಟದ ಸಮಿತಿಯನ್ನು ರೈಲ್ವೆ ಸಚಿವಾಲಯದಿಂದ ರಚಿಸಲಾಗಿದ್ದು, ಈ ಯೋಜನೆಗಾಗಿ ನಿಯಮ ಹಾಗೂ ನಿಬಂಧನೆಗಳನ್ನು ರೂಪಿಸಲಾಗಿದೆ.

ಇದರೊಂದಿಗೆ ವಿವಿಧ ಸೇವೆಗಳನ್ನು ಸಮನ್ವಯಗೊಳಿಸಲು, ಮಾರ್ಕೆಟಿಂಗ್, ಆತಿಥ್ಯ, ಗ್ರಾಹಕರನ್ನು ತಲುಪುವುದು, ಪ್ರವಾಸಿ ಸರ್ಕ್ಯೂಟ್​ಗಳನ್ನು ಗುರುತಿಸುವುದು ಮತ್ತು ಇತರ ಎಲ್ಲ ಪ್ರವಾಸಿ ಚಟುವಟಿಕೆಗಳ ವ್ಯಾಪ್ತಿಯನ್ನು ನಿಯಂತ್ರಣದಲ್ಲಿ ತೆಗೆದುಕೊಳ್ಳಲು ರೈಲ್ವೆ ಅಧಿಕಾರಿಗಳು ಕೇಳಿದ್ದಾರೆ.

ಭಾರತೀಯ ರೈಲ್ವೆ ಪ್ರಕಾರ ಪ್ರಸ್ತಾವಿತ ಮಾಡೆಲ್​ನ ವೈಶಿಷ್ಟ್ಯಗಳು ಹೀಗಿವೆ: – ಆಸಕ್ತಿಕರ ಪಾರ್ಟಿಗಳಿಗೆ ಇಷ್ಟಪಡುವ ರೀತಿಯಲ್ಲಿ ಕಾನ್ಫಿಗರೇಷನ್​ನಂತೆ ರೈಲು ಬೋಗಿಯನ್ನು ಭೋಗ್ಯಕ್ಕೆ ನೀಡಲಾಗುವುದು. ಆಸಕ್ತರು ಇಡಿಯಾಗಿ ಬೋಗಿಯನ್ನು ಖರೀದಿಸಬಹುದು. – ಬೋಗಿಗಳ ಸಣ್ಣಪುಟ್ಟ ಮರು ಅಭಿವೃದ್ಧಿ, ಜತೆಗೆ ರೈಲುಗಳ ಟ್ರೇಡಿಂಗ್ ಅಥವಾ ಥರ್ಡ್ ಪಾರ್ಟಿ ಜಾಹೀರಾತಿಗೆ ಬೋಗಿಯೊಳಗೆ ಅವಕಾಶ ನೀಡಲಾಗುವುದು. – ಕನಿಷ್ಠ 5 ವರ್ಷಗಳ ಅವಧಿಗೆ ಭೋಗ್ಯಕ್ಕೆ ಹಾಕಿಕೊಳ್ಳಬೇಕು ಮತ್ತು ಆ ಭೋಗ್ಯದ ಅವಧಿ ಬೋಗಿಯ ಕೋಡಲ್ ಜೀವಿತಾವಧಿ (ಸಾಮಾನ್ಯವಾಗಿ 25 ವರ್ಷಗಳಿರುತ್ತದೆ) ತನಕ ವಿಸ್ತರಣೆ ಆಗುತ್ತದೆ. – ಯೋಜನೆ ಬಗ್ಗೆ ಆಸಕ್ತಿ ಇರುವ ಖಾಸಗಿ ಪಾರ್ಟಿಗಳು ಬಿಜಿನೆಸ್ ಮಾಡೆಲ್, ಮಾರ್ಗಗಳು, ಸಮಯ, ದರ, ಇತ್ಯಾದಿಗಳನ್ನು ಅಭಿವೃದ್ಧಿಪಡಿಸಬೇಕು. – ಭಾರತೀಯ ರೈಲ್ವೆಯಿಂದ ಸಾಗಾಣಿಕೆ ಶುಲ್ಕಗಳು, ನಾಮಿನಲ್ ಸ್ಥಿರತೆ ಶುಲ್ಕಗಳು ಮತ್ತು ಗುತ್ತಿಗೆ ಶುಲ್ಕಗಳನ್ನು ವಿಧಿಸುತ್ತದೆ. ನಿರ್ವಹಣೆಗೆ ಯಾವುದೇ ಸಾಗಾಟ ಅನುಮತಿಸುವುದಿಲ್ಲ. – ಆಸಕ್ತ ಪಾರ್ಟಿಗಳಿಗೆ ಸರಳ ನೋಂದಣಿ ಪ್ರಕ್ರಿಯೆ ಇರಲಿದೆ. ಅರ್ಹತೆ ಆಧಾರದ ಮೇಲೆ ಇದು ಲಭ್ಯ ಇರಲಿದೆ ಎಂದು ರೈಲ್ವೆ ಸಚಿವಾಲಯದಿಂದ ಹೇಳಲಾಗಿದೆ.

ಇದನ್ನೂ ಓದಿ: Consumer Dispute: ರೈಲು ತಡವಾಗಿದ್ದರಿಂದ ರೂ. 30 ಸಾವಿರ ನಷ್ಟ ಪರಿಹಾರ ಕಟ್ಟಿಕೊಡುವಂತೆ ರೈಲ್ವೇಸ್​ಗೆ ಸುಪ್ರೀಂ ನಿರ್ದೇಶನ

(Indian Railways Planning To Lease Or Sell Rail Coaches To Private Parties Here Is The Details)

Published On - 10:34 pm, Sat, 11 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ