Bengaluru Metro Pillar Collapse: ಟ್ರಾಫಿಕ್ ಜಾಮ್ಗೆ ನನ್ನ ಸೊಸೆ, ಮೊಮ್ಮಗನ ಸಾವೇ ಕಾರಣ ಎಂಬ ಸಣ್ಣ ಸುಳಿವೂ ಇರಲಿಲ್ಲ: ವಿಜಯ್ ಕುಮಾರ್
ಎಚ್‌ಬಿಆರ್ ಲೇಔಟ್ನಲ್ಲಿ ಆಗಿರುವ ಟ್ರಾಫಿಕ್ ಜಾಮ್ಗೆ ತನ್ನ ಕುಟುಂಬದವರು ಮೃತಪಟ್ಟಿದ್ದೇ ಕಾರಣ ಎಂಬ ಸಣ್ಣ ಸುಳಿವೂ ಇರಲಿಲ್ಲ ಎಂದು ಮೃತ ತೇಜಸ್ವಿನಿ ಅವರ ಮಾವ ವಿಜಯ್ಕುಮಾರ್ ಅಳಲು ಬೇಸರ ವ್ಯಕ್ತಪಡಿಸಿದ್ದಾರೆ. ನಾಗವಾರ - ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಮಾರ್ಗ ಕಾಮಗಾರಿ ನಡೆಯುತ್ತಿತ್ತು.
ಎಚ್‌ಬಿಆರ್ ಲೇಔಟ್ನಲ್ಲಿ ಆಗಿರುವ ಟ್ರಾಫಿಕ್ ಜಾಮ್ಗೆ ತನ್ನ ಕುಟುಂಬದವರು ಮೃತಪಟ್ಟಿದ್ದೇ ಕಾರಣ ಎಂಬ ಸಣ್ಣ ಸುಳಿವೂ ಇರಲಿಲ್ಲ ಎಂದು ಮೃತ ತೇಜಸ್ವಿನಿ ಅವರ ಮಾವ ವಿಜಯ್ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ನಾಗವಾರ – ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಮಾರ್ಗ ಕಾಮಗಾರಿ ನಡೆಯುತ್ತಿತ್ತು, ನಾಗವಾರ ಬಳಿ (ಹೆಣ್ಣೂರು ಕ್ರಾಸ್) ಮೆಟ್ರೋ ಪಿಲ್ಲರ್ ನೆಲಕ್ಕೆ ಉರುಳಿತ್ತು. ಬೈಕ್ ಸವಾರರ ಮೇಲೆ ಮೆಟ್ರೋ ಪಿಲ್ಲರ್ ಕುಸಿದಿದ್ದು, ತಾಯಿ ಮಗಳ ಪ್ರಾಣಪಕ್ಷಿ ಅಲ್ಲೇ ಹಾರಿಹೋಗಿತ್ತು. ಮೆಟ್ರೋ ರೈಲಿನ ಸೆಂಟ್ರಿಂಗ್ ಸ್ಟೀಲ್ ರಾಡ್ ಕುಸಿದು ವಿಜಯ್ ಕುಮಾರ್ ಅವರ ಸೊಸೆ ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮೊಮ್ಮಗ ವಿಹಾನ್ ಸಾವನ್ನಪ್ಪಿದ್ದರು ಮತ್ತು ಅವರ ಮಗ ಲೋಹಿತ್ ಕುಮಾರ್ ಮತ್ತು ಅವರ ಮೊಮ್ಮಗಳು ಘಟನೆಯಲ್ಲಿ ಗಾಯಗೊಂಡಿದ್ದರು.
ಬೆಳಗ್ಗೆ ಲೋಹಿತ್ ತನ್ನ ಮಕ್ಕಳನ್ನು ನರ್ಸರಿ ಶಾಲೆಗೆ ಮತ್ತು ಅವರ ಪತ್ನಿಯನ್ನು ಕಚೇರಿಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ದುರಂತ ಸಂಭವಿಸಿತ್ತು. “ಪಿಲ್ಲರ್ ಕುಸಿದಿದೆ ಎಂದು ನನಗೆ ತಿಳಿದಿರಲಿಲ್ಲ. ಆಗಾಗ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು ಸಹಜ ಎಂದು ನಾನು ಭಾವಿಸಿದೆ, ಆದರೆ ಆ ಪಿಲ್ಲರ್ ನನ್ನ ಮೊಮ್ಮಗ ಹಾಗೂ ಸೊಸೆಯನ್ನು ಬಲಿತೆಗೆದುಕೊಂಡಿದೆ.
ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ನಾನು ತೀವ್ರ ದುಃಖದಲ್ಲಿದ್ದೇನೆ, ಇದು ನನಗೆ ಭರಿಸಲಾರದ ನಷ್ಟ ಎಂದು ಕುಮಾರ್ ಹೇಳಿದ್ದಾರೆ. ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿರುವಾಗ ಪಿಲ್ಲರ್ನ ಹತ್ತಿರದ ಕನಿಷ್ಠ 30 ಮೀಟರ್ಗಳವರೆಗೆ ಹೋಗಲು ಯಾರಿಗೂ ಅವಕಾಶ ನೀಡಬಾರದು, ಆದರೆ ವಾಹನಗಳು 5-10 ಅಡಿಗಳ ಒಳಗೆ ಚಲಿಸುತ್ತವೆ ಎಂದು ಕುಮಾರ್ ಆರೋಪಿಸಿದರು.
ಮೆಟ್ರೋ ಪಿಲ್ಲರ್ ದುರಂತ ಹಾಗೂ ನಗರದಲ್ಲಿ ನಡೆದ ಸಾಲು ಸಾಲು ಪ್ರತಿಭಟನೆಯಿಂದಾಗಿ ನಗರದ ಹಲವೆಡೆ ವಿಪರೀತ ಸಂಚಾರ ದಟ್ಟಣೆ ಎದುರಾಗಿ ವಾಹನ ಸವಾರರು ಕಂಗಾಲಾದ ಬೆಳವಣಿಗೆ ಮಂಗಳವಾರ ಕಂಡು ಬಂದಿತು.
ಮತ್ತಷ್ಟು ಓದಿ:Metro Pillar collapsed ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ: ಐವರ ವಿರುದ್ಧ ಕೇಸ್ ಬುಕ್
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪರವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ವಿರುದ್ಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮೆರವಣಿಗೆ ಸಾಗುತ್ತಿದ್ದ ಮೇಲ್ಸೇತುವೆ ಹಾಗೂ ಶೇಷಾದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಹೀಗಾಗಿ, ಮೆರವಣಿಗೆ ಸಾಗುತ್ತಿದ್ದ ಅವಧಿಯಲ್ಲಿ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ನಿಂತಲೇ ನಿಲ್ಲಬೇಕಾಯಿತು.
ಮೆಜೆಸ್ಟಿಕ್, ಗಾಂಧಿನಗರ, ಮೈಸೂರು ಬ್ಯಾಂಕ್ ವೃತ್ತ, ಬಸವೇಶ್ವರ ವೃತ್ತ, ಸ್ಯಾಂಕಿ ರಸ್ತೆ, ಶಿವಾನಂದ ವೃತ್ತ, ಆನಂದರಾವ್ ವೃತ್ತ, ಓಕಳಿಪುರ, ಶೇಷಾದ್ರಿಪುರ, ಮಲ್ಲೇಶ್ವರ, ರೇಸ್‌ಕೋರ್ಸ್ ರಸ್ತೆ, ಅರಮನೆ ರಸ್ತೆ, ಕೆ.ಆರ್. ವೃತ್ತ, ಕೆಂಪೇಗೌಡ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಭಾರೀ ಸಂಚಾರ ದಟ್ಟಣೆ ಕಂಡು ಬಂದಿತು.
ಎಚ್‌ಬಿಆರ್ ಲೇಔಟ್ ಮತ್ತು ಔಟರ್ ರಿಂಗ್ ರೋಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗಳ ಮೇಲೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದುಬಿದ್ದು ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದರೂ, ಈ ಘಟನೆ ಕೂಡ ಸಂಚಾರ ಅಸ್ತವ್ಯಸ್ತವಾಗುವಂತೆ ಮಾಡಿತ್ತು. ಮೆಟ್ರೋ ಪಿಲ್ಲರ್ ದುರಂತ ಬಳಿಕ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:44 am, Wed, 11 January 23