AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Economic Recovery: ಕೊವಿಡ್​ 19ನಿಂದ ಬಿದ್ದ ಪೆಟ್ಟಿಗಿಂತ ಹೆಚ್ಚು ವೇಗವಾಗಿ ಪುಟಿದೆದ್ದ ಆರ್ಥಿಕತೆ ಎಂದ ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಆರ್ಥಿಕತೆ ಮೇಲೆ ಕೊವಿಡ್- 19 ಪರಿಣಾಮವು ಬಿದ್ದಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಅದರಿಂದ ಚೇತರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ. “ಕೊವಿಡ್-19ನಿಂದ ಭಾರತವೂ ಸೇರಿದಂತೆ ಇಡೀ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಆದರೆ ಕೊರೊನಾದಿಂದ ನಿಂತು ಹೋಗಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಆರ್ಥಿಕತೆಯು ಚೇತರಿಕೆಯನ್ನು ಕಂಡಿದೆ,” ಎಂದು ಮೋದಿ ಹೇಳಿದ್ದಾರೆ. ವಿಶ್ವದ ಪ್ರಬಲ ಆರ್ಥಿಕತೆಗಳು ತಮ್ಮನ್ನು ತಾವು ಉಳಿಸಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾಗ ನಾವು ಸುಧಾರಣೆಗಳನ್ನು ಮಾಡಿದ್ದೇವೆ. ಜಾಗತಿಕ ಪೂರೈಕೆ ಜಾಲವು ಅಸ್ತವ್ಯಸ್ತವಾದಾಗ ಭಾರತದ […]

Economic Recovery: ಕೊವಿಡ್​ 19ನಿಂದ ಬಿದ್ದ ಪೆಟ್ಟಿಗಿಂತ ಹೆಚ್ಚು ವೇಗವಾಗಿ ಪುಟಿದೆದ್ದ ಆರ್ಥಿಕತೆ ಎಂದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 11, 2021 | 5:55 PM

Share

ಭಾರತೀಯ ಆರ್ಥಿಕತೆ ಮೇಲೆ ಕೊವಿಡ್- 19 ಪರಿಣಾಮವು ಬಿದ್ದಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಅದರಿಂದ ಚೇತರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ. “ಕೊವಿಡ್-19ನಿಂದ ಭಾರತವೂ ಸೇರಿದಂತೆ ಇಡೀ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಆದರೆ ಕೊರೊನಾದಿಂದ ನಿಂತು ಹೋಗಿದ್ದಕ್ಕಿಂತ ಹೆಚ್ಚು ಪ್ರಬಲವಾಗಿ ಆರ್ಥಿಕತೆಯು ಚೇತರಿಕೆಯನ್ನು ಕಂಡಿದೆ,” ಎಂದು ಮೋದಿ ಹೇಳಿದ್ದಾರೆ. ವಿಶ್ವದ ಪ್ರಬಲ ಆರ್ಥಿಕತೆಗಳು ತಮ್ಮನ್ನು ತಾವು ಉಳಿಸಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾಗ ನಾವು ಸುಧಾರಣೆಗಳನ್ನು ಮಾಡಿದ್ದೇವೆ. ಜಾಗತಿಕ ಪೂರೈಕೆ ಜಾಲವು ಅಸ್ತವ್ಯಸ್ತವಾದಾಗ ಭಾರತದ ಪರವಾಗಿ ಹೊಸ ಅವಕಾಶಗಳು ಸೃಷ್ಟಿಯಾಗುವ ಸಲುವಾಗಿ ನಾವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಪರಿಚಯಿಸಿದೆವು ಎಂದು ಸೇರಿಸಿದ್ದಾರೆ.

ಈ ಯೋಜನೆಯನ್ನು ಈಗ ಟೆಕ್ಸ್​ಟೈಲ್ ವಲಯಕ್ಕೂ ವಿಸ್ತರಿಸಿದ್ದೇವೆ. ಸೂರತ್​ನಂಥ ನಗರವು ಇದರಿಂದ ಗರಿಷ್ಠ ಮಟ್ಟದ ಅನುಕೂಲ ಪಡೆಯಬಹುದು ಎಂದಿದ್ದಾರೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮಂಗಳವಾರದಂದು ಬಹಿರಂಗ ಮಾಡಿರುವ ಡೇಟಾದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕಕ್ಕೆ ಭಾರತದ ಆರ್ಥಿಕ ಬೆಳವಣಿಗೆ ಶೇ 20.1ರಷ್ಟು ದಾಖಲಿಸಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಗೆ ಕಡಿಮೆ ಮೂಲಾಂಶ ಇದ್ದದ್ದರ ಪರಿಣಾಮ ಈ ಬೆಳವಣಿಗೆ ಆಗಿದೆ. ಕೊವಿಡ್​-19 ಎರಡನೇ ಅಲೆಯ ಹೊರತಾಗಿಯೂ ಇಂಥದ್ದೊಂದು ಬೆಳವಣಿಗೆಯು ಆಗಿದೆ.

2020- 21ನೇ ಸಾಲಿನ ಏಪ್ರಿಲ್​​ನಿಂದ ಜೂನ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 24.4ರಷ್ಟು ಕುಗ್ಗಿತ್ತು. ಟೆಕ್ಸ್​ಟೈಲ್ ಮತ್ತು ಆಟೋಮೊಬೈಲ್ ಸೇರಿದಂತೆ 10 ಪ್ರಮುಖ ವಲಯಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್​ಐ) ಅನ್ನು ಕೇಂದ್ರದಿಂದ ಪರಿಚಯಿಸಲಾಗಿದೆ. ಕೊರೊನಾ ಬಿಕ್ಕಟ್ಟಿನ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುವುದಕ್ಕೆ ಇದರಿಂದ ಸಹಾಯ ಆಗುತ್ತದೆ ಎಂದು ಇಂಥ ನಿರ್ಧಾರ ಮಾಡಲಾಗಿದೆ. “21ನೇ ಶತಮಾನದಲ್ಲಿ ನಮ್ಮನ್ನು ನಾವು ಜಾಗತಿಕ ಆರ್ಥಿಕ ನಾಯಕತ್ವದ ಸ್ಥಾನದಲ್ಲಿ ನೋಡುತ್ತೇವೆ, ದೊಡ್ಡದಾಗಿ ಏನನ್ನಾದರೂ ಸಾಧಿಸುವುದಕ್ಕೆ ಭಾರತದಲ್ಲಿ ಅವಕಾಶಗಳಿಗೇನೂ ಕೊರತೆ ಇಲ್ಲ,” ಎಂದು ಮೋದಿ ಹೇಳಿದ್ದಾರೆ.

ಅಹ್ಮದಾಬಾದ್​ನ ಸರ್ದಾರ್​ಧಾಮ್ ಭವನ್ ಅನ್ನು ಶನಿವಾರ ವರ್ಚುವಲ್ ಆಗಿ ಉದ್ಘಾಟಿಸಿದರು. ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುವಂತಹ ಸಮುಚ್ಚಯ ಇದು. ಈ ಭವನದಲ್ಲಿ ಅತ್ಯಾಧುನಿಕ ಸೌಕರ್ಯಗಳಿವೆ. ಆರ್ಥಿಕ ಸ್ಥಿತಿಗತಿಯನ್ನು ಹೊರತುಪಡಿಸಿ 2000 ಹೆಣ್ಣುಮಕ್ಕಳಿಗೆ ಆಗಬಹುದಾದಷ್ಟು ದೊಡ್ಡ ಹಾಸ್ಟೆಲ್ ವ್ಯವಸ್ಥೆ ಇದೆ. ಈ ಕಟ್ಟಡದ ನಿರ್ಮಾಣವು 200 ಕೋಟಿ ರೂಪಾಯಿ ವೆಚ್ಚದಲ್ಲಿ ಆಗಿದೆ. ಪಾಟೀದಾರ್ ಸಮುದಾಯದ 800 ಬಾಲಕರು ಮತ್ತು ಬಾಲಕಿಯರಿಗೆ ಸಮಾನ ಸಂಖ್ಯೆಯಲ್ಲಿ ಆಗುವಂಥ ಹಾಸ್ಟೆಲ್ ವ್ಯವಸ್ಥೆ ಇದೆ. ಒಟ್ಟು 13 ಅಂತಸ್ತಿನದಾಗಿದೆ.

ಇದನ್ನೂ ಓದಿ: GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

GDP: ಭಾರತದ ಮೊದಲನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ

(Indian Economy Recovered Strongly Than It Was Hit By Covid19 Said PM Narendra Modi)

Published On - 5:54 pm, Sat, 11 September 21

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು