ರಾಜ್ಯಕ್ಕೆ ಮತ್ತೊಬ್ಬ ವಿಶ್ವೇಶ್ವರಯ್ಯನವರ ಅವಶ್ಯಕತೆ ಇದೆ; ರಾಜ್ಯದ ಮುಖ್ಯಮಂತ್ರಿಯಾಗಿ ಇದನ್ನು ಹೇಳುತ್ತಿದ್ದೇನೆ: ಸಿಎಂ ಬೊಮ್ಮಾಯಿ
ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ವಿಶ್ವೇಶ್ವರಯ್ಯನವರ ಅವಶ್ಯಕತೆ ಇದೆ. ವಿಶ್ವೇಶ್ವರಯ್ಯ ಮತ್ತೊಮ್ಮೆ ಹುಟ್ಟಿ ಬರಲಿ. ನಮ್ಮಲೇ ಇರುವ ವಿಶ್ವೇಶ್ವರಯ್ಯನವರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಸಿದ್ಧ ಇದೆ ಎಂದು ಸಿಎಂ ಬಸವಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ರಾಜ್ಯಕ್ಕೆ ಮತ್ತೊಬ್ಬ ವಿಶ್ವೇಶ್ವರಯ್ಯನವರ ಅವಶ್ಯಕತೆ ಇದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಇದನ್ನು ಹೇಳುತ್ತಿದ್ದೇನೆ. ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ವಿಶ್ವೇಶ್ವರಯ್ಯನವರ ಅವಶ್ಯಕತೆ ಇದೆ. ವಿಶ್ವೇಶ್ವರಯ್ಯ ಮತ್ತೊಮ್ಮೆ ಹುಟ್ಟಿ ಬರಲಿ. ನಮ್ಮಲೇ ಇರುವ ವಿಶ್ವೇಶ್ವರಯ್ಯನವರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಸಿದ್ಧ ಇದೆ ಎಂದು ಹೇಳಿದರು.
ಇಂದು ವಿಧಾನಸೌಧದಲ್ಲಿ ನಡೆದ ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ರಾಜ್ಯಪಾಲರಾದ ಟಿ.ಸಿ. ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು. ಎಫ್ಕೆಸಿಸಿಐ ನಿಂದ ನೀಡಲ್ಪಡುವ ಪ್ರಶಸ್ತಿಯನ್ನು ಎಂ.ಎಸ್. ರಾಮಯ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಚೇರ್ ಮೆನ್ ಡಾ. ಎಂ.ಆರ್. ಜಯರಾಂ ಅವರಿಗೆ ನೀಡಲಾಯಿತು.
ಜನಪ್ರತಿನಿಧಿಗಳ ಇತ್ತೀಚಿನ ವರ್ತನೆಗೆ ಉಪ ರಾಷ್ಟ್ರಪತಿ ಬೇಸರ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಭಾಷಣ ಆರಂಭ ಮಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಳಿಕ ಇಂಗ್ಲೀಷ್ನಲ್ಲಿ ಭಾಷಣ ಮುಂದುವರಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳ ಇತ್ತೀಚಿನ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ರಾಜ್ಯಸಭೆಯಲ್ಲಿ ನಡೆದ ಘಟನೆಯನ್ನು ಉಲ್ಲೇಖ ಮಾಡಿ ಬೇಸರ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ಜನರಿಗೆ ಮಾದರಿ ಆಗಿರುತ್ತಾರೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ವರ್ತಿಸಬೇಕಾಗುತ್ತದೆ. ಏಕೆ ಬೇಸರದಲ್ಲಿದ್ದೀರಿ ಎಂದು ಕೆಲವರು ನನಗೆ ಕೇಳಿದ್ದರು. ರಾಜ್ಯಸಭೆಯಲ್ಲಿ ನಡೆದದ್ದು ಬ್ಯಾಡ್, ಹೀಗಾಗಿ ಸ್ಯಾಡ್ ಎಂದೆ. ಜನಪ್ರತಿನಿಧಿಗಳು ಜನರಿಗೆ ರೋಲ್‌ಮಾಡೆಲ್ ಆಗಿರಬೇಕು. ಜನ ಟಿವಿಗಳಲ್ಲಿ ಜನಪ್ರತಿನಿಧಿಗಳನ್ನು ಗಮನಿಸುತ್ತಿರುತ್ತಾರೆ. ಜನಪ್ರತಿನಿಧಿಗಳ ನಡವಳಿಕೆ ಕೆಟ್ಟದಾಗಿದ್ದಾಗ ಜನ ಅಸಹ್ಯ, ಬೇಸರ ಪಟ್ಟುಕೊಳ್ಳುತ್ತಾರೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಬಳಿಕ ಬೆಂಗಳೂರಿನ ವಾತಾವರಣದ ಬಗ್ಗೆ ಮಾತನಾಡಿದ ಅವರು, ಕರ್ನಾಟಕದ, ಬೆಂಗಳೂರಿನ ವಾತಾವರಣ ಅತ್ಯದ್ಭುತ. ಎಲ್ಲೆಡೆ ಹಸಿರು ತುಂಬಿದೆ. ವಾತಾವರಣ ತಂಪಿದೆ. ಹಸಿರು ಬದುಕಿಗೆ ಖುಷಿ ನೀಡುತ್ತದೆ. ನಾನು ಪ್ರತೀ ಕ್ಷಣ ಕೂಡ ಬೆಂಗಳೂರಿನಲ್ಲಿ ಖುಷಿಯಿಂದ ಕಳೆದಿದ್ದೇನೆ. ಕರ್ನಾಟಕದ ಊಟ, ಜನ, ಮಣ್ಣು ಎಲ್ಲವೂ ನಮಗೆ ಪ್ರಿಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ರಸ್ತೆ ದುರಸ್ತಿಗೆ ಆದ್ಯತೆ ನೀಡಲು ಬಸವರಾಜ ಬೊಮ್ಮಾಯಿ ಸೂಚನೆ
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಗಣ್ಯರಿಗೆ ಬುಧವಾರ ಪ್ರಶಸ್ತಿ ಪ್ರದಾನ
Published On - 1:30 pm, Wed, 18 August 21