ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು; ಅತಂತ್ರ ಸ್ಥಿತಿಯಲ್ಲಿ ಕಲೆಗಾರರು

ಕೊರೊನಾ ಸಂದಿಗ್ಧ ಕಾಲದಲ್ಲಿ ಚಿತ್ರದುರ್ಗದ ಗಣಪತಿ ತಯಾರಕರ ಬದುಕು ಸಂಕಷ್ಟಕ್ಕೆ ಗುರಿಯಾಗಿದೆ. ಬಹುತೇಕ ಗಣಪತಿ ತಯಾರಕರು ಬೇಡಿಕೆ ಇಲ್ಲದೆ ಗಣೇಶ ಮೂರ್ತಿಗಳನ್ನು ತಯಾರಿಸಿಡುವುದೋ ಅಥವಾ ಬೇಡವೋ ಎಂಬ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು; ಅತಂತ್ರ ಸ್ಥಿತಿಯಲ್ಲಿ ಕಲೆಗಾರರು
ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು
Follow us
TV9 Web
| Updated By: preethi shettigar

Updated on: Aug 17, 2021 | 7:45 AM

ಚಿತ್ರದುರ್ಗ: ಕೊರೊನಾ ಕಾಲದಲ್ಲಿ ಎರಡು ವರ್ಷಗಳಿಂದ ಗಣೇಶೋತ್ಸವ ಕಳೆಗುಂದಿದೆ. ಗಣಪತಿ ತಯಾರಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಒಂದು ಕಡೆ ಹಿರಿಕರು ಮಾಡಿಕೊಂಡು ಬಂದಿರುವ ಸಾಂಪ್ರದಾಯಿಕ ಕಸುಬು ಬಿಟ್ಟಿರಲಾಗದು. ಮತ್ತೊಂದು ಕಡೆ ಬೇಡಿಕೆಯೇ ಇಲ್ಲದೆ ಗಣಪತಿ ತಯಾರಿಸಿದರೆ ಪ್ರಯೋಜನವೇನು ಎಂಬ ಅತಂತ್ರ ಸ್ಥಿತಿ ಗಣೇಶನ ಮೂರ್ತಿ ತಯಾರಕರದ್ದಾಗಿದೆ.

ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಉತ್ಸವ ಇಡೀ ದೇಶದ ಗಮನ ಸೆಳೆಯುತ್ತಿತ್ತು. ಪ್ರತಿ ಗ್ರಾಮ, ಪ್ರತಿ ಬಡಾವಣೆಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಗಣೇಶ ಉತ್ಸವದ ಹುಮ್ಮಸ್ಸು ಈಗಲೂ ಇದೆ. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಭೀತಿಯಿಂದ ಗಣೇಶ ಹಬ್ಬ ಕಳೆಗುಂದಿದೆ. ಅಂತೆಯೇ ಕೊರೊನಾ ಸಂದಿಗ್ಧ ಕಾಲದಲ್ಲಿ ಚಿತ್ರದುರ್ಗದ ಗಣಪತಿ ತಯಾರಕರ ಬದುಕು ಸಂಕಷ್ಟಕ್ಕೆ ಗುರಿಯಾಗಿದೆ. ಬಹುತೇಕ ಗಣಪತಿ ತಯಾರಕರು ಬೇಡಿಕೆ ಇಲ್ಲದೆ ಗಣೇಶ ಮೂರ್ತಿಗಳನ್ನು ತಯಾರಿಸಿಡುವುದೋ ಅಥವಾ ಬೇಡವೋ ಎಂಬ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಬೇಡಿಕೆ ಕುಸಿತ ಇಷ್ಟೊತ್ತಿಗಾಗಲೇ ಗಣಪತಿ ತಯಾರಕರ ಮನೆ ಮಂದಿಗೆಲ್ಲ ಕೈತುಂಬ ಕೆಲಸ ಇರುತ್ತಿತ್ತು. ನೂರಾರು ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿರುತ್ತಿತ್ತು. ಕಳೆದ ಎರಡು ವರ್ಷಗಳಿಂದ ಈ ಪರಿಸ್ಥಿತಿ ಬದಲಾಗಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ, ದೊಡ್ಡ ಗಣೇಶ ಮೂರ್ತಿಗಳಿಗೆ ನಿರ್ಬಂಧ ಹಿನ್ನೆಲೆ ಗಣೇಶ ಮೂರ್ತಿಗಳ ಬೇಡಿಕೆ ಕುಸಿದಿದೆ. ಗಣೇಶ ಹಬ್ಬಕ್ಕೂ ಎರಡು ತಿಂಗಳು ಮೊದಲೇ ಮೂರ್ತಿಗಳಿಗೆ ಬೇಡಿಕೆ ಬಂದಿರುತ್ತಿತ್ತು. ಆದರೆ, ಕೆಲ ದಿನಗಳೇ ಉಳಿದಿದ್ದರೂ ಸಹ ಈಗಲೂ ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿಲ್ಲ. ಅತಂತ್ರ ಸ್ಥಿತಿಗೆ ಸಿಲುಕಿರುವ ಗಣಪತಿ ತಯಾರಕರು ಸಾಂಪ್ರದಾಯಿಕ ವೃತ್ತಿ ಕೈಬಿಡಬಾರದೆಂಬ ಕಾರಣಕ್ಕೆ ಪುಟ್ಟ ಪುಟ್ಟ ಗಣೇಶ ಮೂರ್ತಿಗಳನ್ನು ತಯಾರಿಸಿಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಸಿದ್ದೇಶ್ ಕಲೆಗೆ ಹೆಚ್ಚು ಬೇಡಿಕೆ ದೊಡ್ಡಪೇಟೆ ಬಡಾವಣೆಯ ರಾಜಬೀದಿಯಲ್ಲಿ ಗಣೇಶೋತ್ಸವ ವೇಳೆ ಗಣೇಶ ಮೂರ್ತಿಗಳ ಭರಾಟೆ ಜೋರಾಗಿರುತ್ತದೆ. ಕಲಾವಿದ ಸಿದ್ದೇಶ್ ಕೈಯಲ್ಲಿ ಅರಳಿದ ಗಣೇಶ ಮೂರ್ತಿಗಳಿಗೆ ಅದರದ್ದೇ ಆದ ಬೇಡಿಕೆ ಇರುತ್ತದೆ. ಪುಟ್ಟ ಗಣಪನಿಂದ ಹಿಡಿದು ಆಳೆತ್ತರದ ಗಣಪನವರೆಗೆ ತಯಾರಿಸಿ ಗಣಪತಿ ಮಂಡಳಿಗಳಿಗೆ ನೀಡುತ್ತಾರೆ. ಆನೆ, ಸಿಂಹ, ನಂದಿ ಮೇಲೆ ಕುಳಿತ ಗಣಪನಿಂದ ಹಿಡಿದು ಸಮಕಾಲೀನ ಸಂದರ್ಭದ ಸಂದೇಶ ಸಾರುವ ವಿಭಿನ್ನ ಗಣೇಶನ ರೂಪವೂ ಈ ಕಲಾವಿದನ ಕೈಯಲ್ಲಿ ಅರಳುತ್ತದೆ.

ಸಿದ್ದೇಶ ತಮ್ಮ ಕುಟುಂಬ ಮತ್ತಿತರರ ಸಹಾಯ ಪಡೆದುಕೊಂಡು ಪ್ರತಿ ವರ್ಷ ಸುಮಾರು ಒಂದು ಸಾವಿರ ಗಣಪತಿಗಳನ್ನು ತಯಾರಿಸುತ್ತಾರೆ. ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ ಇತರೆ ಜಿಲ್ಲೆಯವರೂ ಗಣೇಶ ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ. ಅಷ್ಟೇ ಅಲ್ಲದೇ ಕೆಲವರು ವಿದೇಶಕ್ಕೆ ಹೋಗುವವರು ಸಹ ಪುಟ್ಟ ಗಣೇಶ ಮೂರ್ತಿಯನ್ನು ಕೊಂಡೊಯ್ಯುತ್ತಾರೆ.  ವಿದೇಶದಲ್ಲಿ ನೆಲಿಸಿರುವ ಬಂಧುಗಳ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿ ಬರುತ್ತಾರೆ. ಪ್ರತಿ ವರ್ಷ 10-15 ಗಣೇಶ ಮೂರ್ತಿಗಳು ವಿದೇಶಕ್ಕೆ ಕೊಂಡೊಯ್ದ ಉದಾಹರಣೆಗಳಿವೆ.

ವಿದೇಶಕ್ಕೆ ಸ್ವದೇಶಿ ಗಣಪ ಚಿತ್ರದುರ್ಗ ನಗರದ ಚನ್ನಬಸ್ಸಪ್ಪ ಕಂಪೌಂಡ್‌ ನಿವಾಸಿ ಸೌಭಾಗ್ಯಮ್ಮ ಅವರ ಪುತ್ರ ವಿನಯ್ ಯುಎಸ್​ನಲ್ಲಿ ವಾಸವಾಗಿದ್ದಾರೆ. ವಿನಯ್​ಗೆ ಇಬ್ಬರು ಅವಳಿ ಜವಳಿ ಮಕ್ಕಳಿದ್ದಾರೆ. ವಿನಯ್ ತಾಯಿ ಗಣೇಶ ಹಬ್ಬದ ವೇಳೆ ಮಗ ಮತ್ತು ಮೊಮ್ಮಕ್ಕಳನ್ನು ಕಾಣಲು ವಿದೇಶಕ್ಕೆ ತೆರಳುತ್ತಾರೆ. ಜತೆಗೆ ಗಣೇಶ ಮೂರ್ತಿಯನ್ನು ಕೊಂಡೊಯ್ಯುವ ನಿರ್ಧಾರ ಮಾಡಿದ್ದಾರೆ. ಅಂತೆಯೇ ಗಣಪತಿ ತಯಾರಕ‌ ಸಿದ್ದೇಶ ಬಳಿ ಪುಟ್ಟ ಗಣಪ ತಯಾರಿಸುವಂತೆ ಸೂಚಿಸಿ ತೆಗೆದುಕೊಂಡು ಹೋಗಿದ್ದಾರೆ.

ಮಗ ಮತ್ತು ಮೊಮ್ಮಕ್ಕಳನ್ನು ನೋಡಲು ವಿದೇಶಕ್ಕೆ ಹೊರಟಿದ್ದೇನೆ. ಈ ಸಂದರ್ಭದಲ್ಲಿ ಪರಿಸರ ಗಣೇಶ ಮೂರ್ತಿಗಿಂತ ಉತ್ತಮ ಉಡುಗೊರೆ ಮತ್ತೊಂದು ಕೊಡಲು ಸಾಧ್ಯವಿಲ್ಲ ಎಂದು ಅನಿಸಿತು. ಮಕ್ಕಳ ಜತೆಗೆ ಗಣೇಶ ಹಬ್ಬ ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಪರಿಚಯಿಸುವ ಉದ್ದೇಶವಿದೆ. ಅಂತೆಯೇ ಮೊಮ್ಮಕ್ಕಳು ತುಂಬಾ ಖುಷಿ ಪಡುತ್ತಾರೆ ಎಂಬ ಭರವಸೆ ಇದೆ ಎಂದು ಸೌಭಾಗ್ಯಮ್ಮ ಹೇಳಿದ್ದಾರೆ.

ಗಣಪತಿ ತಯಾರಕರಿಗೆ ಕೊರೊನಾ ಕಾಲದಲ್ಲಿ ತೀವ್ರ ಸಂಕಷ್ಟ ಎದುರಾಗಿದೆ. ಸರ್ಕಾರ ಗಣೇಶ ಹಬ್ಬಕ್ಕೆ ಏನೆಲ್ಲಾ ನಿರ್ಬಂಧ ವಿಧಿಸಿದೆ ಎಂಬುವುದರ ಬಗ್ಗೆ ನಮಗೆ ಸರಿಯಾದ ಮಾಹಿತಿ‌ ಇಲ್ಲ. ಬೇಡಿಕೆ ಇಲ್ಲದ ಕಾರಣ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ತಯಾರಿಸಿಲ್ಲ. ಈವರೆಗೆ ಬೆರಳೆಣಿಕೆಯಷ್ಟು ಮಾತ್ರ ಬೇಡಿಕೆ ಬಂದಿದೆ. ಒಬ್ಬರು ಮಾತ್ರ ವಿದೇಶಕ್ಕೆ ಗಣೇಶನನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ಗಣಪ ಈ ಕೊರೊನಾ ಸಂಕಷ್ಟ ದೂರಾಗಿಸಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ ಎಂದು ಗಣೇಶ ಮೂರ್ತಿ ತಯಾರಕರಾದ ಸಿದ್ದೇಶ ತಿಳಿಸಿದ್ದಾರೆ.

ವರದಿ: ಬಸವರಾಜ ಮುದನೂರ್

ಇದನ್ನೂ ಓದಿ: ಬಾಗಲಕೋಟೆ ರೈತರಲ್ಲಿ ಆತಂಕ; ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಟೊಮ್ಯಾಟೊ ಬೆಳೆಗಾರ

Udupi: ಉಡುಪಿಯಲ್ಲಿ 2 ಕೋಟಿ ವೆಚ್ಚದ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ; ಕಾರಣ ಕೇಳಿದರೆ ಆಶ್ಚರ್ಯ ಪಡ್ತೀರ!

ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್