Bengaluru Metro Pillar Tragedy: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್​​ಶೀಟ್ ಸಿದ್ಧಪಡಿಸಿದ ಪೊಲೀಸರು

|

Updated on: Mar 08, 2023 | 11:04 AM

ಮೆಟ್ರೋ ಪಿಲ್ಲರ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಗೋವಿಂದಪುರ ಠಾಣೆ ಪೊಲೀಸರು ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್​​ಶೀಟ್ ಸಿದ್ಧಪಡಿಸಿದ್ದಾರೆ.

Bengaluru Metro Pillar Tragedy: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್​​ಶೀಟ್ ಸಿದ್ಧಪಡಿಸಿದ ಪೊಲೀಸರು
ಮೆಟ್ರೋ ಪಿಲ್ಲರ್​ ಕುಸಿದಿರುವುದು (ಎಡಚಿತ್ರ). ಮೃತ ತಾಯಿ ಮತ್ತು ಮಗು
Follow us on

ಬೆಂಗಳೂರು: ಮೆಟ್ರೋ ಪಿಲ್ಲರ್​ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟ ಪ್ರಕರಣಕ್ಕೆ(Bengaluru Metro Pillar Tragedy) ಸಂಬಂಧಿಸಿ ಸದ್ಯ ಗೋವಿಂದಪುರ ಠಾಣೆ ಪೊಲೀಸರು(Govindapura Police Station) ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದಾರೆ. ತನಿಖೆ ಪೂರ್ಣಗೊಳಿಸಿ ಚಾರ್ಜ್​​ಶೀಟ್(Charge Sheet) ಸಿದ್ಧಪಡಿಸಿದ್ದಾರೆ. ಪೊಲೀಸರು ಕೆಲವೇ ದಿನಗಳಲ್ಲಿ ಚಾರ್ಜ್​​ಶೀಟ್ ಸಲ್ಲಿಸಲಿದ್ದಾರೆ.

ಗೋವಿಂದಪುರ ಪೊಲೀಸರು FIRನಲ್ಲಿರುವ ಎಲ್ಲಾ 9 ಮಂದಿ ವಿರುದ್ಧ ಚಾರ್ಜ್​ಶೀಟ್ ಸಿದ್ಧಪಡಿಸಿದ್ದಾರೆ. ಐಐಟಿ ಸಲ್ಲಿಕೆ ಮಾಡಿದ ಎರಡು ವರದಿಗಳು, ಎಫ್ಎಸ್ಎಲ್ ರಿಪೋರ್ಟ್, ತಜ್ಞರ ವರದಿ ಆಧಾರದ ಮೇಲೆ ಚಾರ್ಜ್​​ಶೀಟ್ ತಯಾರಿಸಲಾಗಿದೆ. ಸೈಟ್ ಇಂಜಿನಿಯರ್​, ಮೆಟ್ರೋ ಅಧಿಕಾರಿಗಳು, ಗುತ್ತಿಗೆದಾರರು, ಸೈಟ್​​​ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಎಲ್ಲರ ವಿಚಾರಣೆ ನಡೆಸಿ ಗೋವಿಂದಪುರ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಲಿದ್ದಾರೆ.

ತಜ್ಞರ ವರದಿಗಳ ಅಭಿಪ್ರಾಯ ಪರಿಶೀಲನೆ, ಹಾಗೂ ತಾಂತ್ರಿಕವಾಗಿ ತನಿಖೆ ನಡೆಸಿ ಲೋಪಕ್ಕೆ ಕಾರಣ ಏನು? ಯಾರ ವೈಫಲ್ಯ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲಾ ಅಂಶಗಳನ್ನ ತನಿಖಾ ತಂಡ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಮೆಟ್ರೋ ಪಿಲ್ಲರ್ ರಾಡ್​ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ

ಘಟನೆ ಹಿನ್ನೆಲೆ

ಜನವರಿ 11ರಂದು ಬೆಂಗಳೂರಿನ ನಾಗವಾರದಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದ ಪರಿಣಾಮ ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮತ್ತೊಂದು ಮಗು ಹಾಗೂ ತಂದೆ ಪ್ರಾಣಾಪಾಯದಿಂದ ಪರಾಗಿದ್ದರು. ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್‌ನ ಲೋಹದ ರಾಡ್​ಗಳು ರಸ್ತೆ ಮೇಲೆ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿತ್ತು. ಇದಾದ ಬಳಿಕ ಪ್ರಕರಣ ಕೈಗೆತ್ತಿಕೊಂಡ ಗೋವಿಂದಪುರ ಠಾಣೆ ಪೊಲೀಸರು ಮೂರು ಹಂತಗಳಲ್ಲಿ ತನಿಖೆ ನಡೆಸಿ ಸದ್ಯ 9 ಜನರ ವಿರುದ್ಧ ಚಾರ್ಜ್​​ಶೀಟ್ ಸಿದ್ದಪಡಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:54 am, Wed, 8 March 23