Apple iPhone: ಆಪಲ್ ಐಫೋನ್ 12 ಫ್ಲಿಪ್‌ಕಾರ್ಟ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟ
ಆಪಲ್ ಐಫೋನ್ 12ರ ಬೆಲೆಯಲ್ಲಿ ಫ್ಲಿಪ್ಕಾರ್ಟ್ನಿಂದ ಭಾರೀ ಬೆಲೆ ಕಡಿತ ಮಾಡಲಾಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.
ಆಪಲ್ (Apple iPhone) ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳನ್ನು ವಾರ್ಷಿಕ ಸಮಾರಂಭದಲ್ಲಿ ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಐಫೋನ್ 13 ಸರಣಿಯು ಹೆಚ್ಚು ಶಕ್ತಿಯುತವಾದ ಪ್ರೊಸೆಸರ್, ಬಹುನಿರೀಕ್ಷಿತ ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳು ಮತ್ತು ಇತರ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಆದರೆ ಈಗಿನ ಪೀಳಿಗೆಯ ಐಫೋನ್‌ಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ. ಏಕೆಂದರೆ ಇವುಗಳನ್ನು ಭಾರೀ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್ಕಾರ್ಟ್ನಿಂದ ಆಪಲ್ ಐಫೋನ್ 12 ಸರಣಿ ಫೋನ್‌ಗಳ ಮೇಲೆ ಸಾಕಷ್ಟು ರಿಯಾಯಿತಿಗಳನ್ನು ನೀಡುತ್ತಿದೆ. ಆಪಲ್ ಐಫೋನ್ 12 ಮಿನಿ 64 ಜಿಬಿ ಮತ್ತು 128 ಜಿಬಿ ವೇರಿಯಂಟ್ಗಳು ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಕ್ರಮವಾಗಿ 59,999 ರೂ. ಮತ್ತು 64,999 ರೂಪಾಯಿಗೆ ಲಭ್ಯವಿದೆ. ಎರಡು ವೇರಿಯಂಟ್ಗಳ ಮೂಲ ಬೆಲೆ ಕ್ರಮವಾಗಿ 69,900 ರೂ. ಮತ್ತು 74,900 ಇದೆ. 256GB ವೇರಿಯಂಟ್ 84,900 ರೂಪಾಯಿ ಇದ್ದದ್ದು 74,999 ರೂಪಾಯಿಗೆ ಲಭ್ಯವಿದೆ.
ಆಪಲ್ ಐಫೋನ್ 12ರ 64 ಜಿಬಿ ಸಂಗ್ರಹದ್ದು 79,900 ರೂಪಾಯಿ ಬದಲಿಗೆ 66,999 ರೂಪಾಯಿಗೆ ಲಭ್ಯವಿದೆ. 128 ಜಿಬಿ ವೇರಿಯಂಟ್ದು 84,900 ರೂಪಾಯಿ ಬದಲಿಗೆ 71,999 ರೂಪಾಯಿಗೆ ಲಭ್ಯವಿದೆ. ಐಫೋನ್ 12ರ 256 GB ವೇರಿಯಂಟ್ 94,900 ರೂಪಾಯಿ ಬದಲಿಗೆ 81,999 ರೂಪಾಯಿಗೆ ಲಭ್ಯವಿದೆ. ಆಪಲ್ ಐಫೋನ್ 12ಪ್ರೊ 128 ಜಿಬಿ ಸ್ಟೋರೇಜ್‌ನೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ರೂ. 1,15,900ಕ್ಕೆ ಲಭ್ಯವಿದೆ. 256 ಜಿಬಿ ವೇರಿಯಂಟ್ 1,25,900 ರೂಪಾಯಿಗೆ ಸಿಗುತ್ತದೆ. 512 GB ವೇರಿಯಂಟ್ 1,45,900 ರೂಪಾಯಿಗೆ ರಿಟೇಲ್ ಮಾರಾಟ ಮಾಡುತ್ತಿದೆ. ಐಫೋನ್ 12 ಪ್ರೊ ಮ್ಯಾಕ್ಸ್ನ ಮೂರು ವೇರಿಯಂಟ್ಗಳು – 128GB, 256GB ಮತ್ತು 512GB ಸಂಗ್ರಹದೊಂದಿಗೆ – ಕ್ರಮವಾಗಿ 1,25,900, 1,35,900 ಮತ್ತು 1,55,900ಕ್ಕೆ ಲಭ್ಯವಿದೆ.
ಆಪಲ್ ಐಫೋನ್ 12 ಸರಣಿಯು ಎ14 ಬಯೋನಿಕ್ ಚಿಪ್ ಒಳಗೊಂಡಿದೆ. ಇದರ ಜೊತೆಗೆ ಮುಂದಿನ ಪೀಳಿಗೆಯ ನ್ಯೂರಲ್ ಇಂಜಿನ್ ಕೂಡ ಇದೆ. ಐಫೋನ್ 12 ಮಿನಿ ಮತ್ತು ಐಫೋನ್ 12 ಹಿಂಭಾಗದಲ್ಲಿ ಎರಡು ಕ್ಯಾಮೆರಾ ಮಾಡ್ಯೂಲ್ ಇದ್ದು, 12 ಎಂಪಿ ಅಲ್ಟ್ರಾ ವೈಡ್ ಮತ್ತು ವೈಡ್ ಕ್ಯಾಮೆರಾಗಳಿವೆ. ಐಫೋನ್ 12ಪ್ರೊ ಮತ್ತು ಐಫೋನ್ 12ಪ್ರೊ ಮ್ಯಾಕ್ಸ್ ಹೆಚ್ಚುವರಿ 12 ಎಂಪಿ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿವೆ. ಎಲ್ಲ ನಾಲ್ಕು ಫೋನ್ಗಳು 5G ಸಾಮರ್ಥ್ಯಗಳೊಂದಿಗೆ ಬರುತ್ತವೆ ಮತ್ತು ಐಒಎಸ್ 14ನಲ್ಲಿ ಕಾರ್ಯ ನಿರ್ವಹಿಸುತ್ತವೆ.
ಇದನ್ನೂ ಓದಿ: Apple iPhone: ಆಪಲ್ನಿಂದ ಸೆಪ್ಟೆಂಬರ್ನಲ್ಲಿ ಐಫೋನ್ 13, ವಾಚ್ 7 ಸಿರೀಸ್, M1X ಮ್ಯಾಕ್ಬುಕ್ ಪ್ರೊ ಬಿಡುಗಡೆ ನಿರೀಕ್ಷೆ
(Apple iPhone 12 Huge Price Cut By Flipkart Here Is The Details)