Engineer’s Day 2021: ಇಂಜಿನಿಯರ್​ಗಳ ದಿನಾಚರಣೆ ಹಿಂದಿನ ಮಹತ್ವವೇನು?

TV9 Digital Desk

| Edited By: Skanda

Updated on: Sep 15, 2021 | 8:32 AM

Sir M Visvesvaraya Birth Anniversary: ವಿಶ್ವೇಶ್ವರಯ್ಯ ಅವರ ಸಾರ್ವಜನಿಕ ಸೇವೆಯನ್ನು ನೋಡಿ Knight Commander of the British Indian Empire ಎಂಬ ಬಿರುದನ್ನು ನೀಡಲಾಯಿತು. 1955ರಲ್ಲಿ ಸರ್​ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೆ ಪಾತ್ರರಾದರು. 

Engineer's Day 2021: ಇಂಜಿನಿಯರ್​ಗಳ ದಿನಾಚರಣೆ ಹಿಂದಿನ ಮಹತ್ವವೇನು?
ಸರ್​​ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ

ಇಂದು ಇಂಜಿನಯರ್​ಗಳ ದಿನಾಚರಣೆ. ಸರ್​ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಪ್ರಯುಕ್ತ 1968ರಿಂದ ಪ್ರತಿ ವರ್ಷ ಸೆಪ್ಟೆಂಬರ್​ 15ನೇ ತಾರೀಖನ್ನು ಭಾರತದಲ್ಲಿ ಇಂಜಿನಯರ್​ಗಳ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು, ಆ ಮೂಲಕ ವಿಶ್ವೇಶ್ವರಯ್ಯ ಅವರ ಜೀವನವನ್ನು, ಅವರು ಮಾಡಿದ ಸಾಧನೆಯನ್ನು ಸ್ಮರಿಸಿಕೊಳ್ಳುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಇಂಜಿನಿಯರ್​ಗಳಿಗೂ ಶುಭ ಕೋರುತ್ತಾ ಸರ್​ ಎಂ.ವಿಶ್ವೇಶ್ವರಯ್ಯ ಅವರ ಬದುಕಿನ ಕುರಿತಾಗಿ ಅವರ 160ನೇ ಜನ್ಮ ದಿನಾಚರಣೆ ಹೊತ್ತಿನಲ್ಲಿ ಒಂದಷ್ಟು ಸಂಕ್ಷಿಪ್ತ ಮಾಹಿತಿಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಸರ್​ ಎಂ ವಿಶ್ವೇಶರಯ್ಯ ಅವರನ್ನು ಇಂದಿಗೂ ಸ್ಮರಿಸಿಕೊಳ್ಳಲು ಕಾರಣ ಅವರು ಮಾಡಿದ ಕೆಲಸಗಳು. ಜಲಾಶಯ ನಿರ್ಮಾಣ, ತೂಗು ಸೇತುವೆ ನಿರ್ಮಾಣದಿಂದ ಹಿಡಿದು ಸಮಾಜಕ್ಕೆ ನೆರವಾಗುವಂತಹ ಅದೆಷ್ಟೋ ಉತ್ತಮ ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ. ನೀರಿನಿಂದ ವಿದ್ಯುತ್​ ಪಡೆಯುವುದು ಇಂದು ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಜಲ ವಿದ್ಯುತ್​ ಶಕ್ತಿ ಯೋಜನೆಯ ಹಿಂದೆಯೂ ಇವರ ಪಾತ್ರವಿದೆ ಎನ್ನುವುದು ಗಮನಾರ್ಹ. ಕರ್ನಾಟಕದಲ್ಲಿ ಕೃಷ್ಣ ರಾಜ ಸಾಗರ ಜಲಾಶಯ (ಕೆಆರ್​ಎಸ್​ ಡ್ಯಾಂ) ನಿರ್ಮಿಸುವುದರಿಂದ ಹಿಡಿದು ಹೈದರಾಬಾದ್​ನಲ್ಲಿ ಪ್ರಾವಾಹ ತಡೆಗಟ್ಟುವಿಕೆ ಯೋಜನೆ ರೂಪಿಸುವ ತನಕ ಸರ್​ ಎಂ.ವಿಶ್ವೇಶ್ವರಯ್ಯ ಹೆಸರು ಮಾಡಿದ್ದಾರೆ.

ಸೆಪ್ಟೆಂಬರ್​ 15, 1861ರಲ್ಲಿ ಕರ್ನಾಟಕದ ಮುದ್ದೇನಹಳ್ಳಿ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಸರ್​ ಎಂ.ವಿಶ್ವೇಶ್ವರಯ್ಯ ಅವರನ್ನು ಇನ್​ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯು​ ಭಾರತದ ಆರ್ಥಿಕ ಯೋಜನೆಯ ರೂವಾರಿ ಎಂಬರ್ಥದಲ್ಲಿ ಕರೆದಿದೆ. ಆ ಕಾಲದಲ್ಲಿಯೇ ಪುಣೆಯ ಇಂಜಿನಿಯರಿಂಗ್​ ಕಾಲೇಜಿನಿಂದ ಪದವಿ ಪಡೆದ ವಿಶ್ವೇಶ್ವರಯ್ಯ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಾದ ನೀರಾವರಿ ಹಾಗೂ ಪ್ರವಾಹ ತಡೆ ಯೋಜನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಪುಣೆಯ ಖಡಕ್​ವಾಸ್ಲ ಜಲಾಶಯದಲ್ಲಿ 1903ರಲ್ಲಿ ನಿರ್ಮಿಸಿದ ಅಟೋಮ್ಯಾಟಿಕ್​ ಬ್ಯಾರಿಯರ್​ ವಾಟರ್​ ಫ್ಲಡ್​ಗೇಟ್​​ಗಳ ಹಿಂದೆ ವಿಶ್ವೇಶ್ವರಯ್ಯ ಇದ್ದರು. ನಂತರ 1917ರಲ್ಲಿ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜ್​ ಸ್ಥಾಪನೆಗೂ ಅವರೇ ಮುಖ್ಯ ಕಾರಣರಾಗಿದ್ದು ಅದು ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್​ ಆಫ್​ ಇಂಜಿನಿಯರಿಂಗ್​ ಅಂತಲೂ ಹೆಸರು ಪಡೆಯಿತು.

ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಯೋಜನೆಗೆ ಸರ್​ ಎಂ.ವಿಶ್ವೇಶ್ವರಯ್ಯ ಮುಖ್ಯಸ್ಥರಾಗಿದ್ದರು. 1934ರಲ್ಲಿ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ ಸಮಿತಿಯಲ್ಲೂ ಅವರ ಪಾತ್ರವಿತ್ತು. ವಿಶ್ವೇಶ್ವರಯ್ಯ ಅವರ ಸಾರ್ವಜನಿಕ ಸೇವೆಯನ್ನು ನೋಡಿ Knight Commander of the British Indian Empire ಎಂಬ ಬಿರುದನ್ನು ನೀಡಲಾಯಿತು. 1955ರಲ್ಲಿ ಸರ್​ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೆ ಪಾತ್ರರಾದರು.

ಇದನ್ನೂ ಓದಿ: ಸರ್ ಎಂ ವಿಶ್ವೇಶ್ವರಯ್ಯ ನಿರ್ಮಿಸಿದ್ದ ಧಾರವಾಡದ ಕೆಲಗೇರಿ ಕೆರೆಗೆ ಹೈಟೆಕ್ ಟಚ್; ಕೆರೆ ದಂಡೆಯಲ್ಲೇ ಓಪನ್ ಜಿಮ್! 

ರಾಜ್ಯಕ್ಕೆ ಮತ್ತೊಬ್ಬ ವಿಶ್ವೇಶ್ವರಯ್ಯನವರ ಅವಶ್ಯಕತೆ ಇದೆ; ರಾಜ್ಯದ ಮುಖ್ಯಮಂತ್ರಿಯಾಗಿ ಇದನ್ನು ಹೇಳುತ್ತಿದ್ದೇನೆ: ಸಿಎಂ ಬೊಮ್ಮಾಯಿ

(Engineers Day 2021 Sir M Visvesvaraya Birth Anniversary special)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada