ಮಗನ ಸಾವಿನ ಆಘಾತದಲ್ಲಿದ್ದ ತಾಯಿ ವಿಜಯನಗರದಲ್ಲಿ ನಡೆದ ಅಪಘಾತದಲ್ಲಿ ಕೊನೆಯುಸಿರು
ತನ್ನ ಸ್ನೇಹಿತರ ಜೊತೆ ಜಗಳವಾಡಿಕೊಂಡಿದ್ದ ಮಗ ಸಾವಿನ ದಾರಿ ಹುಡುಕುತ್ತಾನೆ. ಆಗ ಆತ ಮನೆಯಲ್ಲಿ ನೇಣು ಬಿಗಿದುಕೊಳ್ಳುತ್ತಾನೆ. ವಿಚಾರ ತಿಳಿದ ತಕ್ಷಣ ಮಗನನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಬೆಂಗಳೂರು: ಮಗನ ಸಾವಿನ ಸುದ್ದಿ ಕೇಳಿ ಆಘಾತದಲ್ಲಿದ್ದ ತಾಯಿ ರಸ್ತೆ ಅಪಘಾತದಲ್ಲಿ (Accident) ಕೊನೆಯುಸಿರೆಳೆದಿರುವ ದಾರುಣ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಸ್ನೇಹಿತರ ಜತೆ ಜಗಳವಾಡಿಕೊಂಡ ಮಗ ಆತ್ಮಹತ್ಯೆಗೆ ಯತ್ನಿಸಿದ್ದ. ಮನೆಯಲ್ಲಿ ನೇಣು ಬಿಗಿದುಕೊಂಡು ಅಸ್ವಸ್ಥಗೊಂಡಿದ್ದ ಮಗನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗ ಮೃತಪಟ್ಟಿದ್ದಾನೆ. ಈ ಸುದ್ದಿ ಕೇಳಿ ಆಘಾತದಲ್ಲಿದ್ದ ತಾಯಿ, ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಸಾವನ್ನಪ್ಪಿದ್ದಾರೆ.
ತನ್ನ ಸ್ನೇಹಿತರ ಜೊತೆ ಜಗಳವಾಡಿಕೊಂಡಿದ್ದ ಮಗ ಸಾವಿನ ದಾರಿ ಹುಡುಕುತ್ತಾನೆ. ಆಗ ಆತ ಮನೆಯಲ್ಲಿ ನೇಣು ಬಿಗಿದುಕೊಳ್ಳುತ್ತಾನೆ. ವಿಚಾರ ತಿಳಿದ ತಕ್ಷಣ ಮಗನನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ತಾಯಿ ಲೀಲಾವತಿ ಆಸ್ಪತ್ರೆಯಿಂದ ಹೊರಬರುತ್ತಾಳೆ. ಈ ವೇಳೆ ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟಿದ್ದಾಳೆ. ಆತ್ಮಹತ್ಯೆ ಪ್ರಕರಣ ಸದ್ಯ ವಿಜಯನಗರ ಠಾಣೆಯಲ್ಲಿ ದಾಖಲಾಗಿದ್ದು, ಲೀಲಾವತಿ ಸಾವು ಪ್ರಕರಣ ವಿಜಯನಗರ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
ಡಿಸ್ಟರ್ಬ್ ಮಾಡ್ಬೇಡ ಅಮ್ಮ ಎಂದ ಮಗ ನೇಣಿಗೆ ಶರಣು ಆನ್ಲೈನ್ ಕ್ಲಾಸ್ ನಡೆಯುತ್ತಿದೆ ತೊಂದರೆ ಮಾಡಬೇಡ ಅಮ್ಮ ಎಂದು ರೂಮಿಗೆ ಹೋದ ವಿದ್ಯಾರ್ಥಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ. ಈ ಘಟನೆ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್ ನಿವಾಸಿ ಗುರುಚರಣ್ ಉಡುಪಾ(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದ. ಕಳೆದ ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಆನ್ಲೈನ್ ಕ್ಲಾಸ್ ಎಂದು ಮನೆಯ ಕೋಣೆಗೆ ಹೋಗಿದ್ದ ವಿದ್ಯಾರ್ಥಿ ರೂಮ್ ಲಾಕ್ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ
ಕಲಬುರಗಿ: ಪರಿಸರ ಪ್ರಿಯ ಗಣಪನ ಮೂರ್ತಿ ರಚನೆ; ರಾಸಾಯನಿಕ ಬಣ್ಣ ಬಳಕೆಗೆ ಬ್ರೇಕ್
ಸೂಪರ್ ಮಾರ್ಕೆಟ್ನಲ್ಲಿ ಶಾಪಿಂಗ್ಗಾಗಿ ಹೋದವರಿಗೆ ಕಂಡಿದ್ದು ಹೆಬ್ಬಾವು! ಗ್ರಾಹಕರು ಕಂಗಾಲು
(A mother who was in shock at death of her son has died in an accident at vijayanagara)
Published On - 12:50 pm, Wed, 18 August 21