Engineers Day ದೆಹಲಿಯಲ್ಲಿ ಕೇಜ್ರಿವಾಲ್ ಕಾರ್ಯಗಳನ್ನು ಪ್ರದರ್ಶಿಸಿ ‘ಐಐಟಿ ಎಂಜಿನಿಯರ್ ಸಿಎಂ’ನ್ನು ಹೊಗಳಿದ ಎಎಪಿ

TV9 Digital Desk

| Edited By: Rashmi Kallakatta

Updated on: Sep 15, 2021 | 2:05 PM

ಎಂಜಿನಿಯರ್ಸ್ ದಿನದಂದು, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಮತ್ತು ಅತ್ಯಂತ ಸಮರ್ಪಣೆ, ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ಹಲವಾರು ಹೊಸ ಆವಿಷ್ಕಾರಗಳನ್ನು ಮಾಡುತ್ತಿರುವ ಎಲ್ಲ ಎಂಜಿನಿಯರ್‌ಗಳಿಗೆ ನಾನು ಶುಭ ಹಾರೈಸುತ್ತೇನೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Engineers Day ದೆಹಲಿಯಲ್ಲಿ ಕೇಜ್ರಿವಾಲ್ ಕಾರ್ಯಗಳನ್ನು ಪ್ರದರ್ಶಿಸಿ 'ಐಐಟಿ ಎಂಜಿನಿಯರ್ ಸಿಎಂ'ನ್ನು ಹೊಗಳಿದ ಎಎಪಿ
ಅರವಿಂದ ಕೇಜ್ರಿವಾಲ್


ದೆಹಲಿ: ಎಂಜಿನಿಯರ್ಸ್ ಡೇ 2021ರ (Engineers Day 2021) ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ (AAP) ಬುಧವಾರ ದೆಹಲಿಯ ಮೂಲಸೌಕರ್ಯದ ಬಗ್ಗೆ ಹೆಗ್ಗಳಿಕೆ ಹೊಂದಿದ್ದು, ರಾಷ್ಟ್ರ ರಾಜಧಾನಿಯಾದ್ಯಂತವಿರುವ ಕಟ್ಟಡಗಳ ಕೆಲವು ಆಯ್ದ ಫೋಟೋಗಳನ್ನು ಶೇರ್ ಮಾಡಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಚಿತ್ರಗಳನ್ನು ಹಂಚಿಕೊಂಡಿರುವ ಪಕ್ಷವು ತನ್ನ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಶ್ಲಾಘಿಸಿತು. ಕೇಜ್ರಿವಾಲ್ ಅತ್ಯುತ್ತಮ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾದ ಪ್ರತಿಷ್ಠಿತ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT) ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ದೆಹಲಿಯ ಕಟ್ಟಡಗಳ ಫೋಟೋಗಳನ್ನು ಟ್ವೀಟ್ ಮಾಡಿದ ಎಎಪಿ “ನೀವು ಐಐಟಿ ಎಂಜಿನಿಯರ್ ಅನ್ನು ನಿಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದಾಗ ಹೀಗಾಗುತ್ತದೆ.”ಎಂದು ಬರೆದಿದೆ.


ಎಎಪಿ  ಹಂಚಿಕೊಂಡಿರುವ ಫೋಟೋಗಳಲ್ಲಿ ದೆಹಲಿ ಸರ್ಕಾರದ 450 ಹಾಸಿಗೆಗಳ ಬುರಾರಿ ಆಸ್ಪತ್ರೆ ಮತ್ತು ದೆಹಲಿಯ ಖಿಚ್ರಿಪುರದ ದೆಹಲಿ ಸರ್ಕಾರಿ ಶಾಲೆ ಸೇರಿವೆ. ಇದಕ್ಕೆ ‘ಸ್ಕೂಲ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿ ಸಂದಿದೆ.

ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ (ಸರ್ ಎಂವಿ) ಗೌರವಾರ್ಥವಾಗಿ ಭಾರತವು ಪ್ರತಿವರ್ಷ ಸೆಪ್ಟೆಂಬರ್ 15 ಅನ್ನು ಎಂಜಿನಿಯರ್ಸ್ ದಿನವನ್ನಾಗಿ ಆಚರಿಸುತ್ತದೆ.ದೇಶದ ಅತ್ಯುತ್ತಮ ಎಂಜಿನಿಯರ್‌ಗಳಲ್ಲಿ ಒಬ್ಬರಾಗಿದ್ದರು ಸರ್ ಎಂವಿ. ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ (IEI) ಪ್ರಕಾರ, ಆಧುನಿಕ ಭಾರತವನ್ನು ನಿರ್ಮಿಸಿದ ಅದ್ಭುತಗಳನ್ನು ಸೃಷ್ಟಿಸಿದ ಅವರನ್ನು ರಾಷ್ಟ್ರ ನಿರ್ಮಾಣಕಾರರಲ್ಲಿ ಅಗ್ರಗಣ್ಯ ಎಂದು ಪರಿಗಣಿಸಲಾಗಿದೆ.

ಇಂದು ರಾಷ್ಟ್ರನಾಯಕನ 160 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ, ದೇಶಾದ್ಯಂತ ಹಲವಾರು ಪ್ರಖ್ಯಾತ ವ್ಯಕ್ತಿಗಳು ಎಂಜಿನಿಯರಿಂಗ್ ಐಕಾನ್‌ಗೆ ಗೌರವ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ್ “ಹಲವಾರು ಆವಿಷ್ಕಾರಗಳನ್ನು ಮಾಡುತ್ತಿರುವ ರಾಷ್ಟ್ರದ ಎಲ್ಲಾ ಎಂಜಿನಿಯರ್‌ಗಳಿಗೆ ಶುಭ ಹಾರೈಸಿದರು.


“ಎಂಜಿನಿಯರ್ಸ್ ದಿನದಂದು,  ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಮತ್ತು ಅತ್ಯಂತ ಸಮರ್ಪಣೆ, ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ಹಲವಾರು ಹೊಸ ಆವಿಷ್ಕಾರಗಳನ್ನು ಮಾಡುತ್ತಿರುವ ಎಲ್ಲ ಎಂಜಿನಿಯರ್‌ಗಳಿಗೆ ನಾನು ಶುಭ ಹಾರೈಸುತ್ತೇನೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಎನ್ಐಆರ್​​ಎಫ್ ಶ್ರೇಯಾಂಕಗಳ ಪ್ರಕಾj 6ನೇ ಕ್ರಮಾಂಕದಲ್ಲಿರುವ ಐಐಟಿ ಖರಗ್‌ಪುರದ ಲ್ಲಿ ದೆಹಲಿ ಮುಖ್ಯಮಂತ್ರಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದಿದ್ದಾರೆ. ಕೇಜ್ರಿವಾಲ್ 1985 ರಲ್ಲಿ IIT-JEE ಪರೀಕ್ಷೆ ಬರೆದಿದ್ದ ಕೇಜ್ರಿವಾಲ್ ಆಲ್ ಇಂಡಿಯಾ ರ್ಯಾಂಕ್​​ನಲ್ಲಿ 563ನೇ ರ್ಯಾಂಕ್ ಗಳಿಸಿದ್ದರು.

ಎಂಜಿನಿಯರ್ಸ್ ದಿನದಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮತ್ತು ಭಾರತದ ಎಲ್ಲಾ ಆಧುನಿಕ ಕಾಲದ ಎಂಜಿನಿಯರ್‌ಗಳಿಗೆ ಗೌರವ ಸಲ್ಲಿಸಿದರು.


“ಕಠಿಣ ಪರಿಶ್ರಮವಿರುವ ಎಲ್ಲ ಎಂಜಿನಿಯರ್‌ಗಳಿಗೆ ಎಂಜಿನಿಯರ್ಸ್ ದಿನದ ಶುಭಾಶಯಗಳು” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. “ನಮ್ಮ ಗ್ರಹವನ್ನು ಉತ್ತಮ ಮತ್ತು ತಾಂತ್ರಿಕವಾಗಿ ಮುಂದುವರಿಸುವಲ್ಲಿ ಅವರ ಪ್ರಮುಖ ಪಾತ್ರಕ್ಕಾಗಿ ಧನ್ಯವಾದ ಹೇಳಲು ಯಾವುದೇ ಪದಗಳು ಸಾಕಾಗುವುದಿಲ್ಲ. ನಾನು ಶ್ರೀ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಸಾಧನೆಗಳನ್ನು ಸ್ಮರಿಸುತ್ತೇನೆ ಎಂದಿದ್ದಾರೆ ಮೋದಿ.

ಇದನ್ನೂ ಓದಿ: Engineers Day 2021: ಇಂಜಿನಿಯರ್​ಗಳ ದಿನಾಚರಣೆ ಹಿಂದಿನ ಮಹತ್ವವೇನು?

(On the occasion of Engineers Day 2021 AAP praises IIT engineer CM Arvind Kejriwal’s Works)
|

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada