ಕಲಬುರಗಿ: ಪರಿಸರ ಪ್ರಿಯ ಗಣಪನ ಮೂರ್ತಿ ರಚನೆ; ರಾಸಾಯನಿಕ ಬಣ್ಣ ಬಳಕೆಗೆ ಬ್ರೇಕ್

ಕಲಬುರಗಿ ಜಿಲ್ಲೆಯ ಜನರಿಗೆ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳು ಸಿಗುತ್ತಿರಲಿಲ್ಲ. ಹೀಗಾಗಿ ಸಂಗಮೇಶ್ ಮತ್ತು ಅವರ ತಂಡ, ತಾವೇ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ಸಿದ್ಧರಾಗಿದ್ದಾರೆ.

ಕಲಬುರಗಿ: ಪರಿಸರ ಪ್ರಿಯ ಗಣಪನ ಮೂರ್ತಿ ರಚನೆ; ರಾಸಾಯನಿಕ ಬಣ್ಣ ಬಳಕೆಗೆ ಬ್ರೇಕ್
ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿ
Follow us
TV9 Web
| Updated By: preethi shettigar

Updated on: Aug 18, 2021 | 12:41 PM

ಕಲಬುರಗಿ: ಇತ್ತೀಚೆಗೆ ನಮ್ಮ ಪರಿಸರ ಅತಿಯಾದ ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಣ್ಣಗಳಿಂದ ಹಾಳಾಗಿ ಹೋಗುತ್ತಿದೆ. ಹವಾಮಾನ ವೈಪರಿತ್ಯದಿಂದ ಪರಿಸರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಗಣೇಶನ ಹಬ್ಬ ಬಂದರೆ ಪ್ಯಾರಿಸ್ ಪ್ಲಾಸ್ಟರ್​ನಿಂದ ಮಾಡಿದ ಗಣೇಶನ ಮೂರ್ತಿಗಳ ಬಳಕೆಯಿಂದ ಪರಿಸರ ಮತ್ತಷ್ಟು ಹಾಳಾಗುತ್ತದೆ. ಇದಕ್ಕೆ ತಡೆವೊಡ್ಡಲು ಕಲಬುರಗಿಯಲ್ಲಿ ಸ್ವಗ್ರಾಮ ಸಂಸ್ಥೆಯ ಸಿಬ್ಬಂದಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸಾವಿರಾರು ಮಣ್ಣಿನ ಗಣೇಶನ ಮೂರ್ತಿಗಳನ್ನು ಸಿದ್ಧಗೊಳಿಸಿದ್ದು, ಗಣೇಶನ ಹಬ್ಬಕ್ಕೆ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪರಿಸರ ಪ್ರಿಯ ಗಣೇಶನ ಮೂರ್ತಿಗಳನ್ನು ನೀಡಲು ಸಿದ್ಧರಾಗಿದ್ದಾರೆ.

ಕಲಬುರಗಿ ನಗರದ ಬ್ರಹ್ಮಪುರದಲ್ಲಿರುವ ಸ್ವಗ್ರಾಮ ಮಣ್ಣಿನ ಉತ್ಪನ್ನಗಳ ಕೇಂದ್ರದಲ್ಲಿ ಮಣ್ಣಿನಿಂದ ಮಾಡಿರುವ ಅನೇಕ ವಸ್ತುಗಳಿವೆ. ಇಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ತೀರಾ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡಲಾಗುತ್ತದೆ. ಮಣ್ಣಿಗೆ ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪರಿಸರಕ್ಕೆ ಹಾನಿಯಾಗುವ ಯಾವುದೇ ವಸ್ತುಗಳನ್ನು ಬಳಸದೆ, ಶುದ್ಧ ಮಣ್ಣಿನಲ್ಲಿ ಅನೇಕ ರೀತಿಯ ವಸ್ತುಗಳನ್ನು ತಯಾರಿಸಿ ನೀಡಲಾಗುತ್ತದೆ.

ಇದೀಗ ಈ ಸಂಸ್ಥೆಯ ಸಂಗಮೇಶ್ ಅವರು ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅದೇನೆಂದರೆ ಈ ಬಾರಿ ಕಲಬುರಗಿ ಜಿಲ್ಲೆಯ ಜನರಿಗೆ ಮಣ್ಣಿನಲ್ಲಿಯೇ ಸಿದ್ಧವಾಗಿರುವ ಗಣೇಶನ ಮೂರ್ತಿಗಳನ್ನು ನೀಡಬೇಕು ಎನ್ನುವುದು. ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವರ್ಷ ಹಬ್ಬ ಬಂದಾಗ ಕೂಡಾ ಪ್ಲಾಸ್ಟರ್ ಆಪ್ ಪ್ಯಾರಿಸ್​ನಿಂದ ಮಾಡಿದ ಗಣೇಶನ ಮೂರ್ತಿಗಳ ಅಬ್ಬರ ಜೋರಾಗಿರುತ್ತದೆ. ನೀರಲ್ಲಿ ಕರಗದ ಈ ವಸ್ತುಗಳು ಮತ್ತು ರಾಸಾಯನಿಕಗಳಿಂದ ಮಾಡಿದ್ದ ಗಣೇಶನ ಮೂರ್ತಿಗಳನ್ನು ವಿಸರ್ಜಿಸಿದ ಮೇಲೆ ಅವುಗಳನ್ನು ನೀರಿನ ಹೊಂಡದಿಂದ ತೆಗೆದು ಬೇರಡೆ ಸಾಗಿಸಲು ಪಾಲಿಕೆ ಸಿಬ್ಬಂದಿಗಳು ಹರಸಾಹಸ ಪಡುತ್ತಾರೆ. ಜೊತೆಗೆ ಪರಿಸರದ ಮೇಲೆ ಇವು ಸಾಕಷ್ಟು ದುಷ್ಪರಿಣಾಮ ಬೀರುತ್ತಿವೆ.

ಕಡಿಮೆ ಬೆಲೆಗೆ ಸಿಗುವ ಪ್ಲಾಸ್ಟರ್ ಆಪ್ ಪ್ಯಾರಿಸ್​ನ ಗಣೇಶನ ಮೂರ್ತಿಗಳನ್ನು ಹೆಚ್ಚಿನ ಜನರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಇದಕ್ಕೆ ಕಾರಣ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳಿಗೆ ಹೆಚ್ಚಿನ ಬೆಲೆ ಮತ್ತು ಸುಲಭವಾಗಿ ಸಿಗುವುದಿಲ್ಲ ಎನ್ನುವುದಾಗಿದೆ. ಹೀಗಾಗಿ ಜಿಲ್ಲೆಯ ಜನರಿಗೆ ಇದೀಗ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ನೀಡಲು ಸ್ವಗ್ರಾಮ ಸಂಸ್ಥೆ, ಕಲಬುರಗಿ ನಗರದಲ್ಲಿಯೇ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಗ್ರಾಮ ಸ್ವರಾಜ್ಯ ಕೇಂದ್ರ ಸ್ಥಾಪಕ ಸಂಗಮೇಶ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಜನರಿಗೆ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳು ಸಿಗುತ್ತಿರಲಿಲ್ಲ. ಹೀಗಾಗಿ ಸಂಗಮೇಶ್ ಮತ್ತು ಅವರ ತಂಡ, ತಾವೇ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ಸಿದ್ಧರಾಗಿದ್ದಾರೆ. ಬೆಳಗಾವಿಯಿಂದ ಗಣೇಶನ ಮೂರ್ತಿಗೆ ಬೇಕಾದ ಮಣ್ಣನ್ನು ತರಿಸಿ, ಅದನ್ನು ಇಲ್ಲಿಯೇ ಹದ ಮಾಡಿ, ಅದರಿಂದ ಮಣ್ಣಿನ ಗಣೇಶನ ಮೂರ್ತಿಗಳನ್ನು ಸಿದ್ದಗೊಳಿಸುತ್ತಿದ್ದಾರೆ.

ಪ್ರತಿನಿತ್ಯ ಮೂವತ್ತು ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೊನಾದಿಂದ ಅನೇಕರು ಕೆಲಸಕ್ಕಾಗಿ ಪರದಾಡುತ್ತಿದ್ದಾಗ, ಅಂತಹವರು ಕರೆತಂದು ಅವರಿಗೆ ಕೆಲಸ ನೀಡಲಾಗಿದೆ. ಇದೀಗ ಹದಿನೈದು ಸಾವಿರಕ್ಕೂ ಹೆಚ್ಚು ಮಣ್ಣಿನ ಗಣೇಶನ ಮೂರ್ತಿಗಳನ್ನು ಸಿದ್ಧಗೊಳಿಸಲಾಗಿದೆ. ಬೇಡಿಕೆ ಬಂದರೆ ಇನ್ನು ಕೂಡಾ ಹೆಚ್ಚಿನ ಮೂರ್ತಿಗಳನ್ನು ತಯಾರಿಸಲು ತಂಡ ಸಿದ್ಧವಾಗಿದೆ. ಇನ್ನು ಇವರು ಯಾವುದೇ ಲಾಭದ ಆಸೆಗಾಗಿ ಇಂತಹದೊಂದು ಕೆಲಸ ಮಾಡುತ್ತಿಲ್ಲಾ. ಪರಿಸರ ಹಾಳಾಗಬಾರದು. ಸ್ವಚ್ಛ ಪರಿಸರ ಇರಬೇಕು ಎನ್ನುವುದು ಇವರ ಉದ್ದೇಶವಾಗಿದೆ.

ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ನೀರಲ್ಲಿ ವಿಸರ್ಜಿಸಿದಾಗ, ಅವು ಸುಲಭವಾಗಿ ಖರಗುತ್ತವೆ. ಇನ್ನು ರಾಸಾಯನಿಕ ಬಣ್ಣವನ್ನು ಬಳಸದೇ ಇರುವುದರಿಂದ ನೀರಿಗೂ ಕೆಮಿಕಲ್ ಮಿಶ್ರಣವಾಗುವುದಿಲ್ಲ. ಇದರಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ. ಹೀಗಾಗಿ ಯಾವುದೇ ಲಾಭವನ್ನು ಗಳಿಸಿದೇ, ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ಸಿದ್ಧಗೊಳಿಸಲು ಖರ್ಚಾದ ಹಣವನ್ನು ಮಾತ್ರ ಗ್ರಾಹಕರಿಂದ ಪಡೆದು, ಅವರಿಗೆ ನೀಡಲು ಮುಂದಾಗಿದ್ದಾರೆ. ಇನ್ನು ಸ್ವಗ್ರಾಮ ತಂಡದ ಕೆಲಸಕ್ಕೆ ಜಿಲ್ಲೆಯ ಜನರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಬುರಗಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ: ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತರಲು ಗುದುಗಿನ ಹುಗ್ಗಿ ಮಾಡಿ

ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು; ಅತಂತ್ರ ಸ್ಥಿತಿಯಲ್ಲಿ ಕಲೆಗಾರರು

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್