Udupi: ಉಡುಪಿಯಲ್ಲಿ 2 ಕೋಟಿ ವೆಚ್ಚದ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ; ಕಾರಣ ಕೇಳಿದರೆ ಆಶ್ಚರ್ಯ ಪಡ್ತೀರ!

ಉಡುಪಿ: ಆಗಾಗ ಕೋಮುಗಲಭೆಗಳಿಂದ ಸುದ್ದಿಯಾಗುತ್ತಲೇ ಇರುವ ಉಡುಪಿ ಮತ್ತು ಮಂಗಳೂರಿನಲ್ಲಿ ಎಲ್ಲ ಧರ್ಮೀಯರೂ ಇದ್ದಾರೆ. ಹಿಂದೂ, ಮುಸ್ಲಿ. ಕ್ರೈಸ್ತ, ಜೈನ ಧರ್ಮೀಯರು ಸಹಬಾಳ್ವೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಈ ಕೋಮುಸೌಹಾರ್ದತೆಗೆ ಮತ್ತೊಂದು ಉದಾಹರಣೆಯೆಂಬಂತೆ ಉಡುಪಿ ಜಿಲ್ಲೆಯ ಶಿರ್ವ ಎಂಬಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಉದ್ಯಮಿಯೊಬ್ಬರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಿವಿನಾಯಕ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಈ ವಿಚಾರ ವಿಶೇಷವಾಗುವುದಕ್ಕೆ ಇನ್ನೂ ಒಂದು ಕಾರಣವಿದೆ. ಈ ದೇವಸ್ಥಾನವನ್ನು ಕಟ್ಟಿಸಿದ ಉದ್ಯಮಿ ಕ್ರೈಸ್ತ ಧರ್ಮಕ್ಕೆ ಸೇರಿದವರು! ಮುಂಬೈನಲ್ಲಿ ನೆಲೆಸಿರುವ ಉಡುಪಿಯ ಶಿರ್ವದ […]

Udupi: ಉಡುಪಿಯಲ್ಲಿ 2 ಕೋಟಿ ವೆಚ್ಚದ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ; ಕಾರಣ ಕೇಳಿದರೆ ಆಶ್ಚರ್ಯ ಪಡ್ತೀರ!
ಉಡುಪಿಯಲ್ಲಿ ನಿರ್ಮಿಸಿರುವ 2 ಕೋಟಿ ವೆಚ್ಚದ ಗಣೇಶ ದೇವಸ್ಥಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 23, 2021 | 6:36 PM

ಉಡುಪಿ: ಆಗಾಗ ಕೋಮುಗಲಭೆಗಳಿಂದ ಸುದ್ದಿಯಾಗುತ್ತಲೇ ಇರುವ ಉಡುಪಿ ಮತ್ತು ಮಂಗಳೂರಿನಲ್ಲಿ ಎಲ್ಲ ಧರ್ಮೀಯರೂ ಇದ್ದಾರೆ. ಹಿಂದೂ, ಮುಸ್ಲಿ. ಕ್ರೈಸ್ತ, ಜೈನ ಧರ್ಮೀಯರು ಸಹಬಾಳ್ವೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಈ ಕೋಮುಸೌಹಾರ್ದತೆಗೆ ಮತ್ತೊಂದು ಉದಾಹರಣೆಯೆಂಬಂತೆ ಉಡುಪಿ ಜಿಲ್ಲೆಯ ಶಿರ್ವ ಎಂಬಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಉದ್ಯಮಿಯೊಬ್ಬರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಿವಿನಾಯಕ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಈ ವಿಚಾರ ವಿಶೇಷವಾಗುವುದಕ್ಕೆ ಇನ್ನೂ ಒಂದು ಕಾರಣವಿದೆ. ಈ ದೇವಸ್ಥಾನವನ್ನು ಕಟ್ಟಿಸಿದ ಉದ್ಯಮಿ ಕ್ರೈಸ್ತ ಧರ್ಮಕ್ಕೆ ಸೇರಿದವರು!

ಮುಂಬೈನಲ್ಲಿ ನೆಲೆಸಿರುವ ಉಡುಪಿಯ ಶಿರ್ವದ 77 ವರ್ಷದ ಕ್ರೈಸ್ತ ಉದ್ಯಮಿ ಗೇಬ್ರಿಯೆಲ್ ನಜರೆತ್ ತಮ್ಮ ಮನೆಯ ಬಳಿ ಇರುವ ಸ್ವಂತ ಜಮೀನಿನಲ್ಲಿ ಬೃಹತ್ ಗಣಪತಿ ದೇವಸ್ಥಾನವನ್ನು ಕಟ್ಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣವೇನೆಂದು ತಿಳಿದರೆ ಇನ್ನಷ್ಟು ಅಚ್ಚರಿಯಾಗುವುದು ಖಚಿತ. ಗೇಬ್ರಿಯೆಲ್ ಅವರು ತಮ್ಮ ತಂದೆ-ತಾಯಿಯ ನೆನಪಿನಲ್ಲಿ ಈ ಗಣಪತಿ ದೇವಸ್ಥಾನವನ್ನು ಕಟ್ಟಿಸಿ, ಅದನ್ನು ಹಿಂದೂಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಗೇಬ್ರಿಯೆಲ್ ಅವರ ತಂದೆ ಫ್ಯಾಬಿಯನ್ ಸೆಬಾಸ್ಟಿಯನ್ ನಜರೆತ್ ಮತ್ತು ತಾಯಿ ಸಬೀನಾ ನಜರೆತ್ ಅವರಿಂದ ಬಂದ ಜಮೀನಿನಲ್ಲಿ ಗಣಪತಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.

60 ವರ್ಷಗಳ ಹಿಂದೆ ನಾನು ಗಣಪತಿಯ ಭಕ್ತನಾದೆ. ಅಂದಿನಿಂದ ನನಗೆ ಗಣಪತಿ ಎಲ್ಲವನ್ನೂ ಒಳ್ಳೆಯದೇ ಮಾಡಿದ್ದಾನೆ. 1959ರಲ್ಲಿ ನಾನು ಎಸ್‌ಎಸ್‌ಎಲ್​ಸಿ ಮುಗಿಸಿ ಉದ್ಯೋಗ ಹುಡುಕಿಕೊಂಡು ಮುಂಬೈಗೆ ಹೋದೆ. ಆಗ ನನಗೆ ಕೇವಲ 14 ವರ್ಷವಾಗಿತ್ತು. ಆಗ ಮುಂಬೈನ ಪ್ರಭಾದೇವಿ ಬಳಿ ಉಳಿದುಕೊಂಡಿದ್ದೆ. ಅಲ್ಲೇ ಒಂದು ಸಿದ್ಧಿ ವಿನಾಯಕನ ದೇವಸ್ಥಾನವಿತ್ತು. ದಿನವೂ ಕೆಲಸ ಹುಡುಕಲು ಹೋಗುವಾಗ ಆ ದೇವಸ್ಥಾನಕ್ಕೆ ನಮಸ್ಕಾರ ಮಾಡಿ ಹೋಗುತ್ತಿದ್ದೆ. ಆತನಿಂದಲೇ ನಾನಿಂದು ಇಷ್ಟು ದೊಡ್ಡ ಉದ್ಯಮಿಯಾಗಿದ್ದೇನೆ ಎಂದು ಗೇಬ್ರಿಯೆಲ್ ತಾವು ಗಣಪತಿ ದೇವಸ್ಥಾನವನ್ನು ಕಟ್ಟಿಸಿದ ಹಿಂದಿನ ಕತೆಯನ್ನು ಹೇಳಿದ್ದಾರೆ.

ಗಣಪತಿ ದೇವಸ್ಥಾನ ಕಟ್ಟಿಸಿದ ಉದ್ಯಮಿ ಗೇಬ್ರಿಯೆಲ್

10ನೇ ತರಗತಿ ಮುಗಿಸಿ, ಮುಂಬೈನಲ್ಲಿ ಉದ್ಯೋಗ ಅರಸುತ್ತಿದ್ದ ಗೇಬ್ರಿಯೆಲ್ ಬಳಿಕ ಮೆಟಲ್ ಡೈಯ್ಯಿಂಗ್ ವರ್ಕ್​ಶಾಪ್ ಆರಂಭಿಸಿದರು ಅದರಲ್ಲಿ ಯಶಸ್ಸು ಕಂಡ ಅವರು ನಂತರ ಮೂರು ಕಡೆ ತಮ್ಮ ವರ್ಕ್​ಶಾಪ್ ಅನ್ನು ತೆರೆದರು. ಇದೀಗ ಅವರು ಯಶಸ್ವಿ ಉದ್ಯಮಿಯಾಗಿದ್ದಾರೆ. ಈಗ ಗಣಪತಿ ದೇವಸ್ಥಾನವನ್ನು ನಿರ್ಮಿಸಿರುವ ಜಾಗದಲ್ಲಿಯೇ ಮೊದಲು ಗೇಬ್ರಿಯೆಲ್ ಅವರ ಮನೆಯಿತ್ತು. ಆ ಮನೆಯನ್ನು ಕಿತ್ತು ಆ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ನನ್ನ ಯಶಸ್ಸಿಗೆ ಕಾರಣವಾದ ಗಣೇಶನಿಗಾಗಿ ಒಂದು ಗುಡಿ ಕಟ್ಟುವ ಬಯಕೆಯಿತ್ತು. ನನ್ನ ತಂದೆ-ತಾಯಿ ವಾಸವಾಗಿದ್ದ ಸ್ಥಳದಲ್ಲೇ ಅವರ ನೆನಪಿಗಾಗಿ ಈ ದೇವಸ್ಥಾನವನ್ನು ಕಟ್ಟಿಸಿದ್ದೇನೆ ಎಂದು ಗೇಬ್ರಿಯೆಲ್ ಹೇಳಿದ್ದಾರೆ.

ಯಾರ ಬಳಿಯೂ ದೇಣಿಗೆ ಸಂಗ್ರಹ ಮಾಡದೆ ತಾವೇ ದುಡಿದ 2 ಕೋಟಿ ರೂ. ಹಣದಿಂದ ಗೇಬ್ರಿಯೆಲ್ ಈ ದೇವಾಲಯವನ್ನು ಕಟ್ಟಿಸಿದ್ದಾರೆ. ಈ ನೂತನ ಸಿದ್ಧಿವಿನಾಯಕ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪು ಬಣ್ಣದ 36 ಇಂಚಿನ ಗಣಪತಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇವಾಲಯದ ಬಳಿ ದೇವಾಲಯದ ಅರ್ಚಕರಿಗೆ ಒಂದು ಮನೆಯನ್ನು ಸಹ ನಿರ್ಮಿಸಲಾಗಿದೆ. ದೇವಾಲಯದ ಆಡಳಿತವನ್ನು ಎಂಜಿನಿಯರ್ ನಾಗೇಶ್ ಹೆಗ್ಡೆ ಮತ್ತು ಗೇಬ್ರಿಯಲ್ ಅವರ ಸ್ನೇಹಿತರಾದ ಸತೀಶ್ ಶೆಟ್ಟಿ ಮತ್ತು ರತ್ನಕರ್ ಕುಕ್ಯಾನ್ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ನೋಡಿಕೊಳ್ಳಲಿದೆ.

ಇದನ್ನೂ ಓದಿ: Udupi Murder: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ದುಬೈನಿಂದಲೇ ಸುಪಾರಿ ಕೊಟ್ಟನಾ ಗಂಡ?

Uttara Kannada Rain: ಅಂಕೋಲದಲ್ಲಿ ಪ್ರವಾಹ ಭೀತಿ; ಹಿಚ್ಕಡ ಗ್ರಾಮದಲ್ಲಿ ಕಣ್ಣೆದುರೇ ಕುಸಿದು ಬಿತ್ತು ಎರಡಂತಸ್ತಿನ ಮನೆ

(Christian Businessman Builds Ganesha Temple In Udupi At Cost Of 2 Crore Rupees du you know Why?)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ